• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ: ದೇವೇಂದ್ರ ಫಡ್ನವಿಸ್

|

ನವದೆಹಲಿ, ನವೆಂಬರ್ 21: ನನಗೆ ಅಖಂಡ ಭಾರತದ ಬಗ್ಗೆ ವಿಶ್ವಾಸವಿದೆ, ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಸ್ವೀಟ್ ಶಾಪ್ ಮಾಲೀಕರೊಬ್ಬರಿಗೆ ಶಿವಸೇನೆಯ ಮುಖಂಡರು ತಮ್ಮ ಬೇಕರಿಯ ಹೆಸರನ್ನು ಕರಾಚಿಯಿಂದ ಮರಾಠಿಗೆ ಬದಲಾಯಿಸಬೇಕು ಎಂದು ಒತ್ತಡ ಹೇರಿದ್ದ ಕುರಿತು ಕೇಳಿದ ಪ್ರಶ್ನೆಗೆ ಫಡ್ನವಿಸ್ ಉತ್ತರಿಸಿದರು.

'ಕರಾಚಿ ಬೇಕರಿ' ಹೆಸರನ್ನು ಮರಾಠಿಗೆ ಬದಲಾಯಿಸಲು ಶಿವಸೇನೆಯಿಂದ ಒತ್ತಡ

ಅಖಂಡ ಭಾರತದ ಬಗ್ಗೆ ವಿಶ್ವಾಸವಿರುವ ಕಾರಣ ಒಂದು ದಿನ ಕರಾಚಿ ಭಾರತದ ಭಾಗ ಎಂದು ಘೋಷಿಸಲ್ಪಡುತ್ತದೆ.

ಈ ಘಟನೆ ಬಗ್ಗೆ ಸಂಜಯ್ ರಾವತ್ ಮಾತನಾಡಿ ಇದು ಪಕ್ಷದ ನಿಲುವಲ್ಲ, ಕಾರ್ಯಕರ್ತರಿಗೆ ತೋಚಿದ್ದನ್ನು ಅವರು ಮಾಡಿದ್ದಾರೆ ಎಂದು ಹೇಳಿದ್ದರು. ಕಳೆದ 60 ವರ್ಷಗಳ ಹಿಂದಿನಿಂದಲೂ ಮುಂಬೈನಲ್ಲಿ ಕರಾಚಿ ಟ್ವೀಟ್ಸ್ ಹಾಗೂ ಬೇಕರಿಗಳಿವೆ. ಪಾಕಿಸ್ತಾನಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ.

ಆದರೆ ಇಷ್ಟು ವರ್ಷದ ಬಳಿಕ ಬಂದು ಹೆಸರನ್ನು ಬದಲಾಯಿಸುವಂತೆ ಕೇಳುತ್ತಿದ್ದಾರೆ. ವರ್ಷದ ಹಿಂದೆ ಬೆಂಗಳೂರಿನಲ್ಲಿರುವ ಕರಾಚಿ ಬೇಕರಿಗೂ ಬೆದರಿಕೆ ಕರೆಗಳು ಬಂದಿದ್ದವು.

1947 ರ ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಹೈದರಾಬಾದ್‌ಗೆ ವಲಸೆ ಬಂದ ಖಾನ್‌ಚಂದ್ ರಮ್ನಾನಿ ಆರಂಭಿಸಿದ ಪ್ರಸಿದ್ಧ ಕರಾಚಿ ಬೇಕರಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ.

ಸದ್ಯ ಕರಾಚಿ ಬೇಕರಿ ಭಾರತದ ಐದು ಪ್ರಮುಖ ನಗರಗಳಾದ ಹೈದರಾಬಾದ್, ಬೆಂಗಳೂರು, ಮುಂಬಯಿ, ದೆಹಲಿ ಹಾಗೂ ಚೆನ್ನೆ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.

English summary
In a strong pitch for ‘Akhand Bharat’, former Maharashtra chief minister Devendra Fadnavis said one day Karachi will be part of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X