ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ನಿತಿನ್ ಗಡ್ಕರಿ ಹೆಲ್ಮೆಟ್ ಇಲ್ದೆ ಗಾಡಿ ಓಡಿಸಿದ್ದಕ್ಕೆ ಫೈನ್ ಎಷ್ಟು?"

|
Google Oneindia Kannada News

Recommended Video

ನಿತಿನ್ ಗಡ್ಕರಿ ಹೆಲ್ಮೆಟ್ ಇಲ್ದೆ ಗಾಡಿ ಓಡಿಸಿದ್ದಕ್ಕೆ ಫೈನ್ ಎಷ್ಟು? | Oneindia Kannada

ಮುಂಬೈ, ಸೆಪ್ಟೆಂಬರ್ 05: ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡದ ಮೊತ್ತವನ್ನು ಸರ್ಕಾರ ಹೆಚ್ಚಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೆಲ್ಮೇಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ ಫೋಟೋವೊಂದು ವೈರಲ್ ಆಗಿದ್ದು, "ನಿಮ್ಮ ನಿಯಮಗಳು ಸಾಮಾನ್ಯ ಜನರಿಗೆ ಮಾತ್ರವೇ? ಮಾನ್ಯ ಸಚಿವರು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಎಷ್ಟು ದಂಡ ವಿಧಿಸಿದ್ದೀರಿ?" ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.

ಡೀಸೆಲ್, ಪೆಟ್ರೋಲ್ ವಾಹನ ರದ್ದು ಮಾಡಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿಡೀಸೆಲ್, ಪೆಟ್ರೋಲ್ ವಾಹನ ರದ್ದು ಮಾಡಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಬುಧವಾರವಷ್ಟೇ ದೆಹಲಿಯ ದಿನೇಶ್ ಮದನ್ ಎಂಬುವವರು ಸಂಚಾರಿ ನಿಮಯ ಉಲ್ಲಂಘಿಸಿದ್ದಕ್ಕೆ ಗುರುಗ್ರಾಮ್(ಗುರ್ಗಾಂವ್) ಪೊಲೀಸರು 23,000 ರೂ. ದಂಡ ವಿಧಿಸಿದ್ದರು.

Old Photo Of Nitin Gadkari Riding Scooter Without Helmet Goes Viral

ಈ ಘಟನೆಯನ್ನು ಉಲ್ಲೇಖಿಸಿರುವ ಟ್ವಿಟ್ಟಿಗರು, ಸಾಮಾನ್ಯ ಜನರಿಗೆ ಮಾತ್ರ ಈ ಪರಿ ದಂಡ, ಸಚಿವರಿಗೆ ವಿನಾಯಿತಿಯೇ ಎಂದು ಪ್ರಶ್ನಿಸಿದ್ದಾರೆ.

ಮೊಟಾರ್ ವಾಹನ ಕಾಯ್ದೆ ಅಡಿಯಲ್ಲಿ ಸಂಚಾರಿ ನಿಯಮ ಪರಿಷ್ಕರಣೆ ನಂತರ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುವವರಿಗೆ ವಿಧಿಸುವ ದಂಡವನ್ನು ರೂ.100 ರಿಂದ ರೂ.1000 ಕ್ಕೆ ಹೆಚ್ಚಿಸಲಾಗಿದೆ.

English summary
Old Photo Of Transport minister Nitin Gadkari Riding Scooter Without Helmet Goes Viral
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X