ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ ಐಟಿ ಕಂಪನಿ 19 ಉದ್ಯೋಗಿಗಳಿಗೆ ಕೊರೊನಾ ವೈರಸ್

|
Google Oneindia Kannada News

ಮುಂಬೈ, ಏಪ್ರಿಲ್.22: ಕೊರೊನಾ ವೈರಸ್ ಅಟ್ಟಹಾಸಕ್ಕೆ ಮಹಾರಾಷ್ಟ್ರಕ್ಕೆ ಮಹಾರಾಷ್ಟ್ರವೇ ಹೈರಾಣಾಗಿದೆ. ಮುಂಬೈನ 19 ಐಟಿ ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ನವ ಮುಂಬೈನ ಮಹಾಪೆ ಪ್ರದೇಶದಲ್ಲಿರುವ ಖಾಸಗಿ ಐಟಿ ಕಂಪನಿಯ 19 ಉದ್ಯೋಗಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಎಲ್ಲರನ್ನೂ ಕೊವಿಡ್-19 ಸೋಂಕಿತರಿಗಾಗಿಯೇ ಮೀಸಲು ಇರಿಸಿದ ವಶಿ ಪ್ರದೇಶದ ಎನ್ಎಂಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ? ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?

ಮಹಾಪೆ ಪ್ರದೇಶದಲ್ಲಿ ಇರುವ ಎಂಐಡಿಸಿ ಬ್ಯಾಂಕ್ ಗಳ ಅಂಕಿ-ಅಂಶಗಳ ನಿರ್ವಹಣೆಯ ಹೊಣೆಯನ್ನು ಈ ಐಟಿ ಕಂಪನಿಯು ನಿಭಾಯಿಸುತ್ತಿತ್ತು. ಬ್ಯಾಂಕಿಂಗ್ ವಲಯ ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಈ ಐಟಿ ಕಂಪನಿ 40 ಸಿಬ್ಬಂದಿಯನ್ನಷ್ಟೇ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿತ್ತು.

Navi Mumbai IT Company 19 Employees Test Coronavirus Positive

ಖಾಸಗಿ ಲ್ಯಾಬ್ ಗಳಲ್ಲಿ ಉದ್ಯೋಗಿಗಳ ತಪಾಸಣೆ:

ನವಮುಂಬೈನಲ್ಲಿ ಇರುವ ಐಟಿ ಕಂಪನಿಯು ಖಾಸಗಿ ಪ್ರಯೋಗಾಲಯದಲ್ಲಿ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಕೊರೊನಾ ವೈರಸ್ ತಪಾಸಣೆ ಮಾಡಿಸಿತು. ಈ ವೇಳೆ 19 ಜನರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ 19 ಜನರನ್ನು ಎನ್ಎಂಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖಾಸಗಿ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 19 ಮಂದಿ ಸೋಂಕಿತರ ಪೈಕಿ 7 ಮಂದಿ ನವಮುಂಬೈ ನಿವಾಸಿಗಳು, 7 ಮಂದಿ ಮುಂಬೈ, 2 ಥಾಣೆ, 1 ಸಾಂಗ್ಲಿ, 1 ತೆಲಂಗಾಣ ಹಾಗೂ ಒಬ್ಬ ಸಿಬ್ಬಂದಿ ಆಂಧ್ರ ಪ್ರದೇಶದವರು ಎಂದು ನವಮುಂಬೈ ಮಹಾನಗರ ಪಾಲಿಕೆ ಕಮಿಷನರ್ ಅಣ್ಣಾಸಾಹೇಬ್ ಮಿಸಲ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿತರು ಕಾಣಿಸಿಕೊಂಡ ಖಾಸಗಿ ಐಟಿ ಕಂಪನಿಯನ್ನು ಬಂದ್ ಮಾಡಿಸಲಾಗಿದ್ದು, ಸ್ಯಾನಿಟೈಸರ್ ಮಾಡಲಾಗಿದೆ. ಇನ್ನು, ಸೋಂಕಿತರು ಯಾರ ಜೊತೆಗೆ ಸಂಪರ್ಕವನ್ನು ಹೊಂದಿದ್ದರು ಎಂದು ಪತ್ತೆ ಮಾಡಲಾಗುತ್ತಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

English summary
Navi Mumbai IT Company 19 Employees Test Coronavirus Positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X