ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ 953 ಕೊರೊನಾ ಸೋಂಕಿತರು ಪತ್ತೆ, ಮಾರ್ಚ್ 2ರ ಬಳಿಕ ಕಡಿಮೆ ಪ್ರಕರಣ

|
Google Oneindia Kannada News

ಮುಂಬೈ, ಮೇ 18: ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 953 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಮಾರ್ಚ್ 2ರ ಬಳಿಕ ಪತ್ತೆಯಾದ ಅತಿ ಕಡಿಮೆ ಪ್ರಕರಣ ಇದಾಗಿದೆ, ಕಳೆದ ಹತ್ತು ವಾರಗಳಿಂದ ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿರಲಿಲ್ಲ.

ಏಪ್ರಿಲ್‌ನಿಂದ ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು, ಮಂಗಳವಾರ 953 ಪ್ರಕರಣಗಳು ಪತ್ತೆಯಾಗಿವೆ.

Corona

ಮಂಗಳವಾರ 44 ಮಂದಿ ಸಾವನ್ನಪ್ಪಿದ್ದಾರೆ, ಮುಂಬೈನಲ್ಲಿ ಪಾಸಿಟಿವಿಟಿ ದರ ಶೇ.5.31ರಷ್ಟಿದೆ. ಏಪ್ರಿಲ್‌ಗೆ ಹೋಲಿಸಿದರೆ ಕಡಿಮೆ ಇದೆ.ಚೇತರಿಕೆ ಪ್ರಮಾಣ ಕೂಡ ಶೇ..93ರಷ್ಟಿದ್ದು ಹೆಚ್ಚಾಗಿದೆ, ಮಾರ್ಚ್ 2 ರಂದು ಮುಂಬೈನಲ್ಲಿ 849 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಮುಂದಿನ ಕೆಲವು ದಿನಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡುಬಂದಿದ್ದರು.

ಮಹಾರಾಷ್ಟ್ರದಲ್ಲಿ ನಿತ್ಯ 50 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿಸಲಾಗುತ್ತಿದೆ, ನಗರಪಾಲಿಕೆಗಳು ನಿತ್ಯ 20 ರಿಂದ 25 ಸಾವಿರ ಪರೀಕ್ಷೆಗಳನ್ನು ಮಾಡುತ್ತಿವೆ.

ಮಹಾರಾಷ್ಟ್ರದಲ್ಲಿ ಕಳೆದ ತಿಂಗಳು 60 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಮಂಗಳವಾರ 28,438 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಸಾವಿನ ಸಂಖ್ಯೆ 679ಇದ್ದು ಆತಂಕ ಮೂಡಿಸಿದೆ.

ಪಾಸಿಟಿವಿಟಿ ದರ ಶೇ.17.2ರಷ್ಟಿದೆ, ಮಂಗಳವಾರ 52,898 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೇತರಿಕೆ ಪ್ರಮಾಣ ಶೇ.90.69ರಷ್ಟಿದೆ. ಪುಣೆಯಲ್ಲಿ ಮಂಗಳವಾರ 3795 ಪ್ರಕರಣಗಳು ಪತ್ತೆಯಾಗಿದ್ದು, 24 ಮಂದಿ ಮೃತಪಟ್ಟಿದ್ದರು, ಇನ್ನು ನಾಸಿಕ್‌ನಲ್ಲಿ 2246 ಮಂದಿ ಪತ್ತೆಯಾಗಿದ್ದು, 37 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

English summary
Mumbai's daily coronavirus case figure has dropped below the 1,000-mark after over 10 weeks. The Maharashtra capital, which had been ravaged by the dangerous second wave of Covid infections in April, on Tuesday logged just 953 cases, lowest since March 2. However, testing has sharply declined compared to the April levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X