• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ದಾವೂದ್ ಇಬ್ರಾಹಿಂ ಕರಾಚಿಯಲ್ಲಿ'- ಇಡಿಗೆ ಬಾಯಿಬಿಟ್ಟ ಅಲಿಶಾ ಪರ್ಕರ್

|
Google Oneindia Kannada News

ಮುಂಬೈ ಮೇ 24: ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ ಕಸ್ಕರ್ ಇರುವಿಕೆಯನ್ನು ಇತ್ತೀಚೆಗೆ ಜಾರಿ ನಿರ್ದೇಶನಾಲಯದ ತನಿಖೆಯ ಸಂದರ್ಭದಲ್ಲಿ ಆತನ ಸೋದರಳಿಯ ಅಲಿಶಾ ಪರ್ಕರ್ ಬಹಿರಂಗಪಡಿಸಿದ್ದಾನೆ. ದಾವೂದ್ ಪ್ರಸ್ತುತ ಕರಾಚಿಯಲ್ಲಿದ್ದಾನೆ ಎಂದು ಪಾರ್ಕರ್ ಹೇಳಿರುವುದಾಗಿ ಇಡಿ ಮುಂಬೈ ನ್ಯಾಯಾಲಯಕ್ಕೆ ತನ್ನ ಚಾರ್ಜ್ ಶೀಟ್‌ನಲ್ಲಿ ತಿಳಿಸಿದೆ.

1993ರ ಮುಂಬೈ ಸ್ಫೋಟ: ದಾವೂದ್ ಆಪ್ತ ಅಬು ಬಕರ್ ಬಂಧನ1993ರ ಮುಂಬೈ ಸ್ಫೋಟ: ದಾವೂದ್ ಆಪ್ತ ಅಬು ಬಕರ್ ಬಂಧನ

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ. 1993ರಲ್ಲಿ ಮುಂಬೈನ 12ಕ್ಕೂ ಅಧಿಕ ಕಡೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಮೃತಪಟ್ಟು 1400 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ಎಫ್‌ಐಆರ್‌ನಲ್ಲಿ ದಾವೂದ್ ಇಬ್ರಾಹಿಂ, ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಯುಎಪಿಎ ಸೆಕ್ಷನ್ 17, 18, 20,21,38 ಮತ್ತು 40 ರೊಂದಿಗೆ ಐಪಿಸಿಯ ಸೆಕ್ಷನ್ 120 ಬಿ ಅಡಿಯಲ್ಲಿ ಫೆಬ್ರವರಿ 3, 2022 ರಂದು ಎನ್‌ಐಎ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ದಾವೂದ್ ಇಬ್ರಾಹಿಂ ಮತ್ತು ಇತರರ ವಿರುದ್ಧ ಮನಿ ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿತು.

ದಾವೂದ್‌ನ ಡಿ-ಕಂಪನಿ ಜೊತೆ ಎನ್‌ಸಿಪಿ ನಾಯಕ ನವಾಬ್ ಮಲಿಕ್ ನಂಟುದಾವೂದ್‌ನ ಡಿ-ಕಂಪನಿ ಜೊತೆ ಎನ್‌ಸಿಪಿ ನಾಯಕ ನವಾಬ್ ಮಲಿಕ್ ನಂಟು

ಹಸೀನಾ ಪರ್ಕರ್ ಅವರ ಪುತ್ರ ಅಲಿಶಾ ಅವರು ತಾವು ದಾವೂದ್ ಜೊತೆ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ. ಇಡಿ ಇತ್ತೀಚೆಗೆ ಮುಂಬೈ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಇದೇ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಕೂಡ ವಿಚಾರಣೆ ಎದುರಿಸುತ್ತಿದ್ದಾರೆ.

Mumbai serial blast case: Dawood Ibrahim in Karachi, says his nephew

ಈದ್‌ನಂತಹ ಹಬ್ಬಗಳ ಸಂದರ್ಭದಲ್ಲಿ ದಾವೂದ್‌ನ ಕುಟುಂಬವನ್ನು ಸಂಪರ್ಕಿಸುತ್ತಿದ್ದರು ಎಂದು ಇಡಿ ಚಾರ್ಜ್‌ಶೀಟ್‌ ಹೇಳುತ್ತದೆ. ಅಲಿಶಾ ಅವರನ್ನು ಫೆಬ್ರವರಿಯಲ್ಲಿ ಇಡಿ ಗ್ರಿಲ್ ಮಾಡಿತ್ತು. ಅವರ ಹೇಳಿಕೆಯನ್ನು ಪುರಾವೆಯ ಭಾಗವಾಗಿ ಚಾರ್ಜ್ ಶೀಟ್‌ನೊಂದಿಗೆ ಒದಗಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Mumbai serial blast case: Noted don Dawood Ibrahim Kaskar is currently in Karachi, his brother-in-law Alisha Parker has revealed during an inquiry by the Enforcement Directorate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X