ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪೀಡಿತ ಮುಂಬೈನಿಂದ ಹೊರಬಿದ್ದ ಗುಡ್ ನ್ಯೂಸ್

|
Google Oneindia Kannada News

ಮುಂಬೈ, ಜೂನ್ 6: ಅತಿಹೆಚ್ಚು ಕೊರೊನಾ ಪೀಡಿತ, ದೇಶದ ವಾಣಿಜ್ಯ ನಗರ ಮುಂಬೈನಿಂದ ಸಮಾಧಾನಕಾರ ಸುದ್ದಿಯೊಂದು ಹೊರಬಿದ್ದಿದೆ. ಇದುವರೆಗೆ ಮಹಾರಾಷ್ಟ್ರವೊಂದರಲ್ಲೇ 77,793 ಕೇಸ್ ದೃಢಪಟ್ಟಿದೆ.

Recommended Video

ಡಿ ಬಾಸ್ ಮುಟ್ಟಿದ ಮೇಲೆ ದಾರಿ ಬಿಟ್ಟಿದ್ದ ದೇವರ ಬಸವ ಸಾವು | Oneindia Kannada

ಇದರಲ್ಲಿ ಮೃತ ಪಟ್ಟವಾರ ಸಂಖ್ಯೆ 2,710. ಇನ್ನು ಮುಂಬೈ ನಗರದಲ್ಲಿ 41,986 ಕೋವಿಡ್-19 ಸೋಂಕು ದೃಢಪಟ್ಟಿದ್ದು 1,368 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ದೇಶದ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಪಾಲು ಶೇ. 33.

ಮುಂಬೈನ ರೆಸ್ಟೋರೆಂಟ್‌ನ ಒಳಚರಂಡಿಯಲ್ಲಿ 2 ಸಿಬ್ಬಂದಿ ಶವ ಪತ್ತೆಮುಂಬೈನ ರೆಸ್ಟೋರೆಂಟ್‌ನ ಒಳಚರಂಡಿಯಲ್ಲಿ 2 ಸಿಬ್ಬಂದಿ ಶವ ಪತ್ತೆ

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವ ಶೇ. 80ರಷ್ಟು ಪ್ರಯಾಣಿಕರಿಗೆ ಸೋಂಕು ಇರುವುದು ಆಘಾತಕಾರಿ ಸಂಗತಿಯಾಗಿದೆ. ಇದರ ಕೆಟ್ಟ ಅನುಭವ ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ, ಅದಕ್ಕಿಂತ ಹೆಚ್ಚಾಗಿ ಉಡುಪಿ ಜಿಲ್ಲೆಗಾಗಿದೆ.

ದಾವೂದ್ ಇಬ್ರಾಹಿಂಗೆ ಕೋವಿಡ್-19 : ಸುದ್ದಿ ಸುಳ್ಳು ಎಂದ ಸಹೋದರ ಅನೀಸ್!ದಾವೂದ್ ಇಬ್ರಾಹಿಂಗೆ ಕೋವಿಡ್-19 : ಸುದ್ದಿ ಸುಳ್ಳು ಎಂದ ಸಹೋದರ ಅನೀಸ್!

ಗ್ರೀನ್ ಝೋನ್ ನಲ್ಲಿದ್ದ ಉಡುಪಿ ಜಿಲ್ಲೆ ಈಗ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರು ಉಡುಪಿ ಮೊದಲ ಸ್ಥಾನದಲ್ಲಿ ಬರಲು ಕಾರಣರಾಗಿದ್ದಾರೆ. ಇವೆಲ್ಲದರ ನಡುವೆ, ಬೃಹನ್ ಮುಂಬೈ ಮುನ್ಸಿಪಲ್ ಅಧಿಕಾರಿಗಳು ಸಮಾಧಾನಕಾರಿ ಸುದ್ದಿಯೊಂದನ್ನು ನೀಡಿದ್ದಾರೆ.

 ಮುಂಬೈನಲ್ಲಿ ಕೊರೊನಾ ಸೋಂಕಿನ ಪ್ರಮಾಣ

ಮುಂಬೈನಲ್ಲಿ ಕೊರೊನಾ ಸೋಂಕಿನ ಪ್ರಮಾಣ

"ಮುಂಬೈನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸ್ಥಿರವಾಗಿ ಕಮ್ಮಿಯಾಗಲಾರಭಿಸಿದೆ. ಕೋವಿಡ್-19 ಸೋಂಕುಗಳ ಸರಾಸರಿ ದೈನಂದಿನ ಹರಡುವ ಪ್ರಮಾಣ ಕಮ್ಮಿಯಾಗಿದೆ ಮತ್ತು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ" ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ (ಬಿಎಂಸಿ) ಉನ್ನತ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

 ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌

ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌

ಬಿಎಂಸಿ ಅಧಿಕಾರಿಗಳು ಹೇಳುವ ಪ್ರಕಾರ, "ಜೂನ್ 2 ರವರೆಗೆ ಅನ್ವಯಿಸುವಂತೆ, ಕೋವಿಡ್-19 ಪ್ರಕರಣಗಳ ಸರಾಸರಿ ದೈನಂದಿನ ಹರಡುವ ದರವು ಕೆಲವು ದಿನಗಳ ಹಿಂದೆ ಶೇಕಡ 8ರಷ್ಟಿತ್ತು, ಈಗ ಅದು ಶೇ. 364 ಕ್ಕೆ ಇಳಿದಿದೆ. ಇದೊಂದು ಸಮಾಧಾನಕೊಡುವ ಅಂಶ" ಎಂದು ಅಧಿಕಾರಿಗಳು ಹೇಳಿದ್ದಾರೆ.

 ಧಾರಾವಿ ಕೊಳೆಗೇರಿ

ಧಾರಾವಿ ಕೊಳೆಗೇರಿ

"ಜೂನ್ 2 ರವರೆಗೆ ಮುಂಬೈನಲ್ಲಿ ಸುಮಾರು 2.08 ಲಕ್ಷಕ್ಕೂ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಕೇವಲ 20.18 ರಷ್ಟು ಜನರಿಗೆ ಪಾಸಿಟೀವ್ ಬಂದಿದೆ. ಧಾರಾವಿ ಕೊಳೆಗೇರಿಯಲ್ಲೂ ಆಘಾತ ಪಡುವಂತಹ ವರದಿಗಳಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ.

 ಕೊರೊನಾ ಪೀಡಿತ ಮುಂಬೈನಿಂದ ಹೊರಬಿದ್ದ ಗುಡ್ ನ್ಯೂಸ್

ಕೊರೊನಾ ಪೀಡಿತ ಮುಂಬೈನಿಂದ ಹೊರಬಿದ್ದ ಗುಡ್ ನ್ಯೂಸ್

"ತಪಾಸಣೆ, ಪರೀಕ್ಷೆ ಮತ್ತು ಶಂಕಿತ ಕೋವಿಡ್-19 ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚುವಿಕೆಯಿಂದ ಸಾಂಕ್ರಾಮಿಕ ರೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲಾಗಿದೆ. ಇದೇ ವೇಗದಲ್ಲಿ ನಾವು ಸಾಗಲಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಚಿತ್ರ:ಪಿಟಿಐ)

English summary
Mumbai Sign Of Relief As Drop In Average Daily Growth Rate Of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X