ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಟಿಗೆಂದು ಕರೆಸಿ ಸ್ನೇಹಿತರೊಂದಿಗೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ

|
Google Oneindia Kannada News

ಮುಂಬೈ, ಫೆಬ್ರವರಿ 19: ಪಾರ್ಟಿಗೆಂದು ಕರೆಸಿಕೊಂಡು ಸ್ನೇಹಿತರೊಂದಿಗೆ ಸೇರಿ ಪ್ರೇಯಿಸಿ ಮೇಲೆಯೇ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪಲ್ಘಹಾರ್‌ನಲ್ಲಿ ನಡೆದಿದೆ.

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

ಯುವತಿಯ ಪ್ರಿಯಕರ ಸಂತೋಷ ಕೂಟವನ್ನು ಆಯೋಜಿಸಿದ್ದ, ಅಲ್ಲಿ ಆತನ ಸ್ನೇಹಿತರೆಲ್ಲ ಬಂದಿದ್ದರು, ಯುವತಿಗೆ ನಶೆ ಏರುವಂತೆ ಮದ್ಯಪಾನ ಮಾಡಿಸಿ ಬಳಿಕ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Mumbai woman raped at her birthday party after drinks were spiked, 2 held

ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದರು. ಮುಂಬೈನ ಕಂದಿವಾಲಿ ನಿವಾಸಿಯಾಗಿರುವ ಯುವತಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ದೂರನ್ನು ದಾಖಲಿಸಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಥದ್ದೇ ಘಟನೆಯೊಂದು ನಡೆದಿತ್ತು, ಬರ್ತ್‌ಡೇ ಪಾರ್ಟಿಗೆಂದು ತೆರಳಿದ್ದ ಎಂಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು.

ಆಕೆಯ ಸ್ನೇಹಿತನ ಸ್ನೇಹಿತ ಅತ್ಯಾಚಾರವೆಸಗಿದ್ದ. ಅಂದು ಹುಟ್ಟುಹಬ್ಬ ಆರಿಫ್ ಹುಟ್ಟುಹಬ್ಬವಿದ್ದ ಕಾರಣ ತನ್ನ ಮನೆಯಲ್ಲಿ ಪಾರ್ಟಿ ಇದೆ ಬಾ ಎಂದು ಕರೆದಿದ್ದ, ಪಾರ್ಟಿಗೆ ಫೇಸ್‌ಬುಕ್ ಸ್ನೇಹಿತೆ ಹಾಗೂ ಸ್ನೇಹಿತ ಆದಿತ್ಯನಿಗೂ ಆಹ್ವಾನಿಸಿದ್ದ.

ಅಂದು ರಾತ್ರಿ ಮೂವರು ಸೇರಿ ಮದ್ಯಪಾನ ಮಾಡಿ ಪಾರ್ಟಿ ಮಾಡಿದ್ದಾರೆ, ತಡರಾತ್ರಿ ಊಟ ತರಲು ಆರೀಫ್ ಮನೆಯಿಂದ ಹೊರಗೆ ಹೋದಾಗ ಯುವತಿ ಮೇಲೆ ಆದಿತ್ಯ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A woman was allegedly raped at her birthday party organised at a friend's house in Waliv in Maharashtra's Palghar district, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X