ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಕಸಬ್ ಹಿಡಿದ ಓಂಬಳೆ ಸಾಹಸ ಸ್ಮರಣೀಯ

By Mahesh
|
Google Oneindia Kannada News

ಇಂದು 26/11ರ ಮುಂಬೈ ಉಗ್ರರ ದಾಳಿಯ ಸಂದರ್ಭದಲ್ಲಿ ಉಗ್ರ ಅಜ್ಮಲ್ ಕಸಬ್‌ನ ಗುಂಡಿಗೆ ಹುತಾತ್ಮರಾದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ತುಕಾರಾಂ ಓಂಬಳೆ ಸ್ಮರಿಸುವ ದಿನ. ಜೊತೆಗೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್ ಕೌಂಟರ್ ತಜ್ಞ ವಿಜಯ್ ಸಾಲಾಸ್ಕರ್, ಮುಂಬೈ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಅವರ ಬಲಿದಾನದ ದಿನ.

ತುಕರಾಮ್ ಓಂಬಳೆ ಹಾಗೂ ಸಬ್ ಇನ್ಸ್ ಪೆಕ್ಟರ್ ಭಾಸ್ಕರ್ ಕದಂ ಅವರು ಉಗ್ರ ಕಸಬ್ ಸೆರೆ ಹಿಡಿಯಲು ಮುಂದಾದರು. ಮರೇನ್ ಡ್ರೈವ್ ಕಡೆಗೆ ತೆರಳುವಂತೆ ಇಬ್ಬರಿಗೂ ವಾಕಿಟಾಕಿಯಲ್ಲಿ ಸಂದೇಶ ಬಂದಿತು. ಕೆಲವೇ ನಿಮಿಷಗಳಲ್ಲಿ ಉಗ್ರರು ಕದ್ದ ಸ್ಕೋಡಾ ಕಾರು ಅತ್ತ ಸಾಗುತ್ತಿರುವುದನ್ನು ತುಕಾರಾಮ್ ಗಮನಿಸಿ ಮೋಟರ್ ಸೈಕಲ್ ಏರಿ ಸ್ಕೋಡಾ ಚೇಸ್ ಮಾಡಿದ್ದಾರೆ. [ಸಾವಿನಲ್ಲೂ ಸಾರ್ಥಕತೆ ಮೆರೆದ ಹುತಾತ್ಮನ ಪತ್ನಿ]

ಮುಂಬೈನ ಗಿರ್ಗಾಂವ್ ಚೌಪಟ್ಟಿಯಲ್ಲಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದು ನಿಂತಿದೆ. ಪೊಲೀಸರು ಸುತ್ತುವರೆಯುತ್ತಿರುವುದನ್ನು ಕಂಡು ಗುಂಡಿನ ದಾಳಿ ನಡೆಸಿದ್ದಾರೆ. ಕಸಬ್ ಹಾಗೂ ಆತನ ಜೊತೆಗಿದ್ದ ಇಸ್ಮಾಯಿಲ್ ಕೂಡಾ ಪ್ರತಿದಾಳಿ ಶುರು ಮಾಡಿದ್ದಾರೆ. ಕಾರಿನ ಚಾಲಕ ಸಾವನ್ನಪ್ಪಿದ ನಂತರ ಮುಂಬದಿ ಸೀಟಿನಲ್ಲಿದ್ದ ಕಸಬ್ ವಿಂಡೋ ಕೆಳಗಿಳಿಸಿ ಓಂಬಳೆ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟು ತಿಂದರೂ ಧೃತಿಗೆಡದ ಓಂಬಳೆ ಅವರು ಮುನ್ನುಗ್ಗಿದ್ದಾರೆ. ಅವರನ್ನು ಭಾಸ್ಕರ್ ಕದಂ ಹಿಂಬಾಲಿಸಿದ್ದಾರೆ.

Tukaram, brave martyr behind Kasab's arrest

ಎ.ಕೆ.47 ಹೊಂದಿದ್ದ ಕಸಬ್‌ನೊಂದಿಗೆ ನಿರಾಯುಧರಾಗಿ ಹೋರಾಡಿದ ಓಂಬಳೆ, ಕಾರ್ಯಾಚರಣೆಯ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ್ದಾರೆ, ಅದರೆ, ಹತ್ತು ಮಂದಿ ಪಾಕಿಸ್ತಾನಿ ಉಗ್ರರಲ್ಲಿ ಓರ್ವನನ್ನು ಸೆರೆಹಿಡಿಯುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಕಸಬ್ ನನ್ನು ಜೀವಂತ ಹಿಡಿದು ಕದಂ ಕೈಗಿರಿಸಿದ ಮೇಲೆ ಓಂಬಳೆ ವೀರ ಮರಣವನ್ನಪ್ಪುತ್ತಾರೆ. [ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

ಓಂಬಳೆ ಪುತ್ರಿ ಹೇಳಿಕೆ: ಹುತಾತ್ಮರಾದ ತನ್ನ ತಂದೆಗೆ ಮರಣೋತ್ತರವಾಗಿ ನೀಡಿದ ಅಶೋಕ ಚಕ್ರ ನೋಡುತ್ತಾ ವೈಶಾಲಿ ಅವರು ಭಾವುಕರಾಗಿ, ಉಗ್ರರ ಮೇಲಿನ ವಿಚಾರಣೆಯನ್ನು ಸರ್ಕಾರ ಆದಷ್ಟು ಬೇಗ ಪೂರ್ಣಗೊಳಿಸಿ ಶಿಕ್ಷೆ ವಿಧಿಸಬೇಕು, ಕಸಬ್ ನನ್ನು ಆರ್ಥರ್ ಜೈಲಿನಲ್ಲಿರಿಸಿಕೊಂಡಂತೆ ಬೇರೆ ಯಾವ ಉಗ್ರರನ್ನು ಇರಿಸಿಕೊಳ್ಳುವುದು ಬೇಡ. ಇಂಥವರಿಗೆ ಗಲ್ಲುಶಿಕ್ಷೆಯೂ ಕಡಿಮೆ ಎಂದಿದ್ದಾರೆ.

ಕಹಿನೆನಪು ರೀ ಕಾಲ್ : ತಾಜ್‌ಮಹಲ್ ಹೊಟೇಲ್ ಟ್ರೆಡೆಂಟ್, ಛತ್ರಪತಿ ಶಿವಾಜಿ ಟರ್ಮಿನಲ್, ಪರ್ಲೆ, ಮಜಗಾನ್, ಕಾಮಾ ಆಸ್ಪತ್ರೆ ಸೇರಿದಂತೆ ಅನೇಕ ಕಡೆ ಉಗ್ರರು ಸಾರ್ವಜನಿಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ಅನೇಕರ ಜೀವ ತೆಗೆದಿದ್ದರು. ಈ ಘಟನೆಯಲ್ಲಿ 101 ಜನ ಮೃತಪಟ್ಟು , 187 ಮಂದಿ ಗಾಯಗೊಂಡಿದ್ದರು. [ಅಮೆರಿಕಕ್ಕೆ ಇರುವ ಕಿಚ್ಚು ಭಾರತ ಸರ್ಕಾರಕ್ಕೆ ಏಕಿಲ್ಲ]

ಉಗ್ರರ ದಾಳಿಗೆ ಎದೆಗುಂದದ ಸೈನಿಕರು ಸತತ ನಾಲ್ಕು ದಿನಗಳ ಕಾಲ ದಾಳಿ ನಡೆಸಿ ಸಮಾಜಘಾತುಕ ಶಕ್ತಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದರು. ಈ ಘಟನೆಯಲ್ಲಿ ಜೀವಂತವಾಗಿ ಸೆರೆಸಿಕ್ಕ ಪಾಕ್ ಮೂಲದ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೆ ಹಾಕಲಾಗಿತ್ತು. ಘಟನೆಯಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ, ಎನ್‌ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಾಲಸ್ಕರ್ ಸೇರಿದಂತೆ 11 ದಕ್ಷ ಅಧಿಕಾರಿಗಳು ಸಾವನ್ನಪ್ಪಿದ್ದರು

English summary
Tukaram Omble AC was an assistant sub-inspector (ASI), and a retired army man who had entered the Mumbai police. He sacrificed his life during the 2008 Mumbai attacks, fighting terrorists at Girgaum Chowpatty and played a pivotal role in catching Ajmal Kasab alive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X