ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮೀಸಲಾತಿ ವಾರ್, ಆತಂಕಗೊಂಡ ಒಬಿಸಿ ಸಮುದಾಯ

|
Google Oneindia Kannada News

ಮುಂಬೈ, ನವೆಂಬರ್ 21: ಮರಾಠ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ, ನಿಟ್ಟುಸಿರು ಬಿಟ್ಟಿದ್ದ ಸಿಎಂ ದೇವೇಂದ್ರ ಫಡ್ನವೀಸ್ ಗೆ ಹೊಸ ಸಮಸ್ಯೆ ಎದುರಾಗಿದೆ. ಮೀಸಲಾತಿ ಬಗ್ಗೆ ಆತಂಕ ವ್ಯಕ್ತಪಡಿಸಿ ಹಿಂದುಳಿದ ವರ್ಗ(ಒಬಿಸಿ)ದವರು ಸಿಎಂಗೆ ಪತ್ರ ಬರೆದಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಮೀಸಲಾತಿ ನೀಡಿರುವುದು ರಾಜಕೀಯ ಉದ್ದೇಶದಿಂದಲೂ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರಕ್ಕೆ ಶುಭದಾಯಕವಾಗಿ ಪರಿಣಮಿಸಬಹುದು ಎಂದೆನಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ!ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ!

ಲೋಕಸಭೆ ಚುನಾವಣೆಗೂ ಮುನ್ನ ಮೀಸಲಾತಿ ನೀಡಿರುವುದು ರಾಜಕೀಯ ಉದ್ದೇಶದಿಂದಲೂ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರಕ್ಕೆ ಶುಭದಾಯಕವಾಗಿ ಪರಿಣಮಿಸಬಹುದಾಗಿದೆ.

OBCs write to Maharashtra CM Fadnavis, fear their quota may be cut

ಮಹಾರಾಷ್ಟ್ರದಲ್ಲಿ ಈಗಾಗಲೇ ಶೇ 52 ಮೀಸಲಾತಿ ಇದ್ದು, ಮರಾಠಾ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ ಹಿಂದುಳಿದ ವರ್ಗ(ಎಸ್ ಇ ಬಿಸಿ) ಎಂಬ ಹೊಸ ವರ್ಗದಡಿಯಲ್ಲಿ ಶೇ 16 ಮೀಸಲು ಸಿಗುವ ಸಾಧ್ಯತೆಯಿದೆ. ಒಟ್ಟಾರೆ, ಮೀಸಲಾತಿ ಪ್ರಮಾಣ ಶೇ68ಕ್ಕೆ ತಲುಪಲಿದೆ. ಇದು ಸುಪ್ರೀಂಕೋರ್ಟ್ ವಿಧಿಸಿರುವ ಶೇ50ರಷ್ಟು ಮಿತಿಯನ್ನು ಮೀರಲಿದೆ.

ಮಹಾರಾಷ್ಟ್ರದಲ್ಲಿ ಒಬಿಸಿ ಸಮುದಾಯ ಶೇ 52ರಷ್ಟಿದ್ದು, ಶೇ 27ರಷ್ಟು ಮೀಸಲಾತಿ ಪಡೆಯಬಹುದಾಗಿದೆ. ಶೇ 32ರಷ್ಟಿರುವ ಮರಾಠಿಗರಿಗೆ ಪ್ರತ್ಯೇಕ ವರ್ಗ ಮಾಡಿ ಮೀಸಲಾತಿ ನೀಡುವುದನ್ನು ಒಬಿಸಿ ಸಮುದಾಯದವರು ವಿರೋಧಿಸಿದ್ದಾರೆ.

'ಮರಾಠಿಗರ ಪೈಕಿ ಕುಣಬಿ ಮರಾಠಗರು ಈಗಾಗಲೇ ಒಬಿಸಿ ಕೆಟಗರಿಯಿಂದ ಶೇ 8ರಷ್ಟು ಮೀಸಲಾತಿ ಗಳಿಸಿದ್ದಾರೆ. ಸುಮಾರು 300 ಜಾತಿಗಳನ್ನು ಹೊಂದಿರುವ ಒಬಿಸಿ ಸಮುದಾಯವು ಶೇ27ರಷ್ಟು ಮೀಸಲಾತಿ ಆಗ್ರಹಿಸುತ್ತಿದೆ' ಎಂದು ಮಹಾರಾಷ್ಟ್ರ ಮಾಲಿ ಮಹಾಸಂಘ್ (ಎಂಎಂಎಂ), ಒಬಿಸಿ ನಾಯಕ ಅನಿಲ್ ಮಹಾಜನ್ ಅವರು ಹೇಳಿದ್ದಾರೆ.

English summary
The Bharatiya Janata Party-led government’s attempt to keep the Other Backward Classes (OBC) happy while granting the Maratha community reservation may be too tight a rope to walk, according to early responses from multiple OBC leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X