ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಲಿತ' ಪದಬಳಕೆ ಮಾಡಿದರೆ ತಪ್ಪೇನು? ರಾಮದಾಸ್ ಅಠಾವಳೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 11: "ದಲಿತ ಎಂಬ ಪದಪ್ರಯೋಗ ಮಾಡಿದರೆ ತಪ್ಪೇನು?" ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಪ್ರಶ್ನಿಸಿದ್ದಾರೆ.

'ದಲಿತ' ಪದ ಪ್ರಯೋಗಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ!'ದಲಿತ' ಪದ ಪ್ರಯೋಗಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ!

'ದಲಿತ' ಪದಪ್ರಯೋಗ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ತಾಕೀತು ಹಾಕಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಅಠಾವಳೆ, ಸಂದರ್ಭದ ಬಂದರೆ ಈ ಕುರಿತು ಸುಪ್ರೀಂ ಕೋರ್ಟ್ ಮೊರೆಹೋಗುವುದಾಗಿ ಹೇಳಿದ್ದಾರೆ.

'ದಲಿತ' ಪದಬಳಕೆಗೆ ಬ್ರೇಕ್: ಅದು ಜಾತಿಯಲ್ಲ ಚಳವಳಿ!'ದಲಿತ' ಪದಬಳಕೆಗೆ ಬ್ರೇಕ್: ಅದು ಜಾತಿಯಲ್ಲ ಚಳವಳಿ!

"ದಲಿತ ಎಂಬ ಪದಪ್ರಯೋಗ ಮಾಡುವುದರಿಂದ ಏನು ತಪ್ಪಾಗುತ್ತದೆ? ಸರ್ಕಾರಿ ದಾಖಲೆಗಳಲ್ಲಿ ಈಗಾಗಲೇ ಪರಿಶಿಷ್ಠ ಜಾತಿ ಮತ್ತು ಪಂಗಡ ಎಂಬ ಪದ ಬಳಕೆಯಲ್ಲಿದೆ. ಅಂತೆಯೇ ದಲಿತ ಶಬ್ದವೂ ಬಳಕೆಗೆ ಬರುತ್ತದೆ" ಎಂದು ಅವರು ಹೇಳಿದ್ದಾರೆ.

Nothing wrong in using the word Dalit: Athawale

ದಲಿತ ಎಂಬ ಪದಬಳಕೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡಬೇಕೆ?' ಎಂದು ಬಾಂಬೆ ಹೈಕೋರ್ಟಿನ ನಾಗ್ಪುರ ಬೆಂಚ್ ಕೇಂದ್ರ ಸರ್ಕಾರವನ್ನು ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ದಲಿತ ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದವನ್ನು ಬಳಕೆ ಮಾಡಲು ತಿಳಿಸಿತ್ತು. ದಲಿತ ಎಂಬುದಕ್ಕೆ ಸಾಂವಿಧಾನಿಕ ಪದ ಪರಿಶಿಷ್ಟ ಜಾತಿ ಎಂದಾಗಿದ್ದು, ಇನ್ನು ಮೇಲೆ ಪ್ರಮಾಣ ಪತ್ರ ಅಥವಾ ಇನ್ನು ಯಾವುದೇ ಗುರುತಿನ ಚೀಟಿಗಳಲ್ಲಿ ಇದೇ ಪದವನ್ನು ಬಳಸುವಂತೆ ಕೇಂದ್ರ ಸರ್ಕಾರ ಹೇಳಿತ್ತು.

English summary
Union Minister of State for Social Justice and Empowerment Ramdas Athawale is of the view that usage of the word 'Dalit' should not be done away with. He has stated that his Republican Party of India (RPI) will approach the Supreme Court to challenge the government's advisory which had asked media to refrain from using the word.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X