ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಜಾತಕ

|
Google Oneindia Kannada News

ಮುಂಬೈ, ಫೆಬ್ರವರಿ.28: ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ. ಈ ಮಾತಿಗೆ ಮುಂಬೈನಲ್ಲಿ ಇರುವ ಕಂಪ್ಯೂಟರ್ ಕ್ಲಾಸ್ ಶಿಕ್ಷಕ ಅಪವಾದದಂತೆ ಇದ್ದಾನೆ.

ಸ್ಪೆಷಲ್ ಕ್ಲಾಸ್ ಗೆ ಬಂದರೆ ಹೆಚ್ಚು ಮಾರ್ಕ್ಸ್ ಕೊಡುವುದಾಗಿ ಆಸೆ ತೋರಿಸುತ್ತಿದ್ದ ಕಂಪ್ಯೂಟರ್ ಕ್ಲಾಸ್ ಶಿಕ್ಷಕ ತಮ್ಮ ವೃತ್ತಿಧರ್ಮವನ್ನೇ ಮರೆತು ವಿದ್ಯಾರ್ಥಿಗಳ ಜೊತೆ ವರ್ತಿಸುತ್ತಿದ್ದನು ಎಂದು ಆರೋಪಿಸಲಾಗಿದೆ.

ಕಳೆದ ಎರಡು ತಿಂಗಳಿನಲ್ಲಿ ಲೋಚನ್ ಪರುಲೇಕರ್ ಎಂಬ ಕಂಪ್ಯೂಟರ್ ಶಿಕ್ಷಕ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದು, ಟರ್ಬೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದುಬೈನಲ್ಲಿ ಭಾರತೀಯನಿಗೆ ಶಿಕ್ಷೆಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದುಬೈನಲ್ಲಿ ಭಾರತೀಯನಿಗೆ ಶಿಕ್ಷೆ

ಮುನ್ಸಿಪಲ್ ಶಾಲೆಯ ಕಂಪ್ಯೂಟರ್ ಶಿಕ್ಷಕ ಲೋಚನ್

ಮುನ್ಸಿಪಲ್ ಶಾಲೆಯ ಕಂಪ್ಯೂಟರ್ ಶಿಕ್ಷಕ ಲೋಚನ್

ನವಮುಂಬೈನಲ್ಲಿ ಮುನ್ಸಿಪಲ್ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕನಾಗಿದ್ದ ಲೋಚನ್ ಪರುಲೇಕರ್, 6, 7 ಮತ್ತು 8 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ಲಾಸ್ ಗಳನ್ನು ತೆಗೆದುಕೊಳ್ಳುತ್ತಿದ್ದನು. ಈ ವೇಳೆ ವಿದ್ಯಾರ್ಥಿಯರ ಜೊತೆ ಅಸಭ್ಯ ರೀತಿಯಲ್ಲಿ ನಡೆದುಕೊಳ್ಳುತಿದ್ದ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ

ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಕಂಪ್ಯೂಟರ್ ಟ್ಯೂಷನ್ ಹೇಳಿಕೊಡುತ್ತಿದ್ದ ಲೋಚನ್, ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಕ್ಸ್ ನೀಡುವ ಆಸೆ ತೋರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಹೀಗೆ 11 ರಿಂದ 14 ವರ್ಷದ ನಡುವಿನ 15 ಮಂದಿ ವಿದ್ಯಾರ್ಥಿಯರಿಗೆ ಈ ಶಿಕ್ಷಕನು ಲೈಂಗಿಕ ಕಿರುಕುಳ ನೀಡಿದ್ದನು ಎಂದು ಹೇಳಲಾಗುತ್ತಿದೆ.

ವಿದ್ಯಾರ್ಥಿನಿಯರಿಗೆ ಆವಾಜ್ ಹಾಕುತ್ತಿದ್ದನಂತೆ ಶಿಕ್ಷಕ?

ವಿದ್ಯಾರ್ಥಿನಿಯರಿಗೆ ಆವಾಜ್ ಹಾಕುತ್ತಿದ್ದನಂತೆ ಶಿಕ್ಷಕ?

ಸ್ಪಷಲ್ ಕ್ಲಾಸ್ ಗೆ ಬಂದ ವಿದ್ಯಾರ್ಥಿನಿಯರ ಜೊತೆಗೆ ಶಿಕ್ಷಕನು ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದನು. ವಿರೋಧ ವ್ಯಕ್ತಪಡಿಸುವ ವಿದ್ಯಾರ್ಥಿನಿಯರಿಗೆ ಆವಾಜ್ ಹಾಕುತ್ತಿದ್ದು ಎಂದು ತಿಳಿದು ಬಂದಿದೆ. ಕೊನೆಗೆ ಒಬ್ಬ ವಿದ್ಯಾರ್ಥಿನಿ, ಶಿಕ್ಷಕನ ವರ್ತನೆ ಬಗ್ಗೆ ದೂರು ನೀಡುತ್ತಿದ್ದಂತೆ ಉಳಿನ 14 ವಿದ್ಯಾರ್ಥಿನಿಯರು ಶಿಕ್ಷಕನ ನಿಜಸ್ವರೂಪವನ್ನು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಫೋಕ್ಸೋ ಕಾಯ್ದೆ ಅಡಿ ಶಿಕ್ಷಕನ ವಿರುದ್ಧ ಕೇಸ್

ಫೋಕ್ಸೋ ಕಾಯ್ದೆ ಅಡಿ ಶಿಕ್ಷಕನ ವಿರುದ್ಧ ಕೇಸ್

ಕಳೆದ ಫೆಬ್ರವರಿ.25ರಂದು ಶಿಕ್ಷಕನನ್ನು ಬಂಧಿಸಿದ ಪೊಲೀಸರು ಅಂದೇ ಆರೋಪಿ ಲೋಚನ್ ಪರುಲೇಕರ್ ನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಇದೀಗ ಕೋರ್ಟ್ ಆರೋಪಿಯನ್ನು ಮಾರ್ಚ್.02ರವರೆಗೂ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ಡೆಪ್ಯುಟಿ ಕಮಿಷನರ್ ಪಂಕಜ್ ದಹಾನೆ ತಿಳಿಸಿದ್ದಾರೆ.

English summary
NaviMumbai Muncipal School Computer Teacher Booked Under Pocso Act. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X