ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಕಾಂಗ್ರೆಸ್‌ಗೆ ನಾನಾ ಪಟೋಲೆ ಅಧ್ಯಕ್ಷರಾಗಿ ನೇಮಕ

|
Google Oneindia Kannada News

ಮುಂಬೈ, ಫೆಬ್ರವರಿ 5: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿದ್ದ ನಾನಾ ಪಟೋಲೆ ಅವರನ್ನು ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಾಲಾಸಾಹೇಬ್ ಥೋರಟ್ ಅವರ ಜಾಗಕ್ಕೆ ಪಟೋಲೆ ನೇಮಕವಾಗಿದ್ದಾರೆ.

ಭಂಡಾರಾ ಜಿಲ್ಲೆಯ ಸಕೋಲಿ ಕ್ಷೇತ್ರದ ಶಾಸಕರಾಗಿರುವ ಪಟೋಲೆ ಗುರುವಾರವಷ್ಟೇ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 'ಕಾಂಗ್ರೆಸ್ ಅಧ್ಯಕ್ಷರು ನಾನಾ ಪಟೋಲೆ ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ' ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಮುಂದಿನ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆ: ಸರ್ಕಾರದ ಮಹತ್ವದ ನಡೆಮುಂದಿನ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆ: ಸರ್ಕಾರದ ಮಹತ್ವದ ನಡೆ

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಮಗಳು ಪ್ರಣತಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಶಿವಾಜಿ ರಾವ್ ಮೊಗೆ, ಬಸವರಾಜ ಪಾಟೀಲ್, ಮೊಹಮ್ಮದ್ ಆರಿಫ್ ನಸೀಮ್, ಕುನಾಲ್ ರೋಹಿದಾಸ್ ಪಾಟೀಲ್ ಮತ್ತು ಚಂದ್ರಕಾಂತ್ ಹಂಡೋರೆ ಅವರನ್ನು ಕೂಡ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Nana Patole Appointed As Maharashtra Congress President Replacing Balasaheb Thorat

ಪಕ್ಷವು ಹತ್ತು ಮಂದಿ ಉಪಾಧ್ಯಕ್ಷರನ್ನು ನೇಮಕ ಮಾಡಿದೆ. ಶಿರಿಶ್ ಮಧುಕರರಾವ್, ಚೌಧರಿ, ರಮೇಶ್ ಆನಂದ ರಾವ್ ಬಗ್ವೆ, ಹುಸೇನ್ ದಳವಾಯಿ, ಮೋಹನ್ ಜೋಷಿ, ರಂಜಿತ್ ಪ್ರತಾಪ್ ಕಾಂಬ್ಲೆ, ಕೈಲಾಶ್ ಕೃಷ್ಣರಾವ್ ಗೊರಂಟ್ಯಲ್, ನಗರಾಲೆ, ಶರದ್ ಅಹೆರ್, ಎಂಎಂ ಶೇಖ್ ಮತ್ತು ಮಾಣಿಕ್ ಮೋತಿರಾಮ್ ಜಗಪತ್ ಹೊಸ ಉಪಾಧ್ಯಕ್ಷರಾಗಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಕಾರ್ಯತಂತ್ರ, ಪರಿಶೀಲನೆ ಮತ್ತು ಸಮನ್ವಯ ಸಮಿತಿ ಮತ್ತು 37 ಸದಸ್ಯರ ಸಂಸದೀಯ ಮಂಡಳಿಯನ್ನು ರಚಿಸಿದೆ.

ಅಧಿಕಾರಿಗಳ ವಿದೇಶ ಪ್ರವಾಸ: ಮಹಾರಾಷ್ಟ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಅಧಿಕಾರಿಗಳ ವಿದೇಶ ಪ್ರವಾಸ: ಮಹಾರಾಷ್ಟ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಎಂಸಿಸಿಪಿ ಅಧ್ಯಕ್ಷರಾಗಿದ್ದ ಬಾಲಾಸಾಹೇಬ್ ಥೋರಟ್ ಅವರ ಜಾಗಕ್ಕೆ ಪಟೋಲೆ ಅವರನ್ನು ನೇಮಿಸಲು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಿಸಿರುವುದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯ ಮಿತ್ರಪಕ್ಷಗಳಾದ ಶಿವಸೇನಾ ಮತ್ತು ಎನ್‌ಸಿಪಿಯಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.

ಸರ್ಕಾರ ಸುಗಮವಾಗಿ ಸಾಗುತ್ತಿದ್ದು, ಅದರ ಕಾರ್ಯಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದಿತ್ತು. ಅವರ ರಾಜೀನಾಮೆಯಿಂದ ಈಗ ಸ್ಪೀಕರ್ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಯಬೇಕಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರ ಬಳಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

English summary
Congress has appointed Nana Patole as the party's Maharashtra state committee president replacing Balasaheb Thorat. Patole had resigned as speaker of Maharashtra Assembly on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X