ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ನದಿಯಿಂದ ಡಿವಿಆರ್, ನಂಬರ್ ಪ್ಲೇಟ್ ಹೊರತೆಗೆದ ಎನ್‌ಐಎ

|
Google Oneindia Kannada News

ಮುಂಬೈ, ಮಾರ್ಚ್ 29: ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಮಿಥಿ ನದಿ ಬಳಿ ಕರೆದೊಯ್ದ ಪೊಲೀಸರು, ಮುಳುಗು ತಜ್ಞರ ಸಹಾಯದಿಂದ ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು (ಡಿವಿಆರ್), ಸಿಪಿಯುಗಳು, ಒಂದು ಲ್ಯಾಪ್‌ಟಾಪ್ ಮತ್ತು ಎರಡು ನಂಬರ್ ಪ್ಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಕೇಶ್ ಅಂಬಾನಿ ಮನೆ ಮುಂದೆ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ಪತ್ತೆಯಾಗಿದ್ದು ಮತ್ತು ಕಾರ್ ಮಾಲೀಕ ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಪರಿಶೀಲನೆ ನಡೆಸುತ್ತಿದೆ.

'ಈ ಪ್ರಕರಣದಲ್ಲಿ ನನ್ನನ್ನು ಹರಕೆಯ ಕುರಿ ಮಾಡಲಾಗಿದೆ': ವಾಜೆ ಆರೋಪ'ಈ ಪ್ರಕರಣದಲ್ಲಿ ನನ್ನನ್ನು ಹರಕೆಯ ಕುರಿ ಮಾಡಲಾಗಿದೆ': ವಾಜೆ ಆರೋಪ

ಮುಳುಗುತಜ್ಞರ ನೆರವಿನಿಂದ ಪತ್ತೆ ಕಾರ್ಯಾಚರಣೆ ನಡೆಸಿದ ಎನ್‌ಐಎ, ರೂಟರ್‌ಗಳು, ಕಂಪ್ಯೂಟರ್ ಕ್ಯಾಟ್ರಿಡ್ಜ್ ಮತ್ತು ಇತರೆ ವಸ್ತುಗಳನ್ನು ನದಿಯಿಂದ ಸಂಗ್ರಹಿಸಿದೆ. ಈ ಡಿವಿಆರ್ ಅನ್ನು ವಾಜೆ ವಾಸಿಸುವ ಥಾಣೆಯಲ್ಲಿನ ಹೌಸಿಂಗ್ ಸೊಸೈಟಿಯಿಂದ ತೆಗೆದು ಹಾಕಿರುವುದು ಎನ್ನಲಾಗಿದೆ.

NIA Recovers DVR, Number Plates, CPU From Mithi River In Presence Of Sachin Vaze

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಂದ್ರಾ ಕುರ್ಲಾ ಸಂಕೀರ್ಣದ ಬಳಿಯ ಸ್ಥಳಕ್ಕೆ ವಾಜೆಯನ್ನು ಕರೆದೊಯ್ದ ಎನ್‌ಐಎ ತಂಡ ಪರಿಶೀಲನೆ ನಡೆಸಿತು. ಎನ್‌ಐಎ ಬಂಧನದಲ್ಲಿರುವ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ರಿಯಾಜುದ್ದೀನ್ ಕಾಜಿ, ತನ್ನ ವಿಚಾರಣೆಯ ವೇಳೆ ಮಿಥಿ ನದಿಗೆ ಈ ಪುರಾವೆಗಳನ್ನು ಎಸೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಹತ್ಯೆಗೂ ಮುನ್ನ ಮನ್ಸುಖ್ ಹಿರೇನ್‌ಗೆ ಕ್ಲೋರೋಫಾರ್ಮ್: ಎಟಿಎಸ್ಹತ್ಯೆಗೂ ಮುನ್ನ ಮನ್ಸುಖ್ ಹಿರೇನ್‌ಗೆ ಕ್ಲೋರೋಫಾರ್ಮ್: ಎಟಿಎಸ್

Recommended Video

IPL ನಲ್ಲಿ ಇದ್ದುಕೊಂಡೆ ಅದನ್ನ ಮಾಡ್ತೀನಿ ಅಂದ್ರು ಭುವಿ | Oneindia Kannada

ವಾಜೆಯ ಆಪ್ತನಾಗಿದ್ದ ಕಾಜಿಯನ್ನು ಎನ್‌ಐಎ ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ. ವಾಜೆಯ ಸೂಚನೆಯಂತೆ ಕಾಜಿ ಹೌಸಿಂಗ್ ಸೊಸೈಟಿಯಿಂದ ಡಿವಿಆರ್ ಅನ್ನು ತೆಗೆದುಕೊಂಡು ಹೋಗಿ ನದಿಗೆ ಎಸೆದಿದ್ದರು ಎನ್ನಲಾಗಿದೆ.

English summary
Mukesh Ambani Bomb Scare Case: NIA recovers DVR, number plates, CPU and laptop from Mithi river in presence of Sachin Vaze.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X