• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಿಶಾ ಸಾಯುವುದಕ್ಕೂ ಮುನ್ನ ಕರೆ ಮಾಡಿದ್ದು ಯಾರಿಗೆ?

|

ಮುಂಬೈ, ಸೆ. 18: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಸಾಯುವುದಕ್ಕೂ ಮುನ್ನ ಕೊನೆಯ ಬಾರಿ ಕರೆ ಮಾಡಿದ್ದು ಯಾರಿಗೆ ಎಂಬ ಕುತೂಹಲ, ಗೊಂದಲಕ್ಕೆ ಮುಂಬೈ ಪೊಲೀಸರು ತೆರೆ ಎಳೆದಿದ್ದಾರೆ.

ಸಾಯುವುದಕ್ಕೂ ಮುನ್ನ ದಿಶಾ ಅವರು ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 100ಕ್ಕೆ ಡಯಲ್ ಮಾಡಿದ್ದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದನ್ನು ಮುಂಬೈ ಪೊಲೀಸರು ಅಲ್ಲಗೆಳೆದಿದ್ದಾರೆ. ಸಾಯುವುದಕ್ಕೂ ಮುನ್ನ ಟ್ಯಾಲೆಂಟ್ ಮ್ಯಾನೇಜರ್ ದಿಶಾ ಅವರು ತಮ್ಮ ಗೆಳತಿ ಅಂಕಿತಾ ಎಂಬುವರಿಗೆ ಮಾತ್ರ ಕರೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಯುವ ದಿನದಂದು ದಿಶಾ ಲೇಟ್ ನೈಟ್ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುವುದಕ್ಕೂ ಮುನ್ನ ಪೊಲೀಸರಿಗೆ ಹಾಗೂ ಗೆಳೆಯ ರೋಹನ್ ರೈಗೆ ಕರೆ ಮಾಡಿದ್ದರು ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಹೇಳಿದ್ದರು.

ಜುಹು ಪಾರ್ಟಿಯಲ್ಲಿ ತನಗೆ ಸಮಸ್ಯೆಯಾಗಿದೆ ಎಂದು ಪೊಲೀಸರಿಗೆ, ಸುಶಾಂತ್ ಗೂ ಕರೆ ಮಾಡಿದ್ದಳು, ನಂತರ ವಿಷಯ ರಿಯಾಗೂ ತಿಳಿದಿದೆ. ರಿಯಾ ನಂತರ ಮಲಾಡ್ ನಲ್ಲಿರುವ ಯಾರಿಗೂ ಕರೆ ಮಾಡಿದ್ದಾಳೆ ಈ ಬಗ್ಗೆ ಸಿಬಿಐ ಸರಿಯಾಗಿ ವಿಚಾರಿಸುವ ಅಗತ್ಯವಿದೆ. ಕಾಲ್ ರೆಕಾರ್ಡ್ ಈಗಾಗಲೇ ನಾಶ ಪಡಿಸಿರಬಹುದು ಎಂದು ರಾಣೆ ಹೇಳಿದ್ದರು.

   Nepalದ ಹೊಸ ಪುಸ್ತಕಗಳಳಲ್ಲಿ ಭಾರತವನ್ನು ಸೇರಿಸಿಕೊಂಡ ಭೂಪಟ | Oneindia Kannada

   ಜೂನ್ 8 ರಂದು ಮಲಾಡ್ ಸಬ ಅರ್ಬನ್ ಅಪಾರ್ಟ್ಮೆಂಟ್ ನ ಮಹಡಿಯಿಂದ ಕೆಳಗೆ ಜಿಗಿದು ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ, ಈ ಘಟನೆಗೂ ಮುಂಚಿನ ಬೆಳವಣಿಗೆಗಳ ಬಗ್ಗೆ ಎಲ್ಲೂ ದಾಖಲಿಸಿಲ್ಲ ಎಂದು ರಾಣೆ ಆರೋಪಿಸಿದ್ದಾರೆ. ಆದರೆ, ಶಾಸಕರ ಆರೋಪವನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ.

   English summary
   The last call from Disha Salian's phone was made to her friend Ankita. The claims that she tried to dial 100 the last time, is false: Mumbai Police official
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X