ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್‌ ಕೇಸ್‌: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅಳಿಯ ಅರೆಸ್ಟ್‌

|
Google Oneindia Kannada News

ಮುಂಬೈ, ಜನವರಿ 14: ಡ್ರಗ್ಸ್‌ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ಎನ್‌ಸಿಬಿ ಬೇಟೆ ಮುಂದುವರೆದಿದ್ದು, ಇದೀಗ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಅಳಿಯನನ್ನು ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ನವಾಬ್ ಮಲಿಕ್ ಅಳಿಯ ಸಮೀರ್ ಖಾನ್‌ರನ್ನು ಬಂಧಿಸಿ, ದಕ್ಷಿಣ ಮುಂಬೈನ ಎನ್‌ಸಿಬಿಯ ಬಲ್ಲಾರ್ಡ್ ಎಸ್ಟೇಟ್ ಕಚೇರಿಯಲ್ಲಿ ಬೆಳಿಗ್ಗೆ ವಿಚಾರಣೆಗೆ ಕರೆಯಲಾಯಿತು.

ಬಾಲಿವುಡ್ ಡ್ರಗ್ ಪ್ರಕರಣ; ಮೇಕಪ್ ಕಲಾವಿದ ಸೂರಜ್ ಗೊಡಂಬೆ ಬಂಧನಬಾಲಿವುಡ್ ಡ್ರಗ್ ಪ್ರಕರಣ; ಮೇಕಪ್ ಕಲಾವಿದ ಸೂರಜ್ ಗೊಡಂಬೆ ಬಂಧನ

ಬೆಳಿಗ್ಗೆ 10 ಗಂಟೆಗೆ ಸಮೀರ್ ಖಾನ್ ಕಚೇರಿ ತಲುಪಿದ್ದು, ಹಲವು ಗಂಟೆಗಳ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

NCB Arrests Maharastra Minister Nawab Maliks Son In Law In Drug Case

ಕಳೆದ ವಾರ ಬ್ರಿಟಿಷ್ ಮೂಲದ ವ್ಯಕ್ತಿಯೊಬ್ಬನ ಬಂಧನ ಸೇರಿದಂತೆ ಇತರ ಇಬ್ಬರನ್ನು ಡ್ರಗ್ಸ್‌ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆ ವೇಳೆ ಆತನ ಮತ್ತು ಡ್ರಗ್ಸ್ ಪ್ರಕರಣದ ಆರೋಪಿಗಳ ನಡುವೆ ಆನ್‌ಲೈನ್ ವಹಿವಾಟು 20,000 ರೂಪಾಯಿ ಎಂದು ತಿಳಿದುಬಂದ ನಂತರ ಸಮೀರ್‌ ಖಾನ್‌ರನ್ನು ಕರೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಮುಂಬೈನ ಪ್ರಸಿದ್ಧ ಮುಚಾದ್ ಪಾನ್ವಾಲಾ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ರಾಮ್‌ಕುಮಾರ್ ತಿವಾರಿ ಅವರನ್ನು ಎನ್‌ಸಿಬಿ ಮಂಗಳವಾರ ಬಂಧಿಸಿದೆ. ಇನ್ನು ಕಳೆದ ವಾರ ಎನ್‌ಸಿಬಿ ಕರಣ್ ಸಜ್ನಾನಿ ಸೇರಿದಂತೆ ಮೂವರನ್ನು ಬಂಧಿಸಿ ಖಾರ್ ಮತ್ತು ಬಾಂದ್ರಾ ಪ್ರದೇಶಗಳಿಂದ 200 ಕೆಜಿ ಡ್ರಗ್ಸ್‌ ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ.

English summary
The Narcotics Control Bureau (NCB) on Wednesday arrested the son-in-law of Maharashtra cabinet minister and NCP leader Nawab Malik in a drugs case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X