ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಿ ಟ್ವಿಂಟಿ 20 ಟೂರ್ನಮೆಂಟ್ ಆಯೋಜನೆಗೆ ಸಿದ್ಧ: ಎಂಸಿಎ

|
Google Oneindia Kannada News

ಮುಂಬೈ, ಸೆ. 20: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಿರುವ ಬಿಸಿಸಿಐಗೆ ದೇಶಿ ಕ್ರಿಕೆಟ್ ಋತು ಆರಂಭಿಸಲು ಒತ್ತಡ ಹೆಚ್ಚಾಗುತ್ತಿದೆ. ಬಿಹಾರ ನಂತರ ಮುಂಬೈ ಕ್ರಿಕೆಟ್ ಕೌನ್ಸಿಲ್ ನ ಪ್ರಮುಖ ಸದಸ್ಯರೊಬ್ಬರು ಮುಂಬೈನಲ್ಲಿ ದೇಶಿ ಟ್ವೆಂಟಿ 20 ಟೂರ್ನಮಂಟ್ -ಮುಷ್ತಾಕ್ ಅಲಿ ಟ್ವೆಂಟಿ-20 ಆಯೋಜಿಸಲು ಅನುಮತಿ ಕೋರಿದ್ದಾರೆ. ಈ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಮೇಲ್ ಬರೆದಿದ್ದಾರೆ.

ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಪೆಕ್ಸ್‌ ಕೌನ್ಸಿಲ್‌ ಸದಸ್ಯ ಹಾಗೂ ಪಿಚ್‌ ಕ್ಯೂರೇಟರ್‌ ನದೀಮ್‌ ಮೆನನ್‌ ಅವರು ಬಿಸಿಸಿಐಗೆ ಮಾಡಿರುವ ಮನವಿಯಲ್ಲಿ ದೇಶಿ ಟೂರ್ನಮೆಂಟ್ ನಡೆಸಲು ಮುಂಬೈ ಸಿದ್ಧವಿದೆ. ಮುಂಬೈನಲ್ಲಿ 6 ಸುಸಜ್ಜಿತ ಕ್ರೀಡಾಂಗಣಗಳಿವೆ. ಕ್ರಿಕೆಟರ್/ ಅಧಿಕಾರಿಗಳು ಉಳಿದುಕೊಳ್ಳಲು ಹೋಟೆಲ್ ವ್ಯವಸ್ಥೆ ಇದೆ. ಎಲ್ಲವೂ ಕೊವಿಡ್ 19 ಆರೋಗ್ಯ ಮಾರ್ಗಸೂಚಿಯಂತೆ ಆಯೋಜನೆ ಮಾಡಲು ಎಂಸಿಎ ಸಿದ್ಧವಿದೆ ಎಂದಿದ್ದಾರೆ.

ಐಪಿಎಲ್ ಮುಗಿದ್ಮೇಲೆ ದೇಶಿ ಕ್ರಿಕೆಟ್ ಶುರು ಮಾಡಲು ಬೇಡಿಕೆ!ಐಪಿಎಲ್ ಮುಗಿದ್ಮೇಲೆ ದೇಶಿ ಕ್ರಿಕೆಟ್ ಶುರು ಮಾಡಲು ಬೇಡಿಕೆ!

2020ರ ಅಖಿಲ ಭಾರತ ಮಹಿಳಾ ಬಿಸಿಸಿಐ ಏಕದಿನ ಟೂರ್ನಿಯನ್ನು ಮುಂಬೈ ಯಶಸ್ವಿಯಾಗಿ ನಡೆಸಿತ್ತು. ಈಗ ಮುಷ್ತಾಕ್‌ ಅಲಿ ಟ್ವೆಂಟಿ-20 ಟೂರ್ನಿಯನ್ನು ಆಯೋಜಿಸುವ ಜವಾಬ್ದಾರಿಯನ್ನು ಮುಂಬೈಗೆ ನೀಡಬೇಕು ಎಂದು ಇಮೇಲ್ ನಲ್ಲಿ ಕೋರಿದ್ದಾರೆ.

Mumbai ready to host Syed Mushtaq Ali trophy - MCA official to Sourav Ganguly

ಆದರೆ, ಯುಎಇಯಲ್ಲಿ ಐಪಿಎಲ್ 13 ಆಯೋಜಿಸಿರುವ ಬಿಸಿಸಿಐ ದೇಶಿ ಟೂರ್ನಿಗಳನ್ನು ಆಯೋಜಿಸುವ ಕುರಿತು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಿರಿಯರ ತಂಡದ ರಣಜಿ ಹಾಗೂ ಮುಷ್ತಾಕ್ ಅಲಿ ಟೂರ್ನಮೆಂಟ್ ನಡೆಸುವ ಬಗ್ಗೆ ಚರ್ಚೆಯಂತೂ ನಡೆದಿದೆ.

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

Recommended Video

Bangalore ಇನ್ನೂ ಕೆಲವು ದಿನ ಮಳೆ ಮುಂದುವರೆಯಲಿದೆ | Oneindia Kannada

ಎಂಸಿಎ ಅಧೀನದಲ್ಲಿ ವಾಂಖೆಡೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಹಾಗೂ ಸಚಿನ್ ತೆಂಡೂಲ್ಕರ್ ಜಿಂಖಾನಾ ಮೂರು ಕ್ರಿಕೆಟ್ ಮೈದಾನಗಳಿವೆ. ಇದಲ್ಲದೆ ನವಿ ಮುಂಬೈನಲ್ಲಿ ಡಿವೈ ಪಾಟೀಲ್ ಸ್ಟೇಡಿಯಂ, ಥಾಣೆಯಲ್ಲಿ ದಾದೋಜಿ ಕೆ ಸ್ಟೇಡಿಯಂ , ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾಕ್ಕೆ ಸೇರಿರುವ ಬ್ರಬೌರ್ನ್ ಸ್ಟೇಡಿಯಂ ಕೂಡಾ ಬಳಕೆ ಮಾಡಬಹುದು ಎಂದು ಎಂಸಿಎ ಹೇಳಿದೆ. ಭಾರತದ ಪ್ರಮುಖ ನಗರಗಳಂತೆ ಮುಂಬೈ ಕೂಡಾ ಕೊರೊನಾವೈರಸ್ ಹೊಡೆತಕ್ಕೆ ಸಿಲುಕಿದೆ. ಈ ಸಮಯಕ್ಕೆ ಒಟ್ಟು 1,84,313 ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, 8.466 ಮಂದಿ ಮೃತಪಟ್ಟಿದ್ದಾರೆ.

English summary
Nadim Memon, the Mumbai Cricket Association Apex Council member, has suggested hosting the entire Syed Mushtaq Ali Trophy T20 tournament in Mumbai, saying in an email to BCCI president Sourav Ganguly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X