ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ 24x7 ಮಲ್ಟಿ ಪ್ಲೆಕ್ಸ್ ಸಂಸ್ಕೃತಿಗೆ ಅಸ್ತು ಎಂದ ಠಾಕ್ರೆ

|
Google Oneindia Kannada News

ಮುಂಬೈ, ಜನವರಿ 23: ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಶಿವಸೇನಾ- ಎನ್ಸಿಪಿ-ಕಾಂಗ್ರೆಸ್ ಸರ್ಕಾರವು ಬೃಹನ್ ಮುಂಬೈ ಮಹಾನಗರ ಪಾಲಿಕೆ, ಮುಂಬೈ ಪೊಲೀಸರ "ಮುಂಬೈ 24 ಗಂಟೆ" ಪ್ರಸ್ತಾವನೆಗೆ ಅಸ್ತು ಎಂದಿದೆ. ಜನವರಿ 27ರಿಂದ ಮುಂಬೈ ನಗರಿ ನಿದ್ದೆಗೆ ಕತ್ತರಿ ಬೀಳಲಿದೆ. ಬೃಹನ್ ಮುಂಬೈನ ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ರೌಂಡ್ ದ ಕ್ಲಾಕ್ ಕಾರ್ಯ ನಿರ್ವಹಿಸಲಿವೆ.

ಲಂಡನ್ನಿನ ರಾತ್ರಿ ಆರ್ಥಿಕತೆ ನೀತಿಯನ್ನು ವಾಣಿಜ್ಯ ನಗರಿ ಮುಂಬೈ ಮೇಲೆ ಪ್ರಯೋಗಿಸಲಾಗುತ್ತಿದೆ. ಈ ಮೂಲಕ ನಗರ ದಿನದ ಯಾವ ಅವಧಿಯಲ್ಲಾದರೂ ಸುರಕ್ಷಿತವಾಗಿದೆ, ಪ್ರವಾಸಿಗರಿಗೆ ಮುಕ್ತವಾಗಿದೆ ಎಂಬುದನ್ನು ತೋರಿಸಲು ಸಚಿವ ಆದಿತ್ಯ ಠಾಕ್ರೆ ಮುಂದಾಗಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಸಿಗಲಿದೆ, ಸೇವಾ ವಲಯದಲ್ಲಿರುವ 5 ಲಕ್ಷ ಮಂದಿ ಜೊತೆಗೆ ಹೆಚ್ಚಿನ ಮಂದಿಗೆ ಉದ್ಯೋಗ ಸಿಗಲಿದೆ

ಆದರೆ, ರಾತ್ರಿ ವೇಳೆ ಒಳ್ಳೆ ವ್ಯಾಪಾರವಾಗುತ್ತದೆ ಎಂದೆನಿಸಿದವರು ತಮ್ಮ ಅಂಗಡಿ, ಮಾಲ್, ಮಲ್ಟಿಪ್ಲೆಕ್ಸ್ ತೆರೆದಿಡಬಹುದು, ಎಲ್ಲಾ ಅಂಗಡಿ ಮುಂಗಟ್ಟು, ಮಲ್ಟಿಪ್ಲೆಕ್ಸ್ ಓಪನ್ ಇರಬೇಕು ಎಂಬುದು ಕಡ್ಡಾಯವಾಗಿಲ್ಲ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.

ಆಹಾರ ಮಳಿಗೆ, ಚಿತ್ರಮಂದಿರಗಳು ಓಪನ್

ಆಹಾರ ಮಳಿಗೆ, ಚಿತ್ರಮಂದಿರಗಳು ಓಪನ್

ಮೊದಲ ಹಂತದಲ್ಲಿ ಶಾಪ್, ಆಹಾರ ಮಳಿಗೆ, ಚಿತ್ರಮಂದಿರಗಳು ಓಪನ್ ಆಗಲಿವೆ. ಜನ ವಸತಿ ಪ್ರದೇಶದಿಂದ ದೂರವಿರುವ ಮಲ್ಟಿಪ್ಲೆಕ್ಸ್ ಇವಾಗಿವೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಎನ್ ಸಿಪಿಎ ಹತ್ತಿರದ ನಾರಿಮನ್ ಪಾಯಿಂಟ್ ಗಳ ಬಳಿ ಫುಡ್ ಟ್ರಕ್ ಗಳನ್ನು ಕಾಣಬಹುದು. ಘನ ತ್ಯಾಜ್ಯ ನಿರ್ವಹಣೆ, ಆಹಾರ ಶುದ್ಧತೆ ಬಗ್ಗೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸುತ್ತಾರೆ. ಶಬ್ದ ಮಾಲಿನ್ಯ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದರೆ ಅಂಥ ಅಂಗಡಿ ಶಾಶ್ವತವಾಗಿ ಬಂದ್ ಮಾಡಬೇಕಾಗುತ್ತದೆ ಎಂದು ಶಿವಸೇನಾ ಹೇಳಿದೆ.

ಬಾರ್, ಪಬ್ ಗೆ ಅನುಮತಿ ಇಲ್ಲ

ಬಾರ್, ಪಬ್ ಗೆ ಅನುಮತಿ ಇಲ್ಲ

ಅಬಕಾರಿ ನೀತಿಯನ್ನು ಬದಲಾಯಿಸಿಲ್ಲ, ಬಾರ್, ಪಬ್ ಗಳು 1.30 ರ ನಂತರ ಬಂದ್ ಮಾಡಬೇಕಾಗುತ್ತದೆ. ಆಹಾರ ಮಳಿಗೆ, ಶಾಪಿಂಗ್, ಸಿನಿಮಾ ವೀಕ್ಷಣೆಗೆ ಮಾತ್ರ ಸದ್ಯಕ್ಕೆ ಬೇಡಿಕೆ ಬಂದಿದ್ದು, ಅದಕ್ಕೆ ತಕ್ಕಂತೆ ಸರ್ಕಾರ ಸ್ಪಂದಿಸಿದೆ, ಮುಂಬೈ ಪೊಲೀಸರು ಕೂಡಾ ಈಗ ಕಾನೂನು ಮತ್ತು ಸುವ್ಯವಸ್ಥೆ ಸೂಕ್ತ ರೀತಿಯಲ್ಲಿ ಜಾರಿಗೊಳಿಸಬಹುದು ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಪೊಲೀಸರಿಂದ ರಕ್ಷಣೆ

ಪೊಲೀಸರಿಂದ ರಕ್ಷಣೆ

ನೈಟ್ ಶಿಫ್ಟ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುವವರು, ವಿಮಾನ ನಿಲ್ದಾಣದಿಂದ ರಾತ್ರಿ ವೇಳೆ ಮುಂಬೈಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಮಾಲ್, ಮಿಲ್ ಕಾಂಪೌಂಡ್ ನಲ್ಲಿ ಸಿಸಿಟಿವಿ ಸಂಖ್ಯೆ ಹೆಚ್ಚಿಸಲಾಗಿದೆ. ಯಾವುದೇ ಸಂಸ್ಥೆ ಹೆಚ್ಚಿನ ಪೊಲೀಸ್ ಭದ್ರತೆ ಅಗತ್ಯವಿದೆ ಎಂದು ಕೋರಿದರೆ, ಪೊಲೀಸ್ ಸಿಬ್ಬಂದಿ ಪೂರೈಸಲು ಸಿದ್ಧ ಎಂದು ಆಯುಕ್ತರು ಹೇಳಿದ್ದಾರೆ.

ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ

ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ

24 ಗಂಟೆ ಮುಂಬೈ ಎಚ್ಚರವಿಡುವ ಸರ್ಕಾರದ ನಡೆ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ಶಿವಸೇನಾ ಪ್ರತಿಕ್ರಿಯಿಸಿ, ಬಿಜೆಪಿಗೆ ಯುವ ಸಮುದಾಯದ ಬಗ್ಗೆ ಕಾಳಜಿಯಿಲ್ಲ. ದೆಹಲಿಯ ಜೆಎನ್ ಯು, ಜಾಮೀಯಾ ಮಿಲಿಯಾದ ವಿದ್ಯಾರ್ಥಿಗಳ ಜೊತೆ ಬಿಜೆಪಿ ಸರ್ಕಾರ ನಡೆದುಕೊಂಡಿದ್ದು ನೋಡಿದರೆ ತಿಳಿಯುತ್ತದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ಜನತೆಯ ಆಶೋತ್ತರ ಈಡೇರಿಸಲು ಬದ್ಧವಾಗಿದೆ ಎಂದು ತನ್ನ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದೆ.

English summary
Thanks to Brihanmumbai Municipal Corporation (BMC) and Mumbai Police's new decision, India's financial capital Mumbai will now be the city that never sleeps as it is back to being the Maximum City in its truest essence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X