Breaking; ಮುಂಬೈ ವಿಮಾನ ನಿಲ್ದಾಣ 6 ಗಂಟೆಗಳ ಕಾಲ ಬಂದ್
ಮುಂಬೈ, ಮೇ 02; ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 6 ಗಂಟೆಗಳ ಕಾಲ ಬಂದ್ ಆಗಲಿದೆ. ಎಲ್ಲಾ ಮಾದರಿ ವಿಮಾನಗಳಿಗೆ ಸಹ ನಿಲ್ದಾಣ ಮುಚ್ಚಿರಲಿದೆ.
ಮೇ 10ರಂದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ತನಕ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡು ರನ್ ವೇಯನ್ನು ಮುಚ್ಚಲಾಗುತ್ತದೆ.
Breaking; ವಿಮಾನ ಲ್ಯಾಂಡ್ ಆಗುವಾಗ turbulence, 12 ಜನರಿಗೆ ಗಾಯ
ಮುಂಗಾರು ಪೂರ್ವ ಕಾಮಗಾರಿಗಳಿಗಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ಯಾವುದೇ ವಿಮಾನಗಳು ಹಾರಾಟ, ಲ್ಯಾಂಡ್ ಆಗುವುದಿಲ್ಲ.
Breaking; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ
ಕಾಮಗಾರಿಗಳ ಕುರಿತು ಈಗಾಗಲೇ ವಿಮಾನಯಾನ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಈ ಅವಧಿಯಲ್ಲಿನ ವಿಮಾನಗಳ ಹಾರಾಟದಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.
ಮೇ 10ರಂದು ಪ್ರಯಾಣ ನಡೆಸುವ ಜನರು ಯಾವುದೇ ತೊಂದರೆಗೆ ಸಿಲುಕದಿರಲು ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
Comments
English summary
Chhatrapati Shivaji Maharaj International Airport Mumbai will remain non-operational on May 10th for pre-monsoon maintenance.