ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದಲ್ಲಿ ಉರುಳಿದ ನೌಕೆ: ಮೂವರು ನೌಕಾಧಿಕಾರಿಗಳ ಕೋರ್ಟ್ ಮಾರ್ಷಲ್

|
Google Oneindia Kannada News

ನವದೆಹಲಿ, ಜುಲೈ 30: ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಬೆಟ್ವಾ 2016ರಲ್ಲಿ ಮುಳುಗಿದ ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಮೂವರು ಹಿರಿಯ ನೌಕಾ ಅಧಿಕಾರಿಗಳನ್ನು ಸಾಮಾನ್ಯ ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲಾಗಿದೆ.

ಭಾರತೀಯ ನೌಕಾಪಡೆಯ ಕ್ಯಾಪ್ಟನ್ (ಸೇನಾ ಕರ್ನಲ್‌ಗೆ ಸಮಾನವಾದ ಹುದ್ದೆ) ಸೇರಿದಂತೆ ಮೂವರು ಮುಂಬೈ ನೌಕಾ ನೆಲೆಯಲ್ಲಿ ಜನರಲ್ ಕೋರ್ಟ್ ಮಾರ್ಷಲ್‌ ಎದುರಿಸುತ್ತಿದ್ದಾರೆ. ನೌಕಾನೆಲೆಯ ಡಕ್‌ಯಾರ್ಡ್‌ನಲ್ಲಿ ಸುಮಾರು 2,000 ಕೋಟಿ ರೂ. ವೆಚ್ಚದ ನೌಕೆಯು ದುರಸ್ತಿ ಮಾಡುವ ಸಂದರ್ಭದಲ್ಲಿ ಒಂದು ಬದಿ ಉರುಳಿಬಿದ್ದಿತ್ತು.

ಭಾರತೀಯ ನೌಕಾಪಡೆಯಲ್ಲಿ 400ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಭಾರತೀಯ ನೌಕಾಪಡೆಯಲ್ಲಿ 400ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ

ನೌಕಾಪಡೆಯ ಕಮಾಡೋರ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಒಂದು ವಾರದಿಂದ ಕೋರ್ಟ್ ಮಾರ್ಷಲ್ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ.

Navy Officers Facing Court Martial INS Betwa Warship Accident

ಐಎನ್ಎಸ್ ಬೆಟ್ವಾ ನೌಕೆಯನ್ನು ಬಂದರಿನಿಂದ ತೆಗೆಯುತ್ತಿದ್ದಾಗ ಉರುಳಿ ಬಿದ್ದಿತ್ತು. ಘಟನೆಯಲ್ಲಿ ಇಬ್ಬರು ನಾವಿಕರು ಮೃತಪಟ್ಟಿದ್ದರೆ, 14 ಮಂದಿ ಸಣ್ಣ ಪುಟ್ಟ ಗಾಯಗಳಿಂದ ಬಚಾವಾಗಿದ್ದರು.

ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾದ ನೌಕಾಪಡೆ ಮುಖ್ಯಸ್ಥ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾದ ನೌಕಾಪಡೆ ಮುಖ್ಯಸ್ಥ

ನೀರಿನ ಅಡಿಭಾಗದ ದುರಸ್ತಿಗಾಗಿ ಅದನ್ನು ಬಂದರಿನಲ್ಲಿ ನಿಲ್ಲಿಸಲಾಗಿತ್ತು. 3,850 ಟನ್ ತೂಕದ ಶಿಪ್ ಒಂದು ಬದಿ ಮಗುಚಿ ಬಿದ್ದಿತ್ತು. ಬಳಿಕ ಅದನ್ನು ಎತ್ತಿ ಸರಿಪಡಿಸಲಾಗಿತ್ತು. ಪ್ರಸ್ತುತ ಅದು ಕಾರ್ಯಾಚರಣೆ ನಡೆಸುತ್ತಿದೆ. ಈ ಘಟನೆಗೆ ನೌಕಾಪಡೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು.

English summary
Three Navy officers are facing General court martial in the case of warship INS Betwa fell aside in the naval dockyard in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X