ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಟಿಬಯಾಟಿಕ್ ಬಳಕೆ ಕಡಿಮೆಯಾಗದಿದ್ದರೆ ಅನಾಹುತ

By Kiran B Hegde
|
Google Oneindia Kannada News

ಮುಂಬೈ, ಜ. 12: ಆಂಟಿಬಯಾಟಿಕ್ ಔಷಧಗಳನ್ನು ಹೆಚ್ಚು ಸೇವಿಸಬೇಡಿ. ಅವು ಅನಾಹುತಕ್ಕೆ ದಾರಿ ಮಾಡಿಕೊಡಬಹುದು ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ರಾಬಿನ್ ವಾಹನ್ ಎಚ್ಚರಿಕೆ ನೀಡಿದ್ದಾರೆ.

"ಜಗತ್ತಿ ಆಂಟಿಬಯಾಟಿಕ್ಸ್ ಬಳಕೆ ಹೆಚ್ಚುತ್ತಿದೆ. ಇದು ಕಡಿಯಾಗದಿದ್ದರೆ ಮಾನವ ಜನಾಂಗ ನಿಜವಾಗಿಯೂ ತೊಂದರೆಯಲ್ಲಿ ಸಿಕ್ಕಿಬೀಳುತ್ತದೆ" ಎಂದು ಹೇಳಿದ್ದಾರೆ.

ಮುಂಬಯಿಯಲ್ಲಿ ನಡೆಯುತ್ತಿರುವ 102ನೇ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಆಸ್ಟ್ರೇಲಿಯಾ ಮೂಲದ ವಿಜ್ಞಾನಿ ರಾಬಿನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. [10 ಸಾವಿರ ಜನರಿಗಂಟಿದ ಎಬೋಲಾ]

nobel

"ವೈದ್ಯರು ಅಗತ್ಯವಿಲ್ಲದಿದ್ದರೂ ಆಂಟಿಬಯಾಟಿಕ್ಸ್ ಸೇವಿಸಲು ಸೂಚಿಸುತ್ತಾರೆ. ಇದು ನಿಲ್ಲಬೇಕು. ಜನರು ಚಿಕ್ಕ ನೆಗಡಿಯಾದಾಗಲೂ ವೈದ್ಯರ ಹತ್ತಿರ ಹೋಗಿ ಔಷಧ ನೀಡುವಂತೆ ಕೋರುತ್ತಾರೆ. ನೆಗಡಿಯಾಗಿದ್ದರೆ ಆಂಟಿಬಯಾಟಿಕ್ಸ್ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಗೊತ್ತಿದ್ದರೂ ವೈದ್ಯರು ಅದನ್ನೇ ಪಡೆಯಲು ಸೂಚಿಸುತ್ತಾರೆ. ಇದು ನಿಲ್ಲಬೇಕು" ಎಂದು ತಿಳಿಸಿದ್ದಾರೆ. [ಮಕ್ಕಳೇ, ಮಹಿಳೆಯರೇ ಔಷಧಿ ದರ ಹೆಚ್ಚಲಿದೆ ಎಚ್ಚರ]

ಆಂಟಿಬಯಾಟಿಕ್ಸ್ ಸೇವಿಸುವುದು ಇಲ್ಲಿಯವರೆಗೂ ಅನಾಹುತ ಎನ್ನಿಸದಿರಬಹುದು. ಆದರೆ, ಹೀಗೆಯೇ ಮುಂದುವರಿದರೆ ಅನಾಹುತ ಸಂಭವಿಸುವ ದಿನ ದೂರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. [ವಯಾಗ್ರಾ ಓವರ್ ಡೋಸ್, ಯುವಕ ಸಾವು]

ಜಾನ್ ರಾಬಿನ್ ವಾಹನ್ ಅವರು ಶರೀರಶಾಸ್ತ್ರದಲ್ಲಿ ಮಾಡಿರುವ ಸಂಶೋಧನೆಗೆ 2005ರಲ್ಲಿ ನೋಬೆಲ್ ಪ್ರಶಸ್ತಿ ಪಡೆದಿದ್ದಾರೆ.

English summary
Nobel laureate Dr John Robin Warren has warned of a 'disaster' if increasing the use of antibiotics is not stopped. He told "doctors should stop prescribing antibiotics when they are not needed".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X