ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ನಗರದಲ್ಲಿ ಇನ್ಮುಂದೆ ಮಾಸ್ಕ್ ಧರಿಸದೇ ಓಡಾಡಿದರೇ ಶಿಕ್ಷಾರ್ಹ ಅಪರಾಧ

|
Google Oneindia Kannada News

ಮುಂಬೈ, ಏಪ್ರಿಲ್ 8: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಮುಂಬೈನಲ್ಲಿ ಜನ ತಿರುಗಾಡುವುದನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಂಪೂರ್ಣ ನಿಷೇಧಿಸಿದೆ.

ಒಂದು ವೇಳೆ ಮಾಸ್ಕ್ ಧರಿಸದೇ ಓಡಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಬಿಎಂಸಿ ಇಂದು ಮಹತ್ವದ ಆದೇಶ ಮಾಡಿದೆ.

ಕೊರೊನಾಕ್ಕೆ ಔಷಧಿ: ರಾಮಾಯಣ ಉಲ್ಲೇಖಿಸಿದ ಬ್ರೆಜಿಲ್ ಅಧ್ಯಕ್ಷ..!ಕೊರೊನಾಕ್ಕೆ ಔಷಧಿ: ರಾಮಾಯಣ ಉಲ್ಲೇಖಿಸಿದ ಬ್ರೆಜಿಲ್ ಅಧ್ಯಕ್ಷ..!

ಮುಂಬೈನಲ್ಲಿ ಕೊರೊನಾ ವೈರಸ್ ಸಮುದಾಯ ಹಂತ ತಲುಪಿರುವುದು ದೃಢಪಟ್ಟಿರುವುದರಿಂದ ಮುಂಬೈನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ತುರ್ತು ಕೆಲಸಗಳನ್ನು ಹೊರತುಪಡಿಸಿ ಯಾರೂ ರಸ್ತೆಗಿಳಿಯದಂತೆ ಆದೇಶಿಸಲಾಗಿದೆ. ಮಾಸ್ಕ್ ಇಲ್ಲದೇ ತುರ್ತು ಸೇವೆ ಸಿಬ್ಬಂದಿ ಅಥವಾ ಜನವೂ ಸಹ ತಿರುಗಾಡುವ ಹಾಗಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

No Mask Its Punishable Crime In Mumbai

ಮಹಾರಾಷ್ಟ್ರದಲ್ಲಿ 1000 ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ 756 ಪ್ರಕರಣಗಳು ಮುಂಬೈ ಒಂದರಲ್ಲೇ ಕಂಡು ಬಂದಿವೆ. ಇದರಿಂದ ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

English summary
No Mask Its Punishable Crime In Mumbai ahead of coronavirus outbreak. bmc orders it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X