ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: ಸರ್ಕಾರಿ ಉದ್ಯೋಗಿಗಳಿಗೆ ಹೊಸ ಡ್ರೆಸ್‌ಕೋಡ್

|
Google Oneindia Kannada News

ಮುಂಬೈ, ಡಿಸೆಂಬರ್ 12: ಮಹಾರಾಷ್ಟ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಹೊಸ ಡ್ರೆಸ್‌ಕೋಡ್ ಪ್ರಕಟಿಸಿದೆ.ಮಹಾರಾಷ್ಟ್ರ ಸರ್ಕಾರ ಸರ್ಕಾರಿ ನೌಕರರಿಗೆ ನೂತನ ಡ್ರೆಸ್ ಕೋಡ್ ಜಾರಿ ಮಾಡಿದೆ.

ಅದರಂತೆ ಸರ್ಕಾರಿ ನೌಕರರು ಕೈಮಗ್ಗದ ಬಟ್ಟೆಯನ್ನು ಉತ್ತೇಜಿಸುವ ಸಲುವಾಗಿ ಶುಕ್ರವಾರ ಒಂದು ದಿನದ ಮಟ್ಟಿಗಾದರೂ ಖಾದಿ ಬಟ್ಟೆಗಳನ್ನು ಧರಿಸಬೇಕು ಎಂದು ಆದೇಶಿಸಿದೆ. ಈ ಕುರಿತಂತೆ ಸರ್ಕಾರ ಡಿಸೆಂಬರ್ 8 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ತಿಳಿಸಿದೆ.

ಸರ್ಕಾರಿ ಉದ್ಯೋಗಿಗಳ ಉಡುಪು ಸರಿಯಾಗಿಯೂ, ಸ್ವಚ್ಚವಾಗಿಯೂ ಇರಬೇಕು. ಮಹಿಳಾ ಉದ್ಯೋಗಿಗಳು ಸೀರೆ, ಸಲ್ವಾರ್, ಚೂಡಿದಾರ್, ಕುರ್ತಾ, ಪ್ಯಾಂಟ್ ಮತ್ತು ಶರ್ಟ್ ಜೊತೆಗೆ ದುಪಟ್ಟಾಗಳನ್ನು ಧರಿಸಬಹುದು. ಪುರುಷ ಉದ್ಯೋಗಿಗಳು ಶರ್ಟ್ ಮತ್ತು ಪ್ಯಾಂಟ್ ಧರಿಸಬೇಕು.

No Jeans Or T Shirt: Maharashtra Govt Issues Dress Code For Govt Employees

ಅಧಿಕಾರಿಗಳು / ಸಿಬ್ಬಂದಿ ಸರ್ಕಾರಿ ನೌಕರಿಗೆ ಸೂಕ್ತವಾದ ಉಡುಪನ್ನು ಧರಿಸುವುದಿಲ್ಲ ಎಂದು ಗಮನಿಸಿದ್ದೇವೆ. ಆದ್ದರಿಂದ, ಸರ್ಕಾರಿ ನೌಕರರ ಬಗೆಗಿನ ಜನರ ಭಾವನೆ ಕಳಪೆ ಮಟ್ಟದಲ್ಲಿದೆ. ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳಿಂದ ಜನರು ಉತ್ತಮ ನಡವಳಿಕೆ ಮತ್ತು ವ್ಯಕ್ತಿತ್ವ ವನ್ನು ನಿರೀಕ್ಷಿಸುತ್ತಾರೆ. ಅದಕ್ಕಾಗಿ ಅಧಿಕಾರಿಗಳು ಮತ್ತು ನೌಕರರ ಉಡುಪು ಅದಕ್ಕೆ ಸೂಕ್ತ ರೀತಿಯಲ್ಲಿರಬೇಕು.

ತೀಕ್ಷ್ಣವಾದ ಬಣ್ಣಗಳು, ವಿಚಿತ್ರವಾದ ಕಸೂತಿ ಮಾದರಿಗಳು ಅಥವಾ ಚಿತ್ರಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಬಾರದು. ಅಲ್ಲದೆ, ನೌಕರರು ಮತ್ತು ಸಿಬ್ಬಂದಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟಿ ಶರ್ಟ್ ಧರಿಸಬಾರದುಎಂದು ಸುತ್ತೋಲೆ ಆದೇಶಿಸಿದೆ.

ಅಲ್ಲದೆ ಮಹಿಳಾ ಉದ್ಯೋಗಿಗಳು ಚಪ್ಪಲ್, ಸ್ಯಾಂಡಲ್ ಅಥವಾ ಬೂಟುಗಳನ್ನು ಧರಿಸಬೇಕು ಮತ್ತು ಪುರುಷರು ಶೂ ಅಥವಾ ಸ್ಯಾಂಡಲ್ ಧರಿಸಬೇಕು ಎಂದು ಹೇಳಲಾಗಿದೆ.

ಉಡುಪು ಸಾಮಾನ್ಯ ಗೌರವಯುತವಾಗಿಲ್ಲದೆ ಹೋದಲ್ಲಿ ಅದು ಅವರ ಕೆಲಸದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎಂದು ಸುತ್ತೋಲೆ ತಿಳಿಸಿದೆ.

English summary
Jeans and t-shirt may mean stress-free wear for some, but they are no longer suitable office attire’ for government employees in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X