ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯಲಿನಲ್ಲಿ ಶೌಚ ಮಾಡಿದ್ರೆ ದಂಡ, ಮಹಾರಾಷ್ಟ್ರದಲ್ಲಿ ಜಾರಿ

|
Google Oneindia Kannada News

ಮುಂಬೈ, ಜನವರಿ 04 : ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಬಯಲಿನಲ್ಲಿ ಶೌಚ ಮಾಡಿದರೆ 500 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ನಿಯಮವನ್ನು ಜಾರಿ ಮಾಡಿದೆ.

ಮಹಾರಾಷ್ಟ್ರ ಸರ್ಕಾರ ಬಯಲಿನಲ್ಲಿ ಶೌಚ ಮಾಡೋದು, ಉಗುಳುವುದು, ಮೂತ್ರ ವಿಸರ್ಜನೆ, ರಸ್ತೆ ಬದಿ ಕಸ ಹಾಕೋದು ಸೇರಿದಂತೆ ಎಲ್ಲ ಗಲೀಜು ಕೆಲಸಗಳಿಗೆ ದಂಡವನ್ನು ವಿಧಿಸುವಂತೆ ನಗರ ಅಭಿವೃದ್ಧಿ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಕೇರಳ ಈಗ ಸಂಪೂರ್ಣ ಬಯಲು ಶೌಚ ಮುಕ್ತ ರಾಜ್ಯಕೇರಳ ಈಗ ಸಂಪೂರ್ಣ ಬಯಲು ಶೌಚ ಮುಕ್ತ ರಾಜ್ಯ

ನಗರ ಪ್ರದೇಶ ಸೇರಿದಂತೆ ಎ, ಬಿ, ಸಿ ಮತ್ತು ಡಿ ಕೆಟಗಿರಿಯ ಸ್ಥಳಗಳಲ್ಲಿಯೂ ದಂಡದ ಪ್ರಮಾಣ ಒಂದೇ ಆಗಿರಲಿದೆ. ಇಂದಿನಿಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಿದರೆ ಸ್ಥಳದಲ್ಲಿಯೇ 150 ರು. ದಿಂದ 180 ರು.ನಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.

Now, Rs 500 Fine for Open Defecation in Maharashtra

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಮೂಲಕ ಗಲೀಜು ಮಾಡಿದರೆ 100 ರಿಂದ 150 ರು. ದಂಡ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದರೆ 150 ರಿಂದ 200 ರು. ದಂಡವನ್ನು ಪಾವಸಿಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಅಭಿಯಾನವನ್ನ ಆರಂಭಿಸಿದ ರೀತಿಯಲ್ಲಿಯೇ ಮಹಾರಾಷ್ಟ್ರ ಸರ್ಕಾರ ಕೂಡ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ.

2017ರ ಅಕ್ಟೋಬರ್ 1 ರಂದು ಭೇಟಿ ನೀಡಿದ್ದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹಾರಾಷ್ಟ್ರದ ಎಲ್ಲ ನಗರ ಪ್ರದೇಶಗಳು ಬಯಲು ಶೌಚಾಲಯದಿಂದ ಮುಕ್ತವಾಗಿದೆ ಎಂದು ಘೋಷಿಸಿದ್ದರು.

English summary
Open defecation in Maharashtra will now invite a spot fine of Rs 500, according to rules framed by the state government. The government has also fixed 'spot fine' rates for littering, spitting and urinating in public places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X