ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಗೆ ಸೇರಿದ 100 ಕೋಟಿ ಬಂಗಲೆ ನೆಲಸಮ!

|
Google Oneindia Kannada News

ಮುಂಬೈ, ಮಾರ್ಚ್ 08: ಪಂಜಾಬ್ ನ್ಯಾಷನಲ್‍ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶದಿಂದ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಸೇರಿರುವ ಬಂಗಲೆಯೊಂದನ್ನು ಸ್ಫೋಟಕಗಳ ಮೂಲಕ ಇಂದು ನೆಲ ಸಮಗೊಳಿಸಲಾಯಿತು.

ಮಹಾರಾಷ್ಟ್ರದ ರಾಯ್ ಗಢ ಜಿಲ್ಲೆಯ ಆಲಿಬಾಗ್ ನಲ್ಲಿದ್ದ ಈ ಬಂಗಲೆ ಮೌಲ್ಯ 100 ಕೋಟಿ ರುಗೂ ಅಧಿಕ ಎನ್ನಲಾಗಿದೆ. ಬಾಂಬೆ ಹೈಕೋರ್ಟ್ ಆದೇಶದಂತೆ ರಾಯಗಢದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಟ್ಟಡ ನೆಲಸಮ ಕಾರ್ಯಾಚರಣೆ ಯಶಸ್ವಿಯಾಗಿದೆ.

Nirav Modis Rs 100-cr bungalow in Alibaug demolished with explosives

ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿ

ಮುಂಬೈನಿಂದ 90 ಕಿ.ಮೀ ದೂರದಲ್ಲಿರುವ ಕಡಲ ದಡದಲ್ಲಿ ನೀರವ್ ಮೋದಿಯ ರೂಪನ್ಯ ಎಂಬ ಹೆಸರಿನ ಈ ಬಂಗಲೆ ನಿರ್ಮಾಣದಲ್ಲಿ ಕರಾವಳಿ ನಿಯಂತ್ರಣ ವಲಯ ಹಾಗೂ ಕಾನೂನು ನಿಯಮ ಉಲ್ಲಂಘಿಸಲಾಗಿತ್ತು. ಸುಮಾರು 33, 000 ಚದರಡಿಯಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗಿದ್ದ ಐಷಾರಾಮಿ ಬಂಗಲೆಯನ್ನು ಡೈನಾಮೆಟ್ ಬಳಸಿ ಹಂತ ಹಂತವಾಗಿ ಕೆಡವಲಾಯಿತು.

ಮಲ್ಯ, ನೀರವ್ ಮೋದಿ ಪರಾರಿಗೆ ಅಲೋಕ್ ವರ್ಮಾ ನೆರವು? ಮಲ್ಯ, ನೀರವ್ ಮೋದಿ ಪರಾರಿಗೆ ಅಲೋಕ್ ವರ್ಮಾ ನೆರವು?

ಈ ಬಂಗಲೆಯ ಅಡಿಪಾಯ, ಮತ್ತು ಪಿಲ್ಲರ್ ಗಳು ಗಟ್ಟಿಯಾಗಿರುವುದರಿಂದ ಸ್ಫೋಟಕಗಳನ್ನು ಬಳಸಿ ಕೆಡವಬೇಕಿದೆ ಎಂದು ಕೋರ್ಟಿಗೆ ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿತ್ತು. ಈ ಬಂಗಲೆಯ ವಿರುದ್ಧ 2009ರಲ್ಲಿ ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಬಾಂಬೆ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪರಿಸರ ವಲಯವನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.

ಭಾರತದಲ್ಲಿ ಸುರಕ್ಷತೆಯಿಲ್ಲ, ನಾನು ಬರಲಾರೆ: ನೀರವ್ ಮೋದಿ ಭಾರತದಲ್ಲಿ ಸುರಕ್ಷತೆಯಿಲ್ಲ, ನಾನು ಬರಲಾರೆ: ನೀರವ್ ಮೋದಿ

ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ಜನವರಿ 25ರಂದು ಆರಂಭವಾಗಿತ್ತು. ಆದರೆ, ಎರಡೇ ದಿನದಲ್ಲಿ ಈ ಕಾರ್ಯ ಸ್ಥಗಿತವಾಗಿತ್ತು. ಬಂಗಲೆ ಒಳಭಾಗದಲ್ಲಿದಲ್ಲಿರುವ ಬೆಲೆಬಾಳುವ ವಸ್ತಗಳನ್ನು ಜಪ್ತಿ ಮಾಡುವ ನಿಟ್ಟಿನಲ್ಲಿ ನೆಲಸಮ ಕಾರ್ಯ ನಿಲ್ಲಿಸಲಾಗಿತ್ತು. ಮೋದಿ ಬಂಗಲೆ ಅಲ್ಲದೆ ಇನ್ನು 58 ಕಟ್ಟಡಗಳ ನೆಲಸಮಕ್ಕೆ ಕೋರ್ಟ್ ಆದೇಶಿಸಿದೆ.

English summary
PNB scam's main accused Nirav Modi's sea facing luxury mansion worth of 100 crore was demolished with a huge quantity of explosives on Friday, a district administration officer said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X