ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಆಸೆಗೆ ತಣ್ಣೀರು ಎರಚಿದ ನಟಿ ಕರೀನಾ ಕಪೂರ್

|
Google Oneindia Kannada News

ಮುಂಬೈ / ಭೋಪಾಲ್, ಜ 22: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಸ್ಪರ್ಧಿಸಲಿದ್ದಾರಾ? ಈ ಪ್ರಶ್ನೆಗೆ ಕರೀನಾ ಸ್ಪಷ್ಟನೆ ನೀಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕರೀನಾ ಕಪೂರ್, ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸಂಬಂಧ, ಕಾಂಗ್ರೆಸ್ ಮುಖಂಡರು ಒಂದು ಹಂತದ ಮಾತುಕತೆಯನ್ನೂ ನಡೆಸಿದ್ದರು ಎಂದು ವರದಿಯಾಗಿತ್ತು.

ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ: ಸಿದ್ದರಾಮಯ್ಯ ಪ್ರತಿಕ್ರಿಯೆ ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ: ಸಿದ್ದರಾಮಯ್ಯ ಪ್ರತಿಕ್ರಿಯೆ

ಆದರೆ, ತಾವು ರಾಜಕೀಯಕ್ಕೆ ಪ್ರವೇಶಿಸುವ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕರೀನಾ, ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಗುರಿ ಏನಿದ್ದರೂ ಸಿನಿಮಾ ರಂಗ ಮಾತ್ರ ಎಂದಿದ್ದಾರೆ.

Focus Is, Will Be Films Only: Kareena Kapoor Denies Entering Politics

ಸ್ಥಳೀಯ ಕಾಂಗ್ರೆಸ್ ಮುಖಂಡ ಯೋಗೇಂದ್ರ ಸಿಂಗ್ ತಮ್ಮ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದು, ಭೋಪಾಲ್ ಕ್ಷೇತ್ರದಿಂದ ಕರೀನಾ ಕಪೂರ್ ಉತ್ತಮ ಅಭ್ಯರ್ಥಿಯಾಗಬಲ್ಲರು ಎನ್ನುವ ಸಲಹೆಯನ್ನು ನೀಡಿದ್ದರು.

ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ : ಯಾರು, ಏನು ಹೇಳಿದರು? ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ : ಯಾರು, ಏನು ಹೇಳಿದರು?

ಕಾಂಗ್ರೆಸ್ ಪಕ್ಷದ ಮುಖಂಡನ ಸಲಹೆಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, ನಾವು ಭೋಪಾಲ್ ಕ್ಷೇತ್ರದಲ್ಲಿ ಅತ್ಯಂತ ಬಲಶಾಲಿಯಾಗಿದ್ದೇವೆ. ಯಾರು ನಿಂತರೂ ನಮಗೆ ಚಿಂತೆಯಿಲ್ಲ, ಬಹುಷಃ ಕಾಂಗ್ರೆಸ್ಸಿಗೆ ಅಭ್ಯರ್ಥಿಯ ಕೊರತೆ ಕಾಡುತ್ತಿದೆ ಎಂದು ಹೇಳಿದ್ದಾರೆ.

ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ 1989ರಿಂದ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ. ಕ್ಷೇತ್ರದ ಹಾಲೀ ಸಂಸದ ಬಿಜೆಪಿಯ ಅಲೋಕ್ ಸಂಜರ್.

English summary
Bollywood actress Kareena Kapoor Khan has no plans of entering politics and she would rather focus on acting, she clarified amid reports that some local Congressmen corporator in Madhya Pradesh have requested the party chief to field her from Bhopal in the upcoming national election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X