ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿಕೆಯಾದ ಸೋಂಕಿತರ ಸಂಖ್ಯೆ: ಮುಂಬೈನಲ್ಲಿ ಮದ್ಯ ನಿಷೇಧ

|
Google Oneindia Kannada News

ಮುಂಬೈ, ಮೇ 6: ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಎರಡೇ ದಿನಗಳ ನಂತರ ಮುಂಬೈನಲ್ಲಿ ಅದನ್ನು ವಾಪಸ್ ಪಡೆಯಲಾಗಿದೆ. ಇಂದಿನಿಂದ ಮುಂಬೈನಲ್ಲಿ ಮತ್ತೆ ಮದ್ಯ ನಿಷೇಧ ಮಾಡಲಾಗಿದೆ.

ಸೋಮವಾರ ಮತ್ತು ಮಂಗಳವಾರ ಮುಂಬೈನಲ್ಲಿಯೂ ಬಾರ್‌ಗಳು ಮುಂದೆ ಸಾಕಷ್ಟು ಜನ ಇದ್ದರು. ದೊಡ್ಡ ದೊಡ್ಡ ಕ್ಯೂಗಳು ಕಂಡು ಬಂದವು. ತಿಂಗಳುಗಳಿಂದ ಮದ್ಯ ಬಿಟ್ಟಿದ್ದ ಪಾನ ಪ್ರಿಯರು ಮದ್ಯ ಖರೀದಿಗೆ ಮುಂದಾಗಿದ್ದರು. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನಲೆ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.

2 ದಿನ ಕಳೆದರೂ ಕಡಿಮೆಯಾಗಲಿಲ್ಲ ಮದ್ಯದಂಗಡಿ ಮುಂದಿನ ಕ್ಯೂ2 ದಿನ ಕಳೆದರೂ ಕಡಿಮೆಯಾಗಲಿಲ್ಲ ಮದ್ಯದಂಗಡಿ ಮುಂದಿನ ಕ್ಯೂ

ಕಳೆದ ಎರಡು ದಿನಗಳಿಂದ ಮುಂಬೈನಲ್ಲಿ ಸೋಂಕಿರತ ಸಂಖ್ಯೆ ಹೆಚ್ಚಾಗಿದೆ. ಬರೋಬ್ಬರಿ 10 ಸಾವಿರ ಗಡಿದಾಟುತ್ತಿದೆ. ಮದ್ಯದಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಿದೆ. ನೂರಾರೂ ಸಂಖ್ಯೆಯ ಜನರು ಒಂದೇ ಕಡೆ ಸೇರುತ್ತಿದ್ದಾರೆ. ಹೀಗಾಗಿ, ಸೋಂಕು ಹೆಚ್ಚಾಗಲು ಇದು ಪ್ರಮುಖ ಕಾರಣವಾಗಿದೆ.

Mumbai Liquor Shops Will Not Be Allowed To Open From Wednesday

ಬೃಹನ್ ಮುಂಬೈ ಮಹಾನಗರ ಪಾಲಿಕೆ ಹೀಗಾಗಿ ಮದ್ಯ ನಿಷೇಧಕ್ಕೆ ಆದೇಶ ಹೊರಡಿಸಿದೆ. ದಿನಸಿ, ತರಕಾರಿ ಹಾಗೂ ಔಷಧಿ ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡಿದೆ. ಅನಗತ್ಯವಾಗಿ ಜನರ ಸಂಚಾರ ನಿಯಂತ್ರಣ ಏರಿದೆ.

ಮಹಾರಾಷ್ಟ್ರ ಇಡೀ ಭಾರತದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ. 15,525 ಜನರಿಗೆ ಸೋಂಕು ಹರಡಿದೆ. 617 ಮಂದಿ ಮರಣ ಹೊಂದಿದ್ದಾರೆ.

English summary
Mumbai Liquor shops will not be allowed to open from Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X