ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22ರ ಆಕೆಗೆ 17ರ 'ಪತಿ'; ಪೋಕ್ಸೊ ಕಾಯ್ದೆ ಅಡಿ ಜೈಲು ಸೇರಿದಳು ತಾಯಿ

|
Google Oneindia Kannada News

ಮುಂಬೈ, ನವೆಂಬರ್ 30: ಇದು ವಿಲಕ್ಷಣ ಪ್ರಕರಣ. ಲೈಂಗಿಕ ಹಲ್ಲೆ ಆರೋಪದಲ್ಲಿ ಇಪ್ಪತ್ತೆರಡು ವರ್ಷದ ತಾಯಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ. ಹದಿನೇಳು ವರ್ಷದ ಯುವಕನ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಆಕೆ ಮೇಲಿದೆ. ಆದರೆ ಆಕೆ ಮಾತ್ರ, ನಾವಿಬ್ಬರು ಕಳೆದ ವರ್ಷ ಮದುವೆ ಆಗಿದ್ದೀವಿ. ಇಬ್ಬರದೂ ಸಹಮತದ ಸಂಬಂಧ ಎಂದಿದ್ದಾಳೆ.

ಆ ಮಹಿಳೆಗೆ ಈ ಸಂಬಂಧದಿಂದಲೇ ಹುಟ್ಟಿದ ಹೆಣ್ಣುಮಗುವೊಂದಿದ್ದು, ಅದಕ್ಕೆ ಈಗ ಐದು ತಿಂಗಳು ವಯಸ್ಸು. ಜಾಮೀನಿಗಾಗಿ ಆಕೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಆದೇಶಕ್ಕೆ ಎದುರು ನೋಡುತ್ತಿದ್ದಾಳೆ. ಬೈಕುಲ್ಲಾ ಜೈಲಲ್ಲಿ ಇರುವ ಆಕೆ, ತನ್ನ ಜತೆಗೆ ಮಗಳನ್ನು ಇರಿಸಿಕೊಳ್ಳಬಹುದು ಎಂದು ಕೋರ್ಟ್ ಇದಕ್ಕೂ ಮುನ್ನ ಆದೇಶ ನೀಡಿದೆ.

ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪತ್ರಕರ್ತ ಬಂಧನ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪತ್ರಕರ್ತ ಬಂಧನ

ಆದರೆ, ಯುವಕನ ತಾಯಿ ಮಹಿಳೆಯ ವಿರುದ್ಧ ದೂರು ನೀಡಿದ್ದು, ನನ್ನ ಮಗನಿಗೆ 'ಪ್ರಚೋದನೆ' ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮಹಿಳೆ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಆದರೆ ಬಂಧನ ಆಗಿರುವುದು ಈ ತಿಂಗಳ ಆರಂಭದಲ್ಲಿ.

Mumbai woman weds 17-year-old boy, held for sexual assault

ಪೋಕ್ಸೊ ಕಾಯ್ದೆ ಅಲ್ಲದೆ ಅಪಹರಣ, ಬಾಲ್ಯ ವಿವಾಹ ಕಾಯ್ದೆ ಅಡಿ ಕೂಡ ಪ್ರಕರಣ ದಾಖಲಿಸಲಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ 'ಮದುವೆ' ನಡೆದಿದೆ. ಗಂಡಿನ ವಯಸ್ಸು ಇಪ್ಪತ್ತೊಂದು ವರ್ಷಕ್ಕಿಂತ ಕಡಿಮೆ ಇದ್ದರೆ, ಹೆಣ್ಣಿನ ವಯಸ್ಸು ಹದಿನೆಂಟಕ್ಕಿಂತ ಕಡಿಮೆ ಇದ್ದರೆ ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ.

English summary
In a rare instance, a 22-year-old mother was recently arrested under the stringent Protection of Children from Sexual Offences (Pocso) Act on charges of sexually assaulting a 17-year-old, even as she claimed that they had got married last year and their relationship was consensual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X