ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಿಕ್: ಮಸೀದಿ ಬಳಿ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿದ ಪೊಲೀಸರು

|
Google Oneindia Kannada News

ನಾಸಿಕ್, ಏಪ್ರಿಲ್ 18 : ಮಹಾರಾಷ್ಟ್ರದಲ್ಲೂ ಅಜಾನ್, ಹನುಮಾನ್ ಚಾಲೀಸಾ ವಿವಾದದ ಕಿಡಿ ಮುಂದುವರೆದಿದೆ. ಸದ್ಯ ಈ ಕಿಡಿಯನ್ನು ಆರಿಸಲು ಮಹಾರಾಷ್ಟ್ರದ ನಾಸಿಕ್ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅಜಾನ್‌ ಕೂಗುವ 15 ನಿಮಿಷದ ಮೊದಲು ಹಾಗೂ ನಂತರ ಮಸೀದಿಯ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಸಿ ಹನುಮಾನ್ ಚಾಲಿಸಾ ಅಥವಾ ಭಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಜೊತೆಗೆ ಧಾರ್ಮಿಕ ಸ್ಥಳಗಳಲ್ಲಿ ನಿಯಮಬಾಹಿರವಾಗಿ ಧ್ವನಿವರ್ಧಕ ಬಳಸುವಂತಿಲ್ಲ. ಅಲ್ಲದೆ ಮೇ 3ರ ಒಳಗೆ ಎಲ್ಲಾ ಧಾರ್ಮಿಕ ಸ್ಥಳದಲ್ಲೂ ಧ್ವನಿವರ್ಧಕ ಬಳಸಲು ಪರವಾನಿಗೆ ಪತ್ರ ಪಡೆಯಬೇಕೆಂದು ಸೂಚಿಸಿದೆ.

"ಮೇ 3ರ ಒಳಗೆ ಎಲ್ಲಾ ಧಾರ್ಮಿಕ ಸ್ಥಳದವರೂ ಧ್ವನಿವರ್ಧಕ ಬಳಸುವುದಕ್ಕೆ ಅನುಮತಿ ಪಡೆಯುವಂತೆ ಸೂಚಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಸಿರುವುದು ಕಂಡು ಬಂದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಹನುಮಾನ್ ಚಾಲೀಸಾ, ಭಜನೆ ಮಾಡಲು ಅನುಮತಿ ಪಡೆದುಕೊಂಡರೆ, ಮಸೀದಿಯಿಂದ 100 ಮೀಟರ್ ದೂರದಲ್ಲಿ ಮಾಡಬೇಕು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ," ಅಂತ ನಾಸಿಕ್ ಪೊಲೀಸ್ ಕಮಿಷನರ್ ದೀಪಕ್ ಪಾಂಡೆ ತಿಳಿಸಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಪುಣೆಯಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, "ಹಿಂದೂ ಅಣ್ಣ ತಮ್ಮಂದಿರೇ ಸಿದ್ದರಾಗಿರಿ, ಮಸಿದೀಗಳಲ್ಲಿರುವ ಧ್ವನಿವರ್ಧಕಗಳನ್ನ ಮೇ 3 ರ ಒಳಗೆ ತೆರವು ಮಾಡದಿದ್ದರೆ, ನಾವು ಮೇ 3 ಮತ್ತು ನಂತರದ ದಿನಗಳಲ್ಲಿ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಬಳಸಿ ಐದು ಬಾರಿ ಹನುಮಾನ್ ಚಾಲೀಸಾ, ಭಜನೆ ಮಾಡೋಣ. ಎಲ್ಲರೂ ಇದಕ್ಕೆ ಸಿದ್ದರಾಗಿರಿ," ಎಂದಿದ್ದರು. ಇನ್ನು ಏಪ್ರಿಲ್ 2 ರಂದೇ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮಸೀದಿಗಳ ಮುಂದೆ ಇರುವ ಧ್ವನಿವರ್ಧಕಗಳನ್ನ ತೆರವು ಮಾಡುವಂತೆ ಮನವಿ ಮಾಡಿಕೊಂಡಿದ್ದರು.

Nashik Police Banned Use of Loudspeakers at Religious Places Without Permission

ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದು, "ಧ್ವನಿವರ್ಧಕ ಬಳಕೆಯ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ. ಜೊತೆಗೆ ಕೋರ್ಟ್‌ ಆದೇಶದ ಪ್ರಕಾರ ಕಡಿಮೆ ಡೆಸಿಬಲ್ ಇರುವ ಧ್ವನಿವರ್ಧಕಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಒಂದು ಡೆಸಿಬಲ್ ಜಾಸ್ತಿ ಇದ್ದರೆ ಅಂತಹ ಧ್ವನಿವರ್ಧಕಗಳನ್ನ ತೆರವು ಮಾಡಲಾಗುತ್ತದೆ ಹಾಗೂ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ,"ಅಂತ ತಿಳಿಸಿದ್ದಾರೆ.

Nashik Police Banned Use of Loudspeakers at Religious Places Without Permission

ನಾಸಿಕ್‌ ನಗರದಲ್ಲಿರುವ ಮಸೀದಿ, ದೇವಸ್ಥಾನ, ಗುರುದ್ವಾರ, ಚರ್ಚ್ ಮತ್ತು ಇತರ ಧಾರ್ಮಿಕ ಸಂಸ್ಥೆಗಳು ಲಿಖಿತ ಅನುಮೋದನೆಯನ್ನು ಪಡೆದ ನಂತರವೇ ಧ್ವನಿವರ್ಧಕಗಳ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಮುಂಚಿತವಾಗಿಯೇ ಅನುಮೋದನೆ ಪಡೆಯಲು ನಗರ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ. ಅಲ್ಲದೆ ಈ ಆದೇಶ ಈಗಿನಿಂದಲೇ ಜಾರಿಗೆ ಬರಲಿದ್ದು, ಮೇರ 3 ಒಳಗೆ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೂ ಅಜಾನ್, ಹನುಮಾನ್ ಚಾಲಿಸ್ ನಡೆಸಲು ಅನುಮತಿ ನೀಡಲಾಗಿದೆ. ಬಳಿಕ ಎಲ್ಲಾ ಅಕ್ರಮ ಧ್ವನಿವರ್ಧಕಗಳನನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಆದೇಶವನ್ನು ಅನುಸರಿಸದಿದ್ದರೆ ಅಂತಹವರಿಗೆ ನಾಲ್ಕು ತಿಂಗಳಿನಿಂದ 1 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ ದಂಡ ಕೂಡ ಹಾಕಲಾಗುತ್ತದೆ ಅಂತ ನಾಸಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಕರ್ನಾಟಕದಲ್ಲಿ ಕೋಮು ಗಲಭೆಗೆ ಕಾರಣವಾಗಿದ್ದ ಅಜಾನ್‌ ವಿವಾದ ಈಗ ಬೇರೆ ರಾಜ್ಯಗಳಲ್ಲೂ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಹಿಂದೂ ಮುಸ್ಲಿಂರ ನಡುವಿನ ಕೋಮು ಸಾಮರಸ್ಯವನ್ನ ಕದಡುತ್ತಿದೆ. ಈ ರೀತಿಯ ಘಟನೆಗಳಿಂದಾಗಿ ಸಮಾಜದ ಸ್ವಾಸ್ಥ್ಯ ಕೂಡ ಹಾಳಾಗುತ್ತಿದೆ.

English summary
Nashik police banned the use of loudspeakers without permission at religious places. Now, all religious places must obtain permits by May 3 to use loudspeakers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X