ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಉದ್ಯಮಿ ಮುಖೇಶ್ ಅಂಬಾನಿ ನಿವಾಸಕ್ಕೆ ಯಾವುದೇ ಬೆದರಿಕೆಯಿಲ್ಲ"

|
Google Oneindia Kannada News

ಮುಂಬೈ, ನವೆಂಬರ್ 9: ಉದ್ಯಮಿ ಮುಖೇಶ್ ಅಂಬಾನಿಯವರ ನಿವಾಸದ ಬಗ್ಗೆ ಇಬ್ಬರು ಅಪರಿಚಿತರು ವಿಚಾರಿಸಿದ್ದಾರೆ ಎಂಬ ಟ್ಯಾಕ್ಸಿ ಚಾಲಕನ ದೂರಿನ ಹಿನ್ನೆಲೆ ಮುಂಬೈನ ಅಂಟಿಲಿಯಾ ನಿವಾಸಕ್ಕೆ ಸೋಮವಾರ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಇದೀಗ ಮುಖೇಶ್ ಅಂಬಾನಿಯವರಿಗೆ ಯಾವುದೇ ಬೆದರಿಕೆ ಇಲ್ಲ ಎಂಬುದನ್ನು ಮುಂಬೈ ಪೊಲೀಸರು ದೃಢಪಡಿಸಿದ್ದಾರೆ.

ಟ್ಯಾಕ್ಸಿ ಚಾಲಕನ ಹೇಳಿಕೆ ಪ್ರಕಾರ, "ಸೋಮವಾರ ಇಬ್ಬರು ಶಂಕಿತರು ಮುಂಬೈನಲ್ಲಿ ಇರುವ ಉದ್ಯಮಿ ಮುಖೇಶ್ ಅಂಬಾನಿಯವರ ಅಂಟಿಲಿಯಾ ನಿವಾಸದ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಚಾಲಕನು ಆನ್ ಲೈನ್ ಮೂಲಕ ಮಾರ್ಗವನ್ನು ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಕೊನೆಗೆ ಪ್ರಯಾಣಿಕರು ಹೇಳಿದ ಸ್ಥಳಕ್ಕೆ ಅವರನ್ನು ಬಿಟ್ಟಿದ್ದಾರೆ. ಅದಾಗ್ಯೂ, ಶಂಕಿತರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು."

ಕೋಟಿ ಕೋಟಿ ಇದ್ದರೂ 'ಇಂಡಿಯಾ'ದಲ್ಲಿ ಇರುವುದಿಲ್ಲವಂತೆ ಶ್ರೀಮಂತರು!? ಕೋಟಿ ಕೋಟಿ ಇದ್ದರೂ 'ಇಂಡಿಯಾ'ದಲ್ಲಿ ಇರುವುದಿಲ್ಲವಂತೆ ಶ್ರೀಮಂತರು!?

ಮುಂಬೈನ ಅಂಟಿಲಿಯಾ ನಿವಾಸದ ಸುತ್ತಲಿನ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ನಿವಾಸದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಅಲ್ಲದೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. "ಇಬ್ಬರು ಶಂಕಿತ ವ್ಯಕ್ತಿಗಳು ಮುಖೇಶ್ ಅಂಬಾನಿಯವರ ಅಂಟಿಲಿಯಾ ನಿವಾಸದ ಬಗ್ಗೆ ವಿಚಾರಿಸಿದ್ದಾರೆ ಎಂದು ಒಬ್ಬ ಟ್ಯಾಕ್ಸಿ ಚಾಲಕರೊಬ್ಬರು ನಮಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು," ಎಂದು ಪೊಲೀಸರು ತಿಳಿಸಿದ್ದಾರೆ.

No Threat to Mukesh Ambani’s Antilia Home in Mumbai, Says Police

ಶಂಕಿತರ ಬಗ್ಗೆ ಅನುಮಾನ ಹುಟ್ಟಿದ್ದು ಏಕೆ?:

ಇಬ್ಬರು ವ್ಯಕ್ತಿಗಳು ತಮ್ಮ ಕೈಯಲ್ಲಿ ದೊಡ್ಡ ಬ್ಯಾಗ್ ಅನ್ನು ಹಿಡಿದುಕೊಂಡಿದ್ದು, ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಗ್ಗೆ ವಿಚಾರಿಸಿದರು. ಆ ತಕ್ಷಣಕ್ಕೆ ಟ್ಯಾಕ್ಸಿ ಚಾಲಕನು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ಯಾಕ್ಸಿ ಚಾಲಕನ ಹೇಳಿಕೆಯನ್ನು ಪಡೆದುಕೊಳ್ಳಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಫೆಬ್ರವರಿಯಲ್ಲಿ ಸ್ಫೋಟಕ ತುಂಬಿಸಿದ ವಾಹನ ಪತ್ತೆ:

ಕಳೆದ ಫೆಬ್ರವರಿ ತಿಂಗಳಿನಲ್ಲಿ ಸ್ಫೋಟಕಗಳನ್ನು ತುಂಬಿದ ಸ್ಕಾರ್ಪಿಯೋ ವಾಹನವು ಉದ್ಯಮಿ ಮುಖೇಶ್ ಅಂಬಾನಿಯವರ ನಿವಾಸದಿಂದ ಕಲೆವೇ ಕೆಲವು ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ವಾಹನದಲ್ಲಿ 20 ಜಿಲೆಟಿನ್ ಕಡ್ಡಿಗಳು ಮತ್ತು ಮುಖೇಶ್ ಮತ್ತು ನೀತಾ ಅಂಬಾನಿ ಅವರಿಗೆ ಬರೆದ ಪತ್ರ ಪತ್ತೆಯಾಗಿದ್ದು, ಅದರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಇನ್ನು ಕಾರಿನ ವಿವರವನ್ನು ಪರಿಶೀಲನೆ ನಡೆಸಿದಾಗ, ಈ ಕಾರು ಕಳ್ಳತನವಾಗಿದ್ದು, ಅಸಲಿ ಮಾಲೀಕನು ಕೊಲೆಯಾಗಿರುವ ಅಂಶ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಉದ್ಯಮಿ ಮುಖೇಶ್ ಅಂಬಾನಿಯವರ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿತ್ತು.

27 ಅಂತಸ್ತಿನ ಅಂಟಾಲಿಯಾ ನಿವಾಸದಲ್ಲಿ ವಾಸ:

ಕಳೆದ 2012 ರಿಂದಲೂ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬವು ದಕ್ಷಿಣ ಮುಂಬೈನ ಕುಂಬಲ್ಲಾ ಹಿಲ್ ಪ್ರದೇಶದಲ್ಲಿರುವ ಆಂಟಿಲಿಯಾ ಎಂಬ 27 ಅಂತಸ್ತಿನ 4,00,000 ಚದರ ಅಡಿಯ ಐಷಾರಾಮಿ ಕಟ್ಟಡದಲ್ಲಿ ವಾಸವಾಗಿದ್ದಾರೆ.

Recommended Video

Team India ಹೊಸ ರೂಪ ಪಡೆದುಕೊಂಡಿದೆ | Oneindia Kannada

English summary
No Threat to Mukesh Ambani’s Antilia Home in Mumbai, Says Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X