ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈಯಲ್ಲಿ ಮುಂದುವರಿದ ಮಹಾಮಳೆ: ನಾಲ್ವರು ಬಲಿ

|
Google Oneindia Kannada News

Recommended Video

ಮುಂಬೈಯಲ್ಲಿ ಮುಂದುವರಿದ ಮಹಾಮಳೆಗೆ ನಾಲ್ವರು ಬಲಿ | Oneindia Kannada

ಮುಂಬೈ, ಜೂನ್ 25: ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಸುರಿದ ಭಾರೀ ಕೆಲವು ಮೂಲಗಳ ಪ್ರಕಾರ 10 ಜನ ಬಲಿಯಾಗಿದ್ದಾರೆ.

ಮುಂಬೈಯಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ನಗರ ಅರ್ಧ ಮುಳುಗಿದಂತಾಗಿದ್ದು, ರಸ್ತೆಯಲ್ಲಿ ಎಲ್ಲೆಲ್ಲೂ ನೀರು ತುಂಬಿಕೊಂಡಿದೆ. ಟ್ರಾಫಿಕ್ ಸಮಸ್ಯೆಯಿಂದ ಜನರು ಪರಿತಪಿಸುವಂತಾಗಿದೆ.

ಮುಂಬೈ ಮಹಾನಗರಿಯಲ್ಲಿ ಆರ್ಭಟಿಸಿದ ಮುಂಗಾರುಮಳೆ: ಇಬ್ಬರು ಬಲಿಮುಂಬೈ ಮಹಾನಗರಿಯಲ್ಲಿ ಆರ್ಭಟಿಸಿದ ಮುಂಗಾರುಮಳೆ: ಇಬ್ಬರು ಬಲಿ

24 ಗಂಟೆಗಳಲ್ಲಿ ಮುಂಬೈಯಲ್ಲಿ 231 ಮಿ.ಮೀ. ಮಳೆಯಾಗಿದ್ದು, ಮುಂಬೈಗೆ ತೆರಳುವ ಮತ್ತು, ಮುಂಬೈಯಿಂದ ಹೊರಡುವ ರೈಲ್ವೇ ಸೇವೆಗಳು ವಿಳಂಬವಾಗಲಿವೆ. ಮುಂಬೈಗೆ ಪ್ರಯಾಣ ಮಾಡುವವರು ತೀರಾ ಅನಿವಾರ್ಯವಲ್ಲದಿದ್ದರೆ ತಮ್ಮ ಪ್ರಯಾಣವನ್ನು ಮುಂದೂಡುವುದು ಒಳಿತು!

Mumbai Rains: many dead, city submerged

ಇಲ್ಲಿನ ಆನಂದಿಲಾಲ್ ಪೊದಾರ್ ಮಾರ್ಗ ಇದ್ದಕ್ಕಿದ್ದಂತೆ ಬಿರುಕುಬಿಟ್ಟಿದ್ದು, ರಸ್ತೆಯ ನಡುವಲ್ಲೇ ಕಂದಕವಾಗಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದ ಪರಿಣಾಮ ಏಳು ಕಾರುಗಳು ಜಕಂ ಆಗಿವೆ. ಒಟ್ಟಿನಲ್ಲಿ ಮುಂಬೈಯ ಈ ದುರವಸ್ಥೆಗೆ ಜನರು ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್ ಅನ್ನು ಬಾಯ್ತುಂಬ ಬೈದುಕೊಳ್ಳುವಂತಾಗಿದೆ.

ಜೂನ್ 24 ರಂದಜು ಮುಂಬೈಯಲ್ಲಿ 24 ಗಂಟೆಗಳಲ್ಲಿ 231.4 ಮಿ.ಮೀ. ಮಳೆಯಾಗಿತ್ತು. ಇದು ಈ ವರ್ಷ ಮುಂಬೈಯಲ್ಲಿ ಸುರಿದ ಅತೀ ಹೆಚ್ಚು ಮಳೆ ಎಂದು ದಾಖಲೆ ಬರೆದಿತ್ತು. ಇಂದು ಸಹ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
A portion of the road at Anandilal Podar Marg, Marine Lines caved in following heavy rainfall in the city. Heavy rain accompanied by thunder and lightning, lashed Mumbai. 4 people died so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X