ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ ಸೇರಿದ ಶೋಭಾ ಡೇ ಟ್ವೀಟ್ ಖ್ಯಾತಿಯ ದಢೂತಿ ಪೊಲೀಸ್ !

ಲೇಖಕಿ ಶೋಭಾ ಡೇ ಅವರ ಟ್ವಿಟ್ಟರ್ ಪೋಸ್ಟ್ ನಿಂದಾಗಿ ಜನಪ್ರಿಯತೆ ಪಡೆದುಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಈಗ ಸ್ಥೂಲಕಾಯ ಕಳೆದುಕೊಳ್ಳಲು ಆಸ್ಪತ್ರೆ ಸೇರಿದ್ದಾರೆ.

By Mahesh
|
Google Oneindia Kannada News

ಮುಂಬೈ, ಫೆಬ್ರವರಿ 28: ಲೇಖಕಿ ಶೋಭಾ ಡೇ ಅವರ ಟ್ವಿಟ್ಟರ್ ಪೋಸ್ಟ್ ನಿಂದಾಗಿ ಜನಪ್ರಿಯತೆ ಪಡೆದುಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಈಗ ಸ್ಥೂಲಕಾಯ ಕಳೆದುಕೊಳ್ಳಲು ಆಸ್ಪತ್ರೆ ಸೇರಿದ್ದಾರೆ.

ಮಧ್ಯಪ್ರದೇಶದ ದಢೂತಿ ದೇಹದ ಪೊಲೀಸ್ ಇನ್ಸ್ಪೆಕ್ಟರ್ ದೌಲತ್ ರಾಮ್ ಜೋಗಾವತ್ (58) ಅವರು ತಮ್ಮ ಭಾರೀ ತೂಕ ಇಳಿಸಿಕೊಳ್ಳಲು ಬ್ಯಾರಿಯಾಟ್ರಿಕ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. [ಪೊಲೀಸರನ್ನು ಅಣಕಿಸಲು ಹೋಗಿ ತಿರುಗೇಟು ತಿಂದ ಲೇಖಕಿ]

Obese MP Cop Undergoes Series of Tests at a Mumbai Hospital

ಮುಂಬೈಗೆ ಆಗಮಿಸಿದ ದೌಲತ್ ರಾಮ್ ಅವರಿಗೆ ಸೈಫಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀದಲಾಗುತ್ತಿದೆ. ಸುಮಾರು 185 ಕೆಜಿ ತೂಕದ ಇವರ ಚಿತ್ರಗಳು ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ, ಶೋಭಾ ಡೇ ಟ್ವೀಟ್ ನಂತರ ದೌಲತ್ ರಾಮ್ ಯಾರು ಎಂಬುದು ಎಲ್ಲರಿಗೂ ತಿಳಿದು ಬಿಟ್ಟಿತು.

ಹಾರ್ಮೋನ್ ವ್ಯತ್ಯಾಸದಿಂದ ನನಗೆ ಈ ಸಮಸ್ಯೆ ಬಂದಿದೆ ಇದು ನನ್ನ ತಪ್ಪಲ್ಲ. 1993ರಲ್ಲಿ ಗಲ್ ಬ್ಲಾಡರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಶೋಭಾ ಡೇ ಅವರ ಟ್ವೀಟ್ ಬಗ್ಗೆ ಅಸಮಾಧಾನವಿದೆ ಎಂದು ಇನ್ಸ್ ಪೆಕ್ಟರ್ ಜೋಗೆವಾತ್ ಹೇಳಿಕೊಂಡಿದ್ದಾರೆ.[ತೂಕ ಇಳಿಸಲು ಮುಂಬೈಗೆ ಬಂದ 500ಕೆಜಿ ತೂಕದ ಮಹಿಳೆ]

ಡೊಳ್ಳು ಹೊಟ್ಟೆಯ ಪೇದೆಯ ಚಿತ್ರವನ್ನು ಹಾಕಿ 'ಹೆವಿ ಬಂದೋಬಸ್ತ್' ಎಂದು ಡೇ ಅವರು ಕಾಮಿಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಂಬೈ ಪೊಲೀಸರು, ಈ ಫೋಟೋದಲ್ಲಿರುವ ವ್ಯಕ್ತಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿಲ್ಲ. ಮಧ್ಯಪ್ರದೇಶದವರಿರಬಹುದು. ಜವಾಬ್ದಾರಿಯುತ ನಾಗರಿಕರಾದ ನೀವು ಈ ರೀತಿ ಟ್ವೀಟ್ ಮಾಡುವ ಮೊದಲು ಪರಿಶೀಲಿಸಿ ಎಂದು ಮುಂಬೈ ಪೊಲೀಸ್ ಅವರು ಟ್ವೀಟ್ ಮಾಡಿದ್ದರು. (ಪಿಟಿಐ)

English summary
Daulatram Jogawat, an inspector with Madhya Pradesh police at whom columnist Shobhaa De had poked fun over his obese physical condition in a tweet, is undergoing a series of tests at a hospital here to determine the diseases he suffers from and if bariatric surgery could help him, a statement said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X