• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎನ್ ಸಿಬಿ ಮಾದಕ ಬಲೆಯೊಳಗೆ ಸಿಲುಕಿದ ರಿಂಗ್ ಮಾಸ್ಟರ್ ಶ್ವೇತಾ ಕುಮಾರಿ

|

ಮುಂಬೈ, ಡಿಸೆಂಬರ್ 04: ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಇಟ್ಟುಕೊಂಡು ಮಾದಕ ಜಾಲವನ್ನು ವಿಸ್ತರಿಸಿದ ಆರೋಪದಡಿ ಮತ್ತೊಬ್ಬ ಕನ್ನಡದ ನಟಿ ಎನ್‌ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾಳೆ.

ಡ್ರಗ್ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿಯನ್ನು ಬಂಧಿಸಿದ್ದರು. ಅನಾರೋಗ್ಯದ ಆಧಾರದ ಮೇಲೆ ಜಾಮೀನು ಪಡೆದು ನಟಿ ಸಂಜನಾ ಹೊರ ಬಂದಿದ್ದಾರೆ. ನಟಿ ರಾಗಿಣಿ ಜೈಲಿನಲ್ಲಿದ್ದು ಜನವರಿ 8 ರಂದು ಸುಪ್ರೀಂಕೋರ್ಟ್ ನಲ್ಲಿ ಭವಿಷ್ಯ ನಿರ್ಧಾರವಾಗಲಿದೆ. ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಸದ್ದು ಮಾಡಿದ್ದ ಕನ್ನಡದ ನಟಿ ಶ್ವೇತಾ ಕುಮಾರಿ ಮುಂಬಯಿನಲ್ಲಿ ಎನ್ ಸಿಬಿ ಅಧಿಕಾರಿಗಳ ಬೆಲೆಗೆ ಬಿದ್ದಿದ್ದಾರೆ.

ರಿಂಗ್ ಮಾಸ್ಟರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ವೇತಾ ಕುಮಾರಿ ಮುಂಬಯಿನ ಹೋಟೆಲ್ ನಲ್ಲಿ ತಂಗಿದ್ದರು. ಡ್ರಗ್ ಪೆಡ್ಲರ್ ಜತೆ ತಂಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ 400 ಗ್ರಾಂ ಡ್ರಗ್ ಸಮೇತ ಡ್ರಗ್ ಪೆಡ್ಲರ್ ಚಾಂದ್ ಶೇಖ್ ಮತ್ತು ಶ್ವೇತಾ ಅವರನ್ನು ವಶ್ಕೆ ಪಡೆದಿದ್ದರು. ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಆಧರಿಸಿ ಮಾದಕ ಜಗತ್ತಿನೊಂದಿಗೆ ನೇರ ನಂಟು ಹೊಂದಿದ ವಿಚಾರವಾಗಿ ಶ್ವೇತಾ ಕುಮಾರಿಯನ್ನು ಬಂಧಿಸಿ ಸಕ್ಷಮ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಡ್ರಗ್ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎನ್‌ ಸಿಬಿ ಅಧಿಕಾರಿಗಳು ಚಾಂದ್ ಶೇಖ್ ಎಂಬುವನನ್ನು ಬಂಧಿಸಿದ್ದರು. ಸಯ್ಯದ್ ಎಂಬಾತ ತಲೆ ಮರೆಸಿಕೊಂಡಿದ್ದು, ಕರೀಂ ಎಂಬುವಿಗಾಗಿ ಲುಕ್‌ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಬಂಧಿತ ಚಾಂದ್ ಶೇಖ್ ಸಿನಿಮಾ ನಟಿಯರ ಜತೆ ಸಂಪರ್ಕದಲ್ಲಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಚಾಂದ್ ಶೇಖ್ ನೀಡಿದ ಮಾಹಿತಿ ಮೇರೆಗೆ ರಿಂಗ್ ಮಾಸ್ಟರ್ ನಟಿಯನ್ನು ಎನ್ ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸಾಕ್ಷಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.

ಡ್ರಗ್ ಮಾರಾಟ ಜಾಲದ ಆರೋಪದಡಿ ಚಾಂದ್ ಶೇಖ್ ಮೊದಲು ಮುಂಬಯಿ ಪೊಲೀಸರ ಬಲೆಗೆ ಬಿದ್ದಿದ್ದ. ಇದೀಗ ಎನ್‌ಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಾದಕ ಲೋಕದೊಂದಿಗೆ ಸಿನಿಮಾ ಲಿಂಕ್ ಇರುವ ಸಂಗತಿ ಹೊರ ಬಿದ್ದಿದೆ. ಮೊದಲ ಹಂತದಲ್ಲಿ ವಿಚಾರಣೆಗೆ ಹಾಜರಾಗಲು ನಟಿಗೆ ನೋಟಿಸ್ ನೀಡಿದ್ದರು. ತಮಿಳು ಚಿತ್ರದಲ್ಲಿ ನಟನೆಗಾಗಿ ಸಹಿ ಮಾಡಿದ್ದ ಶ್ವೇತಾಕುಮಾರಿಯ ಮೊಬೈಲ್ ಪಡೆದು ತಪಾಸಣೆ ನಡಸಿದಾಗ ಡ್ರಗ್ ಕುರಿತು ನಡೆಸಿರುವ ಸಂಭಾಷಣೆ ಮತ್ತಿತರ ಸಂಗತಿ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಶ್ವೇತಾ ಕುಮಾರಿಯನ್ನು ಬಂಧಿಸಿದ್ದಾರೆ.

ತಂಡಾ: ಶ್ವೇತಾ ಕುಮಾರಿ ಬಂಧನವಾಗುತ್ತಿದ್ದಂತೆ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಟಿಯಲ್ಲಿ ನಡುಕ ಶುರುವಾಗಿದೆ. ಪರಿಚಿತ ಶ್ವೇತಾ ಬಂಧನಕ್ಕೆ ಒಳಗಾಗಿರುವುದರಿಂದ ಇನ್ನೂ ಯಾರು ವಿಚಾರಣೆ ಎದುರಿಸಬೆಕಾದೀತು ಎಂಬ ಆತಂಕ ಸೃಷ್ಟಿಸಿದೆ. ರಾಜ್ಯದ ಸಿನಿಮಾ ರಂಗವನ್ನು ನಡುಗಿಸಿದ್ದ ಡ್ರಗ್ ಜಾಲ ಇದೀಗ ಮುಂಬಯಿನಲ್ಲಿ ಸದ್ದು ಮಾಡುತ್ತಿದೆ.

English summary
NCB Arrests Sandalwood Actress Shweta Kumari on charges of connection with Drug Peddlers. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X