ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ರಾಜಕೀಯ ; ಸುಪ್ರೀಂ ಮೊರೆ ಹೋಗಲಿವೆ ಮೈತ್ರಿ ಪಕ್ಷ?

|
Google Oneindia Kannada News

ಮುಂಬೈ, ನವೆಂಬರ್ 23 : ಮಹಾರಾಷ್ಟ್ರ ರಾಜಕೀಯದಲ್ಲಿ ಶನಿವಾರ ಮುಂಜಾನೆ ಉಂಟಾದ ಬೆಳವಣಿಗೆ ಮೈತ್ರಿ ಪಕ್ಷಗಳನ್ನು ಬೆಚ್ಚಿ ಬೀಳಿಸಿದೆ. ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿ ಸುಪ್ರೀಂಕೋರ್ಟ್ ಮೊರೆ ಹೋಗಲು ತೀರ್ಮಾನಿಸಿವೆ.

ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದ ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದೆ. ದೇವೇಂದ್ರ ಫಡ್ನವೀಸ್ ಎನ್‌ಸಿಪಿಯ ಅಜಿತ್ ಪವಾರ್ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

'ಸ್ಟೋರಿಯಲ್ಲಿ ಟ್ವಿಸ್ಟ್': ಎನ್‌ಸಿಪಿಯಿಂದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಉಚ್ಛಾಟನೆ? 'ಸ್ಟೋರಿಯಲ್ಲಿ ಟ್ವಿಸ್ಟ್': ಎನ್‌ಸಿಪಿಯಿಂದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಉಚ್ಛಾಟನೆ?

ಎನ್‌ಸಿಪಿಯ ಎಲ್ಲಾ 54 ಶಾಸಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬೆಂಬಲ ಕೊಟ್ಟಿಲ್ಲ. ಅಜಿತ್ ಪವಾರ್ ಜೊತೆಗಿದ್ದ ಶಾಸಕರು ಬೆಂಬಲ ನೀಡಿದ್ದು, ಅಜಿತ್ ಪವಾರ್‌ಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಕ್ಕಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಪ್ರಯತ್ನದಲ್ಲಿದ್ದ ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿಗೆ ಇದು ದೊಡ್ಡ ಅಘಾತ ನೀಡಿದೆ.

ಮಹಾರಾಷ್ಟ್ರ ಬೆಳವಣಿಗೆ: ಅಜಿತ್ ಪವಾರ್ ನಡೆಗೆ ಶರದ್ ಪವಾರ್ ಏನಂದ್ರು?ಮಹಾರಾಷ್ಟ್ರ ಬೆಳವಣಿಗೆ: ಅಜಿತ್ ಪವಾರ್ ನಡೆಗೆ ಶರದ್ ಪವಾರ್ ಏನಂದ್ರು?

NCP BJP Alliance Govt Shiv Sena NCP And Congress May Move SC

ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಲು ತೀರ್ಮಾನಿಸಿವೆ. ರಾಜ್ಯಪಾಲರು ತೀರ್ಮಾನ, ತುರ್ತಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಮೈ'ತ್ರಿ'ಗೆ ಬಿಜೆಪಿ ನಾಯಕರು ಇಂಥ ಶಾಕ್ ಕೊಡುವುದೇ?ಮಹಾರಾಷ್ಟ್ರ ಮೈ'ತ್ರಿ'ಗೆ ಬಿಜೆಪಿ ನಾಯಕರು ಇಂಥ ಶಾಕ್ ಕೊಡುವುದೇ?

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಬಳಿಕ ಯಾವ ಪಕ್ಷಗಳೂ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ, ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು. ಶನಿವಾರ ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಳ್ವಿಕೆ ಜಾರಿ ತೆರವು ಮಾಡಲು ಸಹಿ ಹಾಕಲಾಗಿತ್ತು.

English summary
Shiv Sena, NCP and Congress may approach the Supreme Court over Maharashtra political development. NCP-BJP alliance come to power in Maharashtra on November 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X