ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಡೆಲ್ಟಾ ಪ್ಲಸ್‌ಗೆ ಪ್ರಥಮ ಬಲಿ: ಮಹಾರಾಷ್ಟ್ರದಲ್ಲಿ ಎರಡನೇ ಸಾವು ದಾಖಲು

|
Google Oneindia Kannada News

ಮುಂಬೈ, ಆ. 13: ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರದಿಂದ ಮುಂಬೈ ತನ್ನ ಮೊದಲ ಸಾವನ್ನು ವರದಿ ಮಾಡಿದೆ. 63 ವರ್ಷದ ಮಹಿಳೆಗೆ ಜುಲೈ 21 ರಂದು ಕೊರೊನಾ ವೈರಸ್‌ ಸೋಂಕು ದೃಡಪಟ್ಟಿದ್ದು, ಜುಲೈ 27 ರಂದು ನಿಧನರಾದರು. ಆ ರೋಗಿಯಲ್ಲಿ ಮಧುಮೇಹ ಸೇರಿದಂತೆ ಹಲವಾರು ಇತರೆ ರೋಗಗಳು ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ರತ್ನಗಿರಿಯ 80 ವರ್ಷದ ಮಹಿಳೆ ಸಾವನ್ನಪ್ಪಿದ ನಂತರ ಇದು ಡೆಲ್ಟಾ ಪ್ಲಸ್ ನಿಂದ ಮಹಾರಾಷ್ಟ್ರದ ಎರಡನೇ ಸಾವಾಗಿದೆ ಎಂದು ವರದಿಯು ತಿಳಿಸಿದೆ. ಮುಂಬೈ ಮಹಿಳೆಗೆ ಸಂಪೂರ್ಣವಾಗಿ ಕೋವಿಡ್‌ ಲಸಿಕೆ ನೀಡಲಾಗಿತ್ತು. ಮತ್ತು ನಗರದ ಏಳು ಕೊರೊನಾ ವೈರಸ್‌ ರೋಗಿಗಳಲ್ಲಿ ಈ ಮುಂಬೈ ಮಹಿಳೆಯ ವರದಿಗಳು ಡೆಲ್ಟಾ ಪ್ಲಸ್ ರೂಪಾಂತರವು ಮಹಿಳೆಯಲ್ಲಿತ್ತು ಎಂಬುವುದನ್ನು ದೃಢಪಡಿಸಿದೆ ಎನ್ನಲಾಗಿದೆ.

ಸಿಡ್ನಿ, ಮೊಲ್ಬೋರ್ನ್‌ ಡೆಲ್ಟಾ ದಾಳಿ: ಆಸ್ಟ್ರೇಲಿಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ಸಿಡ್ನಿ, ಮೊಲ್ಬೋರ್ನ್‌ ಡೆಲ್ಟಾ ದಾಳಿ: ಆಸ್ಟ್ರೇಲಿಯಾ ರಾಜಧಾನಿಯಲ್ಲಿ ಲಾಕ್‌ಡೌನ್‌

ಮಹಿಳೆಯ ಮಾದರಿಗಳಿಂದ ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳು ಬುಧವಾರ ಬಂದಿವೆ. ಮುಂಬೈನ ನಾಗರಿಕ ಸಂಸ್ಥೆ ಬಿಎಂಸಿ (ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್) ರಾಜ್ಯ ಆರೋಗ್ಯ ಇಲಾಖೆಯಿಂದ ಡೆಲ್ಟಾ ಪ್ಲಸ್‌ ಪರೀಕ್ಷೆಯ ವರದಿಯನ್ನು ಪಡೆದ ನಂತರ ಏಳು ರೋಗಿಗಳನ್ನು ಸಂಪರ್ಕಿಸಲು ಆರಂಭಿಸಿದೆ.

 Mumbai Records First Death From Delta Plus Covid Variant, Maharashtras second death

ಇನ್ನು ಈ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ವರದಿ ಮಾಡಿದ ಮಹಿಳೆಯ ಇಬ್ಬರು ನಿಕಟ ಸಂಪರ್ಕ ಹೊಂದಿದವಲ್ಲಿ ಕೋವಿಡ್‌ನ ರೂಪಾಂತರ ಡೆಲ್ಟಾ ಪ್ಲಸ್‌ ದೃಢಪಟ್ಟಿದೆ. ಆದರೆ ಈ ಮಹಿಳೆಯು ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿರಲಿಲ್ಲ ಎಂದು ಹೇಳಲಾಗಿದೆ.

ಡೆಲ್ಟಾ ಪ್ಲಸ್‌ ಸೋಂಕಿಗೆ ಬಲಿಯಾದ ಈ ಮಹಿಳೆಯು ಆಮ್ಲಜನಕದ ಬೆಂಬಲದಲ್ಲಿದ್ದಳು ಮತ್ತು ಸ್ಟೀರಾಯ್ಡ್‌ಗಳು ಮತ್ತು ರೆಮ್‌ಡೆಸಿವಿರ್ ಅನ್ನು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೆಲ್ಟಾ ಪ್ಲಸ್ ಡೆಲ್ಟಾದ ರೂಪಾಂತರವಾಗಿದ್ದು, ಭಾರತದಲ್ಲಿ ಮೊದಲು ಪತ್ತೆಯಾದ ಅತ್ಯಂತ ಸಾಂಕ್ರಾಮಿಕ ಕೋವಿಡ್ ರೂಪಾಂತರವಾಗಿದೆ.

ಕೇರಳದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎದುರಾದ 9 ಸವಾಲುಗಳನ್ನು ಗುರುತಿಸಿದ ಕೇಂದ್ರಕೇರಳದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎದುರಾದ 9 ಸವಾಲುಗಳನ್ನು ಗುರುತಿಸಿದ ಕೇಂದ್ರ

ಮಹಾರಾಷ್ಟ್ರ ರಾಜ್ಯ ಸರ್ಕಾರದ ಪ್ರಕಾರ, ಮುಂಬೈನ ಏಳು ಮಾದರಿಗಳ ಜೊತೆಗೆ, ಮಹಾರಾಷ್ಟ್ರದಾದ್ಯಂತ 13 ಹೆಚ್ಚಿನ ಕೋವಿಡ್‌ನ ಡೆಲ್ಟಾ ರೂಪಾಂತರದ ರೂಪಾಂತರ ಡೆಲ್ಟಾ ಪ್ಲಸ್‌ ದೃಢಪಟ್ಟಿದೆ. ಈ ಪೈಕಿ ಮೂರು ಪ್ರಕರಣಗಳು ಪುಣೆಯಲ್ಲಿ, ಎರಡು ಪ್ರಕರಣಗಳು ನಾಂದೇಡ್, ಗೊಂಡಿಯಾ, ರಾಯಗಢ ಮತ್ತು ಪಾಲ್ಘರ್, ಮತ್ತು ಚಂದ್ರಾಪುರ ಮತ್ತು ಅಕೋಲಾದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ ಎಂದು ವರದಿಯು ತಿಳಿಸಿದೆ. ಮಹಾರಾಷ್ಟ್ರದಾದ್ಯಂತ ವರದಿಯಾದ 13 ಡೆಲ್ಟಾ ಪ್ಲಸ್‌ ಪ್ರಕರಣಗಳ ಬಳಿಕ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೋಗಿಗಳ ಸಂಖ್ಯೆ 65 ಕ್ಕೆ ಏರಿದೆ.

 Mumbai Records First Death From Delta Plus Covid Variant, Maharashtras second death

ಕೋವಿಡ್‌ನ ಈ ಡೆಲ್ಟಾ ಪ್ಲಸ್‌ ರೂಪಾಂತರ ಏಳು ಮಕ್ಕಳು ಮತ್ತು ಎಂಟು ಹಿರಿಯ ನಾಗರಿಕರಲ್ಲಿ ಕಂಡುಬಂದಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕೊರೊನಾ ವೈರಸ್‌ ಸೋಂಕಿತ ರೋಗಿಗಳ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಬುಧವಾರ, ಕೇಂದ್ರ ಸರ್ಕಾರವು ದೇಶಾದ್ಯಂತ 86 ಡೆಲ್ಟಾ ಪ್ಲಸ್‌ ಪ್ರಕರಣಗಳು ಪತ್ತೆಯಾಗಿದೆ. ಆದರೆ ಇಲ್ಲಿಯವರೆಗೆ "ಘಾತೀಯ ಏರಿಕೆ" ಇಲ್ಲ ಎಂದು ಹೇಳಿದೆ.

ಡೆಲ್ಟಾ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆಡೆಲ್ಟಾ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ

ಇನ್ನು ಈ ಕೋವಿಡ್‌ನ ಈ ಡೆಲ್ಟಾ ಪ್ಲಸ್‌ ರೂಪಾಂತರ ಪ್ರಕರಣಗಳು ಹೆಚ್ಚಿನವುಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ, ನಂತರ ಮಧ್ಯಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಧಿಕ ಡೆಲ್ಟಾ ಪ್ಲಸ್‌ ಪ್ರಕರಣಗಳು ವರದಿಯಾಗಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಸುಜಿತ್ ಸಿಂಗ್, ಕೇಂದ್ರ ಆರೋಗ್ಯ ಸಚಿವಾಲಯದ ಬ್ರೀಫಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು."ಈ ಡೆಲ್ಟಾ ರೂಪಾಂತರವು ಅದರ ಪ್ರಸರಣದ ಮೂಲಕ, ಯಾವುದೇ ದೊಡ್ಡ ಘಾತೀಯ ಏರಿಕೆಗೆ ಕಾರಣವಾಗಲಿಲ್ಲ," ಎಂದು ಕೂಡಾ ಸುಜಿತ್ ಸಿಂಗ್ ಒತ್ತಿ ತಿಳಿಸಿದ್ದಾರೆ.

ಡೆಲ್ಟಾ ರೂಪಾಂತರವು ಏಪ್ರಿಲ್-ಮೇನಲ್ಲಿ ಕೊರೊನಾವೈರಸ್‌ನ ಮಾರಕ ಎರಡನೇ ಅಲೆಗೆ ಕಾರಣವಾಯಿತು, ಇದು ದೇಶದ ಆರೋಗ್ಯ ಮೂಲಸೌಕರ್ಯವನ್ನು ಮುಳುಗಿಸಿತು ಮತ್ತು ಸಾವಿರಾರು ಜನರು ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಕೋವಿಡ್‌ ಲಸಿಕೆಗಾಗಿ ಪರದಾಡುವ ಪರಿಸ್ಥಿತಿ ಆ ಸಂದರ್ಭದಲ್ಲಿ ಉಂಟಾಗಿತ್ತು.

(ಒನ್‌ಇಂಡಿಯಾ ಸುದ್ದಿ)

English summary
Mumbai has reported its first death from the Delta Plus Covid variant. This is Maharashtra's second death from the Delta Plus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X