ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನ ತಾಜ್‌ ಹೋಟೆಲ್‌ಗೆ ಮತ್ತೆ ಬಾಂಬ್ ಬೆದರಿಕೆ ಕರೆ: FIR ದಾಖಲು

|
Google Oneindia Kannada News

ಮುಂಬೈ, ಜುಲೈ 6: ಮುಂಬೈನ ತಾಜ್‌ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮತ್ತೆ ಸ್ಫೋಟದ ಆತಂಕ ಎದುರಾಗಿದೆ.

ತಾಜ್‌ ಹೋಟೆಲ್‌ನಲ್ಲಿ ಉಗ್ರರ ದಾಳಿ ನಡೆದು ಸಾಕಷ್ಟು ವರ್ಷಗಳು ಕಳೆದರೂ ಆ ಭಯ ಜನರಿಂದ ಇನ್ನೂ ದೂರವಾಗಿಲ್ಲ. ತಾಜ್ ಹೋಟೆಲ್ ಗೆ ಬಾಂಬ್ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯೊಬ್ಬರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಮುಂಬೈ ಮೇಲೆ ಉಗ್ರರ ದಾಳಿ; ಕರಾಚಿಯಿಂದ ಬಂತು ಬೆದರಿಕೆ ಕರೆಮುಂಬೈ ಮೇಲೆ ಉಗ್ರರ ದಾಳಿ; ಕರಾಚಿಯಿಂದ ಬಂತು ಬೆದರಿಕೆ ಕರೆ

ಐಪಿಸಿ ಸೆಕ್ಷನ್ 506( ಕ್ರಿಮಿನಲ್ ಉದ್ದೇಶ) 505 ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಕೊಲಾಬಾ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 2008 ನವೆಂಬರ್ 26 ರಂದು ತಾಜ್ ಹೋಟೆಲ್ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಮಾರಣ ಹೋಮ ನಡೆಸಿದ್ದರು.

Mumbai Police Register FIR Over Bomb Threat Call To Taj Hotels

ಕರಾಚಿಯಿಂದ ಕರೆ ಮಾಡುತ್ತಿದ್ದು, ತಾನು ಪಾಕಿಸ್ತಾನದ ಲಷ್ಕರ್ -ಇ- ತೊಯ್ಬಾ ಸಂಘಟನೆಯ ಸದಸ್ಯನೆಂದು ಪರಿಚಯಿಸಿಕೊಂಡಿದ್ದವ್ಯಕ್ತಿ, ಬಾಂದ್ರಾದಲ್ಲಿನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ಹಾಗೂ ಕೊಲಾಬಾದಲ್ಲಿನ ತಾಜ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ. ನಂತರ ಮಂಗಳವಾರ ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು.

ಮತ್ತೆ ಬೆದರಿಕೆ ಕರೆ ಬಂದಿವೆ, ಪ್ರಸ್ತುತ ಟಾಟಾ ಗ್ರೂಫ್ ಪ್ರಾಯೋಜಿತ ಇಂಡಿಯನ್ ಹೋಟೆಲ್ ಕಂಪನಿಯಿಂದ ನಡೆಸಲಾಗುತ್ತಿದ್ದ ಹೋಟೆಲ್ ಗಳು ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆಯನ್ನು ನಿಲ್ಲಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
In FIR has been registered against an unidentified person in connection with a threat call made to Taj Hotel here, police said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X