ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಬಿಜೆಪಿಗೆ ಡಿವೋರ್ಸ್ ಕೊಡಿ: ಶಿವಸೇನೆಗೆ NCP ಸಲಹೆ

|
Google Oneindia Kannada News

ಮುಂಬೈ, ನವೆಂಬರ್ 05: "ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಡಿವೋರ್ಸ್ ಕೊಡುವುದಾಗಿ ಶಿವಸೇನೆ ಘೋಷಿಸಿದರೆ ಸರ್ಕಾರ ರಚನೆಯ ಪರ್ಯಾಯ ವ್ಯವಸ್ಥೆ ಹುಡುಕಬಹುದು" ಎಂದು ನ್ಯಾಶ್ನಲಿಸ್ಟಿಕ್ ಕಾಂಗ್ರೆಸ್ ಪಕ್ಷ ಸಲಹೆ ನೀಡಿದೆ.

"ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದು ಆಗಲೇ ಹತ್ತು ದಿನದ ಮೇಲಾಗಿದೆ. ಆದರೂ ರಾಜ್ಯದಲ್ಲಿ ಸರ್ಕಾರ ರಚನೆಯಾಗಿಲ್ಲ. ಬಿಜೆಪಿ-ಶಿವಸೇನೆ ಈಗಲೂ ಒಮ್ಮತಕ್ಕೆ ಬಂದಿಲ್ಲ. ನಾವು ಶಿವಸೇನೆಯೊಂದಿಗೆ ಸೇರಿ ಪರ್ಯಾಯ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ. ಆದರೆ ಶಿವಸೇನೆ ಬಿಜೆಪಿ ಅಥವಾ ಎನ್ ಡಿಎ ಯೊಂದಿಗೆ ಗುರುತಿಸಿಕೊಳ್ಳಬಾರದು, ಮೈತ್ರಿಯಿಂದ ಹೊರಬರಬೇಕು" ಎಂದು ಎನ್ ಸಿಪಿ ನಾಯಕರೊಬ್ಬರು ಹೇಳಿದ್ದಾಗಿ ಕೆಲವು ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ಗೆ ಶಿವಸೇನೆ ಪತ್ರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ಗೆ ಶಿವಸೇನೆ ಪತ್ರ

ಶರದ್ ಪವಾರ್ ನೇತೃತ್ವದ ಎನ್ ಸಿಪಿ ಕಾಂಗ್ರೆಸ್ ನೊಂದಿಗೆ ಸೇರಿ ಶಿವಸೇನೆಗೆ ಬೆಂಬಲ ನೀಡಲು ಸಿದ್ಧವಾಗಿದೆ.

ಮುಖ್ಯಮಂತ್ರಿ ಸ್ಥಾನ ನೀಡಲೂ ಸಿದ್ಧ

ಮುಖ್ಯಮಂತ್ರಿ ಸ್ಥಾನ ನೀಡಲೂ ಸಿದ್ಧ

ಬಿಜೆಪಿ-ಶಿವಸೇನೆ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ವೈಮನಸ್ಯ ಎದ್ದಿದೆ. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನವನ್ನೇ ನೀಡಲು ನಾವು ಸಿದ್ಧ. ಆದರೆ ಬಿಜೆಪಿಯನ್ನು ಬಿಟ್ಟು ಅದು ಹೊರಬರಬೇಕು ಎಂಬ ಆಫರ್ ಅನ್ನೂ ಎನ್ ಸಿಪಿ ಶಿವಸೇನೆ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

"ಅವರು ಮನಸ್ಸು ಮಾಡಿದರೆ 2 ತಾಸಿನಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗತ್ತೆ"

ಕೇಂದ್ರ ಸಚಿವರ ರಾಜೀನಾಮೆ

ಕೇಂದ್ರ ಸಚಿವರ ರಾಜೀನಾಮೆ

ಶಿವಸೇನೆಯ ಏಕೈಕ ಕೇಂದ್ರ ಸಚಿವ ಅರವಿಂದ್ ಸಾವಂತ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಮೂಲಕ ಎನ್ ಡಿ ಎಯಿಂದಲೂ ಶಿವಸೇನೆ ಹೊರಬಂದಿದೆ ಎಂಬುದು ಖಚಿತವಾಗಬೇಕು. ಆಗ ಮಾತ್ರವೇ ಎನ್ ಸಿಪಿ ಶಿವಸೇನೆಗೆ ತನ್ನ ಬಾಗಿಲು ತೆರಯಲಿದೆ ಎಂದು ಎನ್ ಸಿಪಿ ತಾಕೀತು ಹಾಕಿದೆ ಎಂದು ಮೂಲಗಳು ತಿಳಿಸಿವೆ.

'ಕಮಲ'ಕ್ಕೇ ಆಪರೇಷನ್ ಭೀತಿ!

'ಕಮಲ'ಕ್ಕೇ ಆಪರೇಷನ್ ಭೀತಿ!

ಚುನಾವಣೆಗೂ ಮುನ್ನ ಬಿಜೆಪಿ ಹಲವು ಪಕ್ಷದ ಪ್ರಮುಖ ನಾಯಕರನ್ನು ತನ್ನ ಪಕ್ಷಕ್ಕೆ ಆಹ್ವಾನಿಸಿ ಟಿಕೆಟ್ ನೀಡಿತ್ತು. ಅವರೆಲ್ಲರೂ ಇದೀಗ ವಾಸಸ್ ತಮ್ಮ ತಮ್ಮ ಪಕ್ಷಕ್ಕೆ ಮರಳಲು ಸಿದ್ಧರಿದ್ದಾರೆ. ಆ ಸಂಖ್ಯೆ 25-30 ರಷ್ಟಿದೆ ಎಂದು ಬೆದರಿಕೆಯನ್ನೂ ಒಡ್ಡಲಾಗಿದೆ!

ಅತಂತ್ರ ವಿಧಾನಸಭೆ

ಅತಂತ್ರ ವಿಧಾನಸಭೆ

ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ.

English summary
NCP suggests Shiv Sena To Divorce BJP First,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X