ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿ, ಚೋಕ್ಸಿ ಐಷಾರಾಮಿ ಕಾರು ಹರಾಜು ಹಾಕಿದ 'ಇಡಿ'

|
Google Oneindia Kannada News

ಮುಂಬೈ, ಏಪ್ರಿಲ್ 26: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಿಗೆ ಸೇರಿದ ಆಸ್ತಿ, ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುವ ಜಾರಿ ನಿರ್ದೇಶನಾಲಯ(ಇಡಿ) ಹರಾಜು ಪ್ರಕ್ರಿಯೆ ಮುಂದುವರೆಸಿದೆ.

ನೀರವ್, ಮೆಹುಲ್ ಅವರಿಗೆ ಸೇರಿದ 12ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನು ಶುಕ್ರವಾರದಂದು ಹರಾಜು ಹಾಕಿರುವ ಜಾರಿ ನಿರ್ದೇಶನಾಲಯವು 3.29 ಕೋಟಿ ರು ಸಂಗ್ರಹಿಸಿದೆ.

ನೀರವ್ ಮೋದಿಗೆ ಸಿಗಲಿಲ್ಲ ಜಾಮೀನು, ಮೇ 24ರ ತನಕ ಜೈಲು ನೀರವ್ ಮೋದಿಗೆ ಸಿಗಲಿಲ್ಲ ಜಾಮೀನು, ಮೇ 24ರ ತನಕ ಜೈಲು

ನೀರವ್, ಮೆಹುಲ್ ಚೋಕ್ಸಿಗೆ ಸೇರಿದ 13 ಕಾರುಗಳನ್ನು ಇ ಹರಾಜಿನ ಮೂಲಕ ಮೆಟಲ್ ಸ್ಕ್ರಾಪ್ ಟ್ರೇಡ್ ಕಾರ್ಪೊರೇಷನ್ (ಎಂಸಿಟಿಸಿ) ಲಿಮಿಟೆಡ್ ಸಂಸ್ಥೆ ಹರಾಜು ಹಾಕಿದೆ. 13 ವಾಹನಗಳ ಪೈಕಿ 11 ನೀರವ್ ಗೀ ಹಾಗೂ 2 ಮೆಹುಲ್ ಚೋಕ್ಸಿಗೆ ಸೇರಿದ್ದಾಗಿದೆ. ಒಟ್ಟಾರೆ, 3,28,94,293 ರು ಸಂಗ್ರಹವಾಗಿದೆ.

Nirav Modi, Mehul Choksi’s luxury cars fetch ₹3.29 cr at auction: ED

ನೀರವ್ ಮೋದಿ ಅವರಿಗೆ ಸೇರಿದ 255 ಕೋಟಿ ರು ಮೌಲ್ಯದ ಆಭರಣಗಳನ್ನು ಇತ್ತೀಚೆಗೆ ಹಾಂಗ್ ಕಾಂಗ್ ನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಈಗ ಇನ್ನಿತರ ಕಡೆಗಳಲ್ಲಿ ವಶ ಪಡಿಸಿಕೊಳ್ಳಲು ಮುಂತಾದಿರುವ ವಜ್ರಾಭರಣಗಳ ಮೌಲ್ಯ 4,700 ಕೋಟಿ ರು ದಾಟಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನೀರವ್ ಬಂಧನ, ಎಲೆಕ್ಷನ್ ಟೈಮಲ್ಲಿ ಒಳ್ಳೆ ಗಿಮಿಕ್ : ಕಾಂಗ್ರೆಸ್ ನೀರವ್ ಬಂಧನ, ಎಲೆಕ್ಷನ್ ಟೈಮಲ್ಲಿ ಒಳ್ಳೆ ಗಿಮಿಕ್ : ಕಾಂಗ್ರೆಸ್

ಪಿಎಂಎಲ್ಎ ಕಾಯ್ದೆ ಉಲ್ಲಂಘನೆ ಎಅಡಿಯಲ್ಲಿ ಥೈಲ್ಯಾಂಡ್ ನಲ್ಲಿ 13 ಕೋಟಿ ರು ಮೌಲ್ಯದ ಆಸ್ತಿ ವಶ ಪಡಿಸಿಕೊಳ್ಳಲಾಗಿತ್ತು. ಗೀತಾಂಜಲಿ ಸಮೂಹ ಸಂಸ್ಥೆಗೆ ಸೇರಿದ ಈ ಆಸ್ತಿಗೆ ನೀರವ್ ಅವರ ಅಂಕಲ್ ಮೆಹುಲ್ ಚೋಕ್ಸಿ ಅವರು ಸಹ ಮಾಲೀಕರಾಗಿದ್ದಾರೆ

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪವನ್ನು ಹೊತ್ತುಕೊಂಡಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.

ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿಯನ್ನು ನಿರಾಕರಿಸಲಾಗಿದೆ.

English summary
A dozen luxury cars of Punjab National Bank scam accused businessmen Nirav Modi and Mehul Choksi have been auctioned, fetching the government exchequer ₹3.29 crore, the Enforcement Directorate (ED) said on Friday. The vehicles were attached by the agency under the Prevention of Money Laundering Act (PMLA) in the past.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X