ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಯ ಐಶಾರಾಮಿ ಕಾರುಗಳ ಹರಾಜು, ಟೆಸ್ಟ್ ಡ್ರೈವ್ ಮಾಡುವಂತಿಲ್ಲ

|
Google Oneindia Kannada News

ಮುಂಬೈ, ಏಪ್ರಿಲ್ 01: ಲಂಡನ್‌ನಲ್ಲಿ ಕಂಬಿ ಎಣಿಸುತ್ತಾ ಕೂತಿರುವ ಉದ್ದೇಶಪೂರ್ವಕ ಸುಸ್ತೀದಾರ, ಪಿಎನ್‌ಬಿ ಹಗರಣ ಮುಖ್ಯ ಆರೋಪಿ ನೀರವ್ ಮೋದಿಗೆ ಸೇರಿದ ಐಶಾರಾಮಿ ಕಾರುಗಳನ್ನು ಹರಾಜು ಹಾಕಲು ಇಡಿ ಮುಂದಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನೀರವ್ ಮೋದಿಗೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಮೊನ್ನೆಯಷ್ಟೆ ನೀರವ್‌ಗೆ ಸೇರಿದ ದುಬಾರಿ ಚಿತ್ರಗಳ ಸಂಗ್ರಹವನ್ನು ಹರಾಜು ಹಾಕಲಾಗಿದೆ. ಅದರಿಂದ 50 ಕೋಟಿ ಹಣವನ್ನು ಸಂಗ್ರಹಿಸಲಾಗಿದೆ. ಈಗ ನೀರವ್‌ರ ಕಾರುಗಳನ್ನು ಹರಾಜಿಗೆ ಇಡಲಾಗುತ್ತಿದೆ. ಹರಾಜು ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ.

ನೀರವ್ ಮೋದಿಗೆ ಸೇರಿದ ತೈಲ ಚಿತ್ರ ಕೋಟ್ಯಂತರ ಮೊತ್ತಕ್ಕೆ ಸೇಲ್ನೀರವ್ ಮೋದಿಗೆ ಸೇರಿದ ತೈಲ ಚಿತ್ರ ಕೋಟ್ಯಂತರ ಮೊತ್ತಕ್ಕೆ ಸೇಲ್

ನೀರವ್ ಮೋದಿಗೆ ಸೇರಿದ 13 ಕಾರುಗಳನ್ನು ಹರಾಜು ಮಾಡಲಾಗುತ್ತಿದ್ದು, ಹರಾಜಿಗೆ ಒಂದು ವಾರ ಮುಂಚೆ ಹರಾಜಿನಲ್ಲಿ ಭಾಗವಹಿಸುವವರು ಕಾರುಗಳನ್ನು ಪರಿಶೀಲನೆ ಮಾಡಬಹುದಾಗಿದೆ, ಆದರೆ ಅದನ್ನು ಟೆಸ್ಟ್ ಡ್ರೈವ್ ಮಾಡಲು ಅವಕಾಶ ನೀಡಿಲ್ಲ.

Nirav Modis cars has been sold by online bidding

ನೀರವ್ ಮೋದಿ ಸಂಗ್ರಹದಲ್ಲಿ ಐಶಾರಾಮಿ ಕಾರುಗಳು ಹಲವಿವೆ. ಒಂದು ರೋಲ್ಸ್ ರಾಯ್ಸ್, ಎರಡು ಬೆಂಜ್ ಕಾರ್, ಫೋರ್ಸ್ ಪನಾಮೆರಾ ಎಂಬ ದುಬಾರಿ ಕಾರು, ಮೂರು ಹೊಂಡಾ ಕಂಪೆನಿಯ ಕಾರುಗಳು, ಒಂದು ಟೊಯೋಟಾ ಫಾರ್ಚುನರ್ ಕಾರು, ಟೊಯೊಟಾ ಇನ್ನೋವಾ ಕಾರುಗಳನ್ನು ಹರಾಜಿಗೆ ಇಡಲಾಗುತ್ತಿದೆ.

ನೀರವ್ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್ ಕೋರ್ಟ್‌ ನೀರವ್ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್ ಕೋರ್ಟ್‌

ಮಹಾರಾಷ್ಟ್ರ ರಾಜ್ಯ ಸರ್ಕಾರದ ಅಧೀನ ಸಂಸ್ಥೆಯೊಂದಕ್ಕೆ ಹರಾಜಿನ ಜವಾಬ್ದಾರಿ ವಹಿಸಲಾಗಿದ್ದು, ಏಪ್ರಿಲ್ 18 ರಂದು ಹರಾಜು ನಡೆಯಲಿದೆ.

ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿಯು ಇತ್ತೀಚೆಗಷ್ಟೆ ಎರಡನೇ ಬಾರಿ ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು, ಆದರೆ ಅದನ್ನು ನಿರಾಕರಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 26ಕ್ಕೆ ಮುಂದೂಡಲಾಗಿದೆ.

English summary
Nirav Modi's luxury cars will be sold on online auction on April 18. Nirav Modi has rolls royce, force panamera and three Benz cars and many other cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X