ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ರೈಲಿನಲ್ಲೇ ಅವಳಿ ಮಕ್ಕಳ ಹೆರಿಗೆ, ದೇವರಂತೆ ಬಂದ ಪೊಲೀಸರು

|
Google Oneindia Kannada News

ಮುಂಬೈ, ಜುಲೈ 16: ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ ನೆರವಾದ ಸಂಭ್ರಮದಲ್ಲಿದ್ದಾರೆ ಸಬ್ ಇನ್ ಸ್ಪೆಕ್ಟರ್ ನಿತಿನ್ ಗೌರ್. ಇಂಥ ಸಹಾಯ ಮಾಡಲು ನನಗೆ ಅವಕಾಶ ಸಿಕ್ಕಿದ್ದು ಅದೃಷ್ಟ ಎಂದು ಕೂಡ ಅವರು ಹೇಳಿದ್ದಾರೆ.

ಅಂದಹಾಗೆ, ಈ ಘಟನೆ ನಡೆದಿದ್ದು ಮುಂಬೈನ ಕಲ್ಯಾಣ್ ರೈಲು ನಿಲ್ದಾಣದಲ್ಲಿ. ತಾಯಿ ಹಾಗೂ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ. "ನನಗೆ ಈ ಬಗ್ಗೆ ಮಾಹಿತಿ ಬಂದ ತಕ್ಷಣ ನಾನು ಮತ್ತು ಇಬ್ಬರು ಮಹಿಳಾ ಕಾನ್ ಸ್ಟೇಬಲ್ ಗಳು ತೆರಳಿದೆವು. ರೈಲ್ವೆ ವೈದ್ಯಕೀಯ ಸಿಬ್ಬಂದಿಗೆ ವಿಷಯ ತಿಳಿಸಿ, ಸಂಬಂಧಪಟ್ಟ ಇತರರಿಗೂ ಮಾಹಿತಿ ನೀಡಿದೆವು. ಸದ್ಯಕ್ಕೆ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ" ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನಿತಿನ್ ಗೌರ್ ತಿಳಿಸಿದ್ದಾರೆ.

 Mumbai police officer helps woman who gave birth to twins in train

ರೈಲ್ವೇ ಪ್ಲಾಟ್ ಫಾರಂನಲ್ಲಿ ಹುಟ್ಟಿದ ಗಂಡು ಮಗುರೈಲ್ವೇ ಪ್ಲಾಟ್ ಫಾರಂನಲ್ಲಿ ಹುಟ್ಟಿದ ಗಂಡು ಮಗು

ಹೆರಿಗೆಯಾದ ಮಹಿಳೆಯ ಅತ್ತೆ- ಮುಶ್ರಫ್ ಜಹಾನ್ ಮಾತನಾಡಿ, ನನ್ನ ಸೊಸೆಯ ನೆರವಿಗೆ ಬಂದ ತಂಡ ಬಹಳ ಸಹಾಯ ಮಾಡಿತು ಎಂದಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಶೇಖ್ ಸಲ್ಮಾ ತಬಸ್ಸುಮ್ ಘಾಟ್ಕೋಪರ್ ನ ನಾರಾಯಣ್ ನಗರ್ ನಿವಾಸಿ. ತನ್ನ ಕುಟುಂಬದ ಜತೆಗೆ ಎಲ್ ಟಿಟಿ- ವಿಶಾಖಪಟ್ಟಣ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಗೌರ್ ಜತೆಗೆ ಆರ್ ಪಿಎಫ್ ನ ಮಹಿಳಾ ಕಾನ್ ಸ್ಟೇಬಲ್ ಗಳಾದ ನೀಲಂ ಗುಪ್ತಾ ಮತ್ತು ಸುರೇಖಾ ಕದಂ ಕಲ್ಯಾಣ್ ರೈಲು ನಿಲ್ದಾಣದಲ್ಲಿ ರೈಲ್ವೆ ವೈದ್ಯಕೀಯ ಸಿಬ್ಬಂದಿಗೆ ನೆರವಾಗಿದ್ದಾರೆ. ಹೆರಿಗೆ ನಂತರ ಶೇಖ್ ಸಲ್ಮಾ ತಬಸ್ಸುಮ್ ಮತ್ತು ಅವರ ಅವಳಿ ಮಕ್ಕಳನ್ನು ರುಕ್ಮಣಿಬಾಯಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅವರಿಗೆ ಸಹಾಯ ಮಾಡಲು ಸಾಧ್ಯವಾಗಿದ್ದಕ್ಕೆ ಹೆಮ್ಮೆ ಪಡುತ್ತೇವೆ ಮತ್ತು ನಾವು ಅದೃಷ್ಟವಂತರು. ಜತೆಗೆ ಆ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂಬುದು ಖುಷಿಯ ಸಂಗತಿ ಎಂದು ಗೌರ್ ಹೇಳಿದ್ದಾರೆ. ಯಾವುದೇ ವೃತ್ತಿಯಲ್ಲಿರಲಿ. ಇಂಥ ಘಟನೆಗಳೇ ನಮ್ಮ ಒಳಗಿನ ಮನುಷ್ಯತ್ವಕ್ಕೆ ಸಮಾಧಾನ- ತೃಪ್ತಿ ನೀಡುತ್ತದೆ. ನಿಮಗೂ ಇಂಥ ಅನುಭವಗಳಾಗಿವೆಯಾ?

English summary
Sub Inspector Nitin Gaur, who along with two RPF lady staff Head Constables helped a woman gave birth to twins in train at Mumbai's Kalyan railway station, has called himself fortunate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X