ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಯನ್ ಕೇಸ್: ಜಾತಿ ವಿಚಾರಣಾ ಸಮಿತಿಯಿಂದ ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್

|
Google Oneindia Kannada News

ಮುಂಬೈ ಆಗಸ್ಟ್ 13: ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ನನ್ನು ಎನ್‌ಸಿಬಿ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಬಂಧಿಸಿದಾಗ ಆತನ ಜಾತಿ ಪ್ರಮಾಣ ಪತ್ರದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದರ ತನಿಖೆಯನ್ನು 'ಜಾತಿ ವಿಚಾರಣಾ ಸಮಿತಿ' ಪೂರ್ಣಗೊಳಿಸಿದೆ. ಈ ತನಿಖೆಯಲ್ಲಿ ಸಮೀರ್‌ಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಆತ ಹುಟ್ಟು ಮುಸ್ಲಿಂ ಅಲ್ಲ ಎನ್ನಲಾಗಿದೆ.

ನವಾಬ್ ಮಲಿಕ್ ಸಲ್ಲಿಸಿದ ದಾಖಲೆಗಳಿಂದ ವಾಂಖೆಡೆ 'ಮುಸ್ಲೀಂ' ಎಂದು ಸ್ಪಷ್ಟನವಾಬ್ ಮಲಿಕ್ ಸಲ್ಲಿಸಿದ ದಾಖಲೆಗಳಿಂದ ವಾಂಖೆಡೆ 'ಮುಸ್ಲೀಂ' ಎಂದು ಸ್ಪಷ್ಟ

ವಾಸ್ತವವಾಗಿ ಸಮೀರ್ ವಾಂಖೆಡೆ ಅವರ ತಾಯಿ ಜಾಹಿದಾ ಮುಸ್ಲಿಂ ಆಗಿದ್ದರೆ, ಅವರ ತಂದೆ ದಲಿತರಾಗಿದ್ದರು. ಆರ್ಯನ್ ಪ್ರಕರಣ ಬೆಳಕಿಗೆ ಬಂದಾಗ ಹಲವು ದಲಿತ ಸಂಘಟನೆಗಳು ವಾಂಖೆಡೆ ಜಾತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದವು. ಇದರೊಂದಿಗೆ ಜಾತಿ ವಿಚಾರಣಾ ಸಮಿತಿಗೂ ದೂರು ನೀಡಿದ್ದರು. ಇದಾದ ನಂತರ ವಾಂಖೆಡೆ ಅವರು ತಮ್ಮ ದಾಖಲೆಗಳನ್ನು ಸಮಿತಿಗೆ ತೋರಿಸಿದರು. ವಾಂಖೆಡೆ ಹುಟ್ಟಿನಿಂದ ಮುಸಲ್ಮಾನರಲ್ಲ ಎಂದು ಸಮಿತಿ ತನ್ನ ವಿಚಾರಣಾ ವರದಿಯಲ್ಲಿ ಬರೆದಿದೆ. ಆತ ತನ್ನ ತಂದೆಯೊಂದಿಗೆ ಇಸ್ಲಾಂಗೆ ಮತಾಂತರಗೊಂಡಿದ್ದೂ ಸಾಬೀತಾಗಿಲ್ಲ. ಸಮಿತಿಯ ಪ್ರಕಾರ ಅವರು ಮಹಾರ್-37 ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ಸಾಬೀತಾಗಿದೆ.

Not a Muslim by birth’: Clean chit to former NCB officer Sameer Wankhede

ಸಮೀರ್ ವಾಂಖೆಡೆ ತನ್ನ ತಂದೆ ಜ್ಞಾನದೇವ್ ಕಚ್ರೂಜಿ ವಾಂಖೆಡೆ ಹಿಂದೂ ಆಗಿದ್ದು ಅಬಕಾರಿ ಇಲಾಖೆಯಲ್ಲಿ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನಿವೃತ್ತರಾಗಿದ್ದಾರೆ ಎಂದು ಹೇಳಿದ್ದರು. ಅವರ ತಾಯಿ ಮುಸ್ಲಿಂ ಆಗಿರುವಾಗ, ಅವರು ನಿಜವಾದ ಭಾರತೀಯ ಸಂಪ್ರದಾಯದಲ್ಲಿ ಸಮಗ್ರ, ಬಹು-ಧರ್ಮೀಯ ಮತ್ತು ಜಾತ್ಯತೀತ ಕುಟುಂಬಕ್ಕೆ ಸೇರಿದವರು. 2006 ರಲ್ಲಿ ಅವರು ಡಾ. ಶಬಾನಾ ಖುರೇಷಿ ಅವರನ್ನು ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ನಾಗರಿಕ ವಿವಾಹ ಸಮಾರಂಭದಲ್ಲಿ ವಿವಾಹವಾದರು. ಆದರೆ 2016 ರಲ್ಲಿ ಅವರು ಸಿವಿಲ್ ನ್ಯಾಯಾಲಯದಿಂದ ವಿಚ್ಛೇದನ ಪಡೆದರು. ನಂತರ ಅವರು 2017 ರಲ್ಲಿ ಶಿಯಾಮತಿ ಕ್ರಾಂತಿ ದೀನಾನಾಥ್ ರೆಡ್ಕರ್ ಅವರೊಂದಿಗೆ ಮದುವೆ ಮಾಡಿಕೊಂಡರು.

ವಾಂಖೆಡೆಯ ಮಾಜಿ ಮಾವ ಡಾ.ಜಾಯೆದ್ ಖುರೇಷಿ ಆ ಸಮಯದಲ್ಲಿ ಸಮೀರ್ ಮುಸ್ಲಿಂ ಎಂದು ಹೇಳಿಕೊಂಡಿದ್ದರು. ಮಗಳ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದರು. ಸಮೀರ್ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಾರೆ ಮತ್ತು ಅದರ ಎಲ್ಲಾ ಪದ್ಧತಿಗಳನ್ನು ಅನುಸರಿಸುತ್ತಾರೆ ಎಂದು ಅವರು ತಿಳಿದಿದ್ದರು.

Not a Muslim by birth’: Clean chit to former NCB officer Sameer Wankhede

ಏನಿದು ಸಮೀರ್ ವಾಂಖೆಡೆ ಜಾತಿ ವಿಚಾರ?

ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಾತ್ರವಲ್ಲದೆ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಸಂಬಂಧ ಭಾಗಿಯಾಗಿದ್ದಾರೆಂದು ಆರೋಪವಿತ್ತು. ಅಂದು ಎನ್‌ಸಿಬಿ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ತಂಡ ದಾಳಿ ನಡೆಸಿದ ಮುಂಬೈ ಕ್ರೂಸ್‌ನಲ್ಲಿ ಆರ್ಯನ್‌ ಖಾನ್ ಅವರೊಂದಿಗೆ ನವಾಬ್ ಮಲಿಕ್ ಸಂಬಂಧಿಯನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಸಮೀರ್ ವಾಂಖೆಡೆ ನವಾಬ್ ಮಲಿಕ್ ಕೆಂಗಣ್ಣಿಗೆ ಗುರಿಯಾಗಿದ್ದರು. ಡ್ರಗ್ ಪ್ರಕರಣದ ಪರಿಶೀಲನೆಗೆ ಮುಂದಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಹಲವಾರು ಆರೋಪಗಳನ್ನು ನವಾಬ್ ಮಲಿಕ್ ಮಾಡಿದ್ದರು. ಇವುಗಳಲ್ಲಿ ಜಾತಿ ವಿಚಾರವೂ ಇತ್ತು. 'ಸಮೀರ್ ವಾಂಖೆಡೆ ಹಿಂದೂ ಅಲ್ಲು ಮುಸ್ಲಿಂ. ಉದ್ಯೋಗಕ್ಕಾಗಿ ಅವರು ಜಾತಿಯನ್ನು ಬದಲಾಯಿಸಿಕೊಂಡಿದ್ದಾರೆ. ಸಮೀರ್ ಮುಸ್ಲಿಂ ಎನ್ನಲು ತಮ್ಮ ಬಳಿ ಬಲವಾದ ಸಾಕ್ಷಿಗಳಿವೆ' ಎಂದು ನವಾಬ್ ಜಾತಿ ಪ್ರಮಾಣ ಪತ್ರಗಳನ್ನು ನೀಡಿದ್ದರು. ಹೀಗಾಗಿ ಇದರ ವಿಚಾರಣೆ ಚುರುಕುಗೊಂಡಿತ್ತು. ಸದ್ಯ ಸಮೀರ್ ವಾಂಖೆಡೆ ಜಾತಿ ವಿಚಾರಣಾ ಸಮಿತಿಯಿಂದ ಕ್ಲೀನ್ ಚಿಟ್ ಪಡೆದಿದ್ದಾರೆ.

Recommended Video

ಚಾಮರಾಜನಗರದಲ್ಲಿ 750ಮೀಟರ್ ಉದ್ದದ ರಾಷ್ಟ್ರ ಧ್ವಜ ಪ್ರದರ್ಶನ | *Karnataka | OneIndia Kannada

English summary
Aryan Khan case: Former NCB zone director Sameer Wankhede given clean chit by caste inquiry committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X