ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಯಾಸ್ ಸೋರಿಕೆಯಾಗಿಲ್ಲ; ನಿಟ್ಟುಸಿರು ಬಿಟ್ಟ ಮುಂಬೈ ಜನರು

|
Google Oneindia Kannada News

ಮುಂಬೈ, ಜೂನ್ 07 : ಮುಂಬೈ ನಗರದಲ್ಲಿ ಗ್ಯಾಸ್ ಸೋರಿಕೆಯಾಗಿಲ್ಲ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶನಿವಾರ ರಾತ್ರಿಯಿಂದ ನಗರದಲ್ಲಿ ಕೆಟ್ಟ ವಾಸನೆ ಅನುಭವಕ್ಕೆ ಬಂದಿದ್ದು ಜನರು ಗ್ಯಾಸ್ ಸೋರಿಕೆ ಆಗಿದೆ ಎಂದು ಮಹಾನಗರ ಪಾಲಿಕೆಗೆ ದೂರುಗಳನ್ನು ಸಲ್ಲಿಸಿದ್ದರು.

Recommended Video

Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | Oneindia Kannada

ಚೆಂಬೂರು, ಘಾಟ್‌ಕೋಪರ್, ಕಾಂಜೂರ್‌ ಮಾರ್ಗ್, ವಿಕ್ರೋಲಿ, ಅಂಧೇರಿ ಸೇರಿದಂತೆ ವಿವಿಧ ಪ್ರದೇಶಗಳ ಜನರು ಕೆಟ್ಟ ವಾಸನೆ ಬಗ್ಗೆ ಮುಂಬೈ ಮಹಾನಗರ ಪಾಲಿಕೆಗೆ ದೂರು ನೀಡಿದ್ದರು. ಗ್ಯಾಸ್ ಸೋರಿಕೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.

ಗ್ಯಾಸ್ ಸೋರಿಕೆಯಿಂದ ಮೃತ ಪಟ್ಟ ಕುಟುಂಬಕ್ಕೆ 1 ಕೋಟಿ ಪರಿಹಾರಗ್ಯಾಸ್ ಸೋರಿಕೆಯಿಂದ ಮೃತ ಪಟ್ಟ ಕುಟುಂಬಕ್ಕೆ 1 ಕೋಟಿ ಪರಿಹಾರ

ಮುಂಬೈ ಮಹಾನಗರ ಪಾಲಿಕೆ 17 ಅಗ್ನಿ ಶಾಮಕ ದಳಗಳನ್ನು ಗ್ಯಾಸ್ ಸೋರಿಕೆ ಪತ್ತೆ ಮಾಡಲು ನಿಯೋಜನೆ ಮಾಡಿತ್ತು. ಭಾನುವಾರ ಮಧ್ಯಾಹ್ನದ ತನಕ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಗ್ಯಾಸ್ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟಿರಿನ್ ಗ್ಯಾಸ್!ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟಿರಿನ್ ಗ್ಯಾಸ್!

No Gas Leakage Found In Mumbai City Says Fire Dept

ಧೈರ್ಯದಿಂದ ಇರುವಂತೆ ಜನರಿಗೆ ಮುಂಬೈ ಮಹಾನಗರ ಪಾಲಿಕೆ ಹೇಳಿದ್ದು, ಹೆಚ್ಚು ವಾಸನೆ ಇರುವ ಪ್ರದೇಶಗಳಲ್ಲಿ ಜನರು ಒದ್ದೆ ಬಟ್ಟೆ ಅಥವ ಕರವಸ್ತ್ರಗಳನ್ನು ಮೂಗಿಗೆ ಕಟ್ಟಿಕೊಳ್ಳುವಂತೆ ಸಲಹೆ ನೀಡಿದೆ. ವಾಸನೆಯ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

Fact Check: ಮುಂಬೈ, ಪುಣೆಯಲ್ಲಿ ಮಿಲಿಟರಿ ಲಾಕ್‌ಡೌನ್‌ ಜಾರಿ?Fact Check: ಮುಂಬೈ, ಪುಣೆಯಲ್ಲಿ ಮಿಲಿಟರಿ ಲಾಕ್‌ಡೌನ್‌ ಜಾರಿ?

ಗ್ಯಾಸ್ ಸೋರಿಕೆಯಾಗಿಲ್ಲ ಜನರು ಆತಂಕಗೊಳ್ಳುವುದು ಬೇಡ ಎಂದು ಅಗ್ನಿ ಶಾಮಕ ದಳದ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ.

English summary
After the complaints of gas leak Mumbai fire department confirmed that no gas leakage was found in the city. Several complaints of suspected gas leak reported from various parts in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X