ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗ್ಪುರ್: ಹಲ್ದೀರಾಮ್ಸ್ ವಡಾ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆ

|
Google Oneindia Kannada News

ನಾಗ್ಪುರ, ಮೇ 16: ಇಲ್ಲಿನ ಹಲ್ದಿರಾಮ್ಸ್ ಆಹಾರ ಮಳಿಗೆಯಲ್ಲಿ ಗ್ರಾಹಕರೊಬ್ಬರಿಗೆ ವಡಾ ಸಾಂಬಾರಿನಲ್ಲಿ ಸತ್ತ ಹಲ್ಲಿ ಸಿಕ್ಕಿದೆ. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಡಿಎ) ಅಧಿಕಾರಿಯೊಬ್ಬರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅಜಾನಿ ವೃತ್ತದ ಬಳಿ ಇರುವ ಆಹಾರ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ವಡಾ-ಸಾಂಬಾರ್ ನಲ್ಲಿ ಸಿಕ್ಕ ಹಲ್ಲಿ ಫೋಟೋವನ್ನು ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾಗಿದೆ.

ರೆಸ್ಟೋರೆಂಟ್ ಗೆ ಬಂದ ಯುವಕ, ಯುವತಿ, ವಡಾ-ಸಾಂಬಾರ್ ಆರ್ಡರ್ ಮಾಡಿದ್ದಾರೆ. ವಡಾ-ಸಾಂಬಾರ್ ತಿನ್ನುವ ವೇಳೆ ಯುವಕನಿಗೆ ಹಲ್ಲಿ ಇರುವುದು ಕಂಡು ಬಂದಿದೆ. ತಕ್ಷಣವೇ ಈ ಬಗ್ಗೆ ಸಿಬ್ಬಂದಿಗೆ ತಿಳಿಸಿದ್ದಾನೆ. ನಂತರ ವಡಾ-ಸಾಂಬಾರ್ ಎಸೆಯಲಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಆರೋಗ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ಈ ಮಳಿಗೆಯನ್ನು ಬಂದ್ ಮಾಡಲಾಗಿದೆ ಎಂದು ಎಫ್ ಡಿಎ ನಾಗ್ಪುರ್ ದ ಅಧಿಕಾರಿ ಮಿಲಿಂದ್ ದೇಶಪಾಂಡೆ ಅವರು ಪಿಟಿಐಗೆ ತಿಳಿಸಿದ್ದಾರೆ

Nagpur man finds dead lizard in vada sambar at Haldiram’s, photo goes viral

ಈ ಘಟನೆ ಬಗ್ಗೆ ಸಂತ್ರಸ್ತರು ಯಾವುದೇ ದೂರನ್ನು ನೀಡದಿದ್ದರೂ, ಖುದ್ದು ಎಫ್ ಡಿಎ ಅಧಿಕಾರಿಗಳು ಹಲ್ದೀರಮ್ ಮಳಿಗೆ ಮೇಲೆ ದಾಳಿ ನಡೆಸಿ, ಪರಿಶೀಲಿಸಿದ್ದಾರೆ. ಅಡುಗೆ ಮನೆ ಕಿಟಕಿಗೆ ಜಾಲರಿ ಹಾಕಿರಲಿಲ್ಲ. ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ 2011 ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.(ಪಿಟಿಐ)

English summary
A man allegedly found a dead lizard in a food item served at the snacks major Haldiram’s outlet in Nagpur, a Food and Drugs Administration (FDA) official said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X