ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಹಾಟ್‌ಸ್ಪಾಟ್ ಧಾರಾವಿಯಲ್ಲಿ ಭಾನುವಾರ ಎರಡೇ ಕೇಸ್

|
Google Oneindia Kannada News

ಮುಂಬೈ, ಜುಲೈ 27: ಕೊವಿಡ್ 19 ಹಾಟ್‌ಸ್ಪಾಟ್ ಎನಿಸಿರುವ ಧಾರಾವಿಯಲ್ಲಿ ಭಾನುವಾರ ಎರಡೇ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ಸೋಂಕು ಧಾರಾವಿಯಲ್ಲಿ ಹರಡಲು ಆರಂಭಿಸಿದಾಗಿನಿಂದ ಇಷ್ಟು ಕಡಿಮೆ ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲು.

ಧಾರಾವಿ ವಿಶ್ವದ ಅತಿ ದೊಡ್ಡ ಸ್ಲಂ ಎಂದೇ ಕರೆಸಿಕೊಳ್ಳುತ್ತದೆ. ಒಟ್ಟು 2531 ಮಂದಿಗೆ ಸೋಂಕು ತಗುಲಿದೆ. 113 ಸಕ್ರಿಯ ಪ್ರಕರಣಗಳಿವೆ.ಶನಿವಾರ ಧಾರಾವಿಯಲ್ಲಿ 10 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದುವರೆಗೆ 2 ಸಾವಿರ ಮಂದಿ ಗುಣಮುಖರಾಗಿದ್ದಾರೆ.

Dharavi

ಸ್ಲಂಗಳಲ್ಲಿ ಒಂದೇ ಕಡೆ ಹತ್ತಾರು ಮಂದಿ ಇರುವುದು, ಸಾಮೂಹಿಕ ಶೌಚಾಲಯ ಇನ್ನಿತರೆ ಕಾರಣಗಳಿಂದಾಗಿ ಬೇಗ ಸೋಂಕು ತಗುಲಿತ್ತು.

ಕೊರೊನಾವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದು ಹೇಗೆ 'ಧಾರಾವಿ'?ಕೊರೊನಾವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದು ಹೇಗೆ 'ಧಾರಾವಿ'?

ಜುಲೈ 22 ರಂದು ಐದು ಮಂದಿಗೆ ಸೋಂಕು ತಗುಲಿತ್ತು. ಜುಲೈ 23ಕ್ಕೆ 6 ಪ್ರಕರಣಗಳು ದಾಖಲಾಗಿತ್ತು. ಆದರೆ ಧಾರಾವಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳನ್ನು ಕಡಿಮೆ ಮಾಡುವುದು ಒಂದು ದೊಡ್ಡ ಸವಾಲೇ ಆಗಿತ್ತು.

ಹೆಚ್ಚೆಚ್ಚು ಪರೀಕ್ಷೆಗಳು, ಸೋಂಕಿತರ ಪತ್ತೆ, ಅಷ್ಟೇ ಬೇಗ ಚಿಕಿತ್ಸೆ ನೀಡಿದ್ದರಿಂದ ಪ್ರಕರಣಗಳ ಸಂಖ್ಯೆಯೂ ಬೇಗ ಕಡಿಮೆಯಾಗಿದೆ.ವೈದ್ಯರು ಹಾಗೂ ಖಾಸಗಿ ಕ್ಲಿನಿಕ್‌ ಗಳು ಸೇರಿ ಸ್ಕ್ರೀನಿಂಗ್ ಹಾಗೂ ಫೀವರ್ ಕ್ಲಿನಿಕ್‌ಗಳನ್ನು ತೆರೆದಿದ್ದರು. 47,500 ಮನೆಯನ್ನು ಅವರು ಕವರ್ ಮಾಡಿದ್ದರು.

14,900 ಮಂದಿಯನ್ನು ಮೊಬೈಲ್ ವ್ಯಾನ್‌ಗಳ ಮೂಲಕ ತಪಾಸಣೆ ಮಾಡಲಾಗಿತ್ತು. ಧಾರಾವಿಯಲ್ಲಿ ಇಂದು ಪ್ಲಾಸ್ಮಾ ದಾನ ಶಿಬಿರ ನಡೆಯಲಿದೆ. ಮಹಾರಾಷ್ಟ್ರದಲ್ಲಿ 3.5 ಲಕ್ಷ ಮಂದಿ ಕೊರೊನಾ ಸೋಂಕಿತರಿದ್ದಾರೆ.

English summary
One of the most densely populated slums in the world, Mumbai's Dharavi, had quickly become a coronavirus hotspot.Just two cases were reported in Dharavi On Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X