ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಗೆ ಸೇರಿದ ತೈಲ ಚಿತ್ರ ಕೋಟ್ಯಂತರ ಮೊತ್ತಕ್ಕೆ ಸೇಲ್

|
Google Oneindia Kannada News

ಮುಂಬೈ, ಮಾರ್ಚ್ 27: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಲು ತನಿಖಾ ಸಂಸ್ಥೆ ಮುಂದಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನೀರವ್​ಮೋದಿ ಅವರು ಹೊಂದಿರುವ ಎರಡು ತೈಲಚಿತ್ರಗಳನ್ನು ಮಂಗಳವಾರದಂದು ಹರಾಜು ಹಾಕಲಾಗಿದ್ದು, 54.88 ಕೋಟಿ ರು ಗೆ ಮಾರಾಟವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

 ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಮೋದಿ ಬಳಿ ಇರುವ ಭಾರತೀಯ ಖ್ಯಾತ ವರ್ಣಚಿತ್ರಕಾರ ರಾಜಾ ರವಿವರ್ಮಾ ಅವರ ಎರಡು ಪೇಟಿಂಗ್​ಗಳನ್ನು ಜಾರೀ ನಿರ್ದೇಶನಾಲಯ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ವಿಎಸ್ ಗಾಯ್ತೊಂಡೆ ಚಿತ್ರಿಸಿರುವ ತೈಲ ವರ್ಣ ಚಿತ್ರವು 22 ಕೋಟಿ ರು ಗೆ ಮಾರಾಟವಾಗಿದ್ದರೆ, ತಿರುವಾಂಕೂರು ಮಹಾರಾಜರು ರಿಚರ್ಡ್ ಟೆಂಪಲ್ ಸ್ವಾಗತ ಚಿತ್ರ, ಬಂಕಿಂಗ್ ಹ್ಯಾಮ್ ಡ್ಯೂಕ್ ಚಿತ್ರವು 14 ಕೋಟಿರುಗೆ ಮಾರಾಟವಾಗಿದೆ.

Nirav Modis paintings sold for Rs 54.84 cr in auction

ನೀರವ್ ಮೋದಿ ಒಡೆತನದ ಸುಮಾರು 173 ಪೇಂಟಿಂಗ್​ಗಳು ಹಾಗೂ 11 ವಾಹನಗಳನ್ನು ಇಡಿ ಮಾರಾಟ ಮಾಡಲು ಮುಂದಾಗಿತ್ತು. ಸದ್ಯಕ್ಕೆ 68 ಪೇಟಿಂಗ್ ಗಳು ಆದಾಯ ತೆರಿಗೆ ಇಲಾಖೆ ವಶದಲ್ಲಿದೆ. ಈ ದುಬಾರಿ ಪೇಂಟಿಂಗ್​ಗಳ ಒಟ್ಟು ಮೌಲ್ಯ 57.72 ಕೋಟಿ ರೂ ಎಂದು ಅಂದಾಜಿಸಲಾಗಿದೆ. ವೃತ್ತಿನಿರತ ಹರಾಜು ಸಂಸ್ಥೆ ಸ್ಯಾಫ್ರನ್ ಆರ್ಟ್

ಲಂಡನ್ : ಪಿಎನ್ ಬಿ ಹಗರಣದ ರೂವಾರಿ ನೀರವ್ ಮೋದಿ ಬಂಧನಲಂಡನ್ : ಪಿಎನ್ ಬಿ ಹಗರಣದ ರೂವಾರಿ ನೀರವ್ ಮೋದಿ ಬಂಧನ

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪವನ್ನು ಹೊತ್ತುಕೊಂಡಿರುವ ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.

English summary
Nirav Modi's extensive art collection, that was seized by the government was sold for Rs 54.84 crores that will be handed over to the Income-Tax department. 55 out of total 68 paintings in his possession were sold on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X