ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಎನ್‌ಸಿಬಿ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆಗೆ ಜೀವ ಬೆದರಿಕೆ

|
Google Oneindia Kannada News

ಮುಂಬೈ ಆಗಸ್ಟ್ 19: ಮುಂಬೈನ ಮಾಜಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆಗಳು ಬಂದಿವೆ. ಈ ಬಗ್ಗೆ ಅವರು ಗೋರೆಗಾಂವ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ನೌಕರಿ ಪಡೆಯಲು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ಸಮೀರ್ ವಾಂಖೆಡೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಿಂದ ಮುಕ್ತರಾಗಿದ್ದಾರೆ. ಮಹಾರಾಷ್ಟ್ರದ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಯು ತನ್ನ ಆದೇಶದಲ್ಲಿ ಐಆರ್‌ಎಸ್ ಅಧಿಕಾರಿ ಹುಟ್ಟಿನಿಂದ ಮುಸ್ಲಿಂ ಅಲ್ಲ ಮತ್ತು ಅವರು ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ಮಹಾರ್ ಜಾತಿಗೆ ಸೇರಿದವರು ಎಂದು ಸಾಬೀತಾಗಿದೆ ಎಂದು ಹೇಳಿದೆ.

ಆರ್ಯನ್ ಕೇಸ್: ಜಾತಿ ವಿಚಾರಣಾ ಸಮಿತಿಯಿಂದ ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್ಆರ್ಯನ್ ಕೇಸ್: ಜಾತಿ ವಿಚಾರಣಾ ಸಮಿತಿಯಿಂದ ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್

ಸಮಿತಿಯ ಆದೇಶವನ್ನು ಸ್ವೀಕರಿಸಿದ ನಂತರ, ವಾಂಖೆಡೆ ಪೊಲೀಸ್ ಠಾಣೆಗೆ ತೆರಳಿ, ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ವಿರುದ್ಧ ದೂರು ದಾಖಲಿಸಿದರು. ಅಕ್ಟೋಬರ್ 2021 ರಲ್ಲಿ ಮುಂಬೈ ಕ್ರೂಸ್‌ನಲ್ಲಿ ಎನ್‌ಸಿಬಿಯ ಹೈ-ಪ್ರೊಫೈಲ್ ದಾಳಿಯ ನಂತರ ವಾಂಖೆಡೆ ಬೆಳಕಿಗೆ ಬಂದರು. ನಂತರ ಏಜೆನ್ಸಿಯು ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಮತ್ತು 19 ಇತರರನ್ನು ಬಂಧಿಸಿತು ಮತ್ತು ಕೆಲವು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ.

ನವಾಬ್ ಮಲಿಕ್ ಆರೋಪವೇನು?

ನವಾಬ್ ಮಲಿಕ್ ಆರೋಪವೇನು?

ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಾತ್ರವಲ್ಲದೆ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಸಂಬಂಧಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆಂದು ಆರೋಪವಿತ್ತು. ಅಂದು ಎನ್‌ಸಿಬಿ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ತಂಡ ದಾಳಿ ನಡೆಸಿದ ಮುಂಬೈ ಕ್ರೂಸ್‌ನಲ್ಲಿ ಆರ್ಯನ್‌ ಖಾನ್ ಅವರೊಂದಿಗೆ ನವಾಬ್ ಮಲಿಕ್ ಸಂಬಂಧಿಯನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಸಮೀರ್ ವಾಂಖೆಡೆ ನವಾಬ್ ಮಲಿಕ್ ಕೆಂಗಣ್ಣಿಗೆ ಗುರಿಯಾಗಿದ್ದರು. ಡ್ರಗ್ ಪ್ರಕರಣದ ಪರಿಶೀಲನೆಗೆ ಮುಂದಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಹಲವಾರು ಆರೋಪಗಳನ್ನು ನವಾಬ್ ಮಲಿಕ್ ಮಾಡಿದ್ದರು.

ಇವುಗಳಲ್ಲಿ ಜಾತಿ ವಿಚಾರವೂ ಇತ್ತು. 'ಸಮೀರ್ ವಾಂಖೆಡೆ ಹಿಂದೂ ಅಲ್ಲ ಮುಸ್ಲಿಂ. ಉದ್ಯೋಗಕ್ಕಾಗಿ ಅವರು ಜಾತಿಯನ್ನು ಬದಲಾಯಿಸಿಕೊಂಡಿದ್ದಾರೆ. ಸಮೀರ್ ಮುಸ್ಲಿಂ ಎನ್ನಲು ತಮ್ಮ ಬಳಿ ಬಲವಾದ ಸಾಕ್ಷಿಗಳಿವೆ' ಎಂದು ನವಾಬ್ ಜಾತಿ ಪ್ರಮಾಣ ಪತ್ರಗಳನ್ನು ನೀಡಿದ್ದರು. ಹೀಗಾಗಿ ಇದರ ವಿಚಾರಣೆ ಚುರುಕುಗೊಂಡಿತ್ತು. ಸದ್ಯ ಜಾತಿ ವಿಚಾರಣಾ ಸಮಿತಿಯಿಂದ ಸಮೀರ್ ವಾಂಖೆಡೆ ಕ್ಲೀನ್ ಚಿಟ್ ಪಡೆದಿದ್ದಾರೆ.

ಆರ್ಯನ್‌ ಖಾನ್‌ ಪ್ರಕರಣದ ತನಿಖಾಧಿಕಾರಿ ಸಮೀರ್‌ ವಾಂಖೆಡೆ ವರ್ಗಾವಣೆಆರ್ಯನ್‌ ಖಾನ್‌ ಪ್ರಕರಣದ ತನಿಖಾಧಿಕಾರಿ ಸಮೀರ್‌ ವಾಂಖೆಡೆ ವರ್ಗಾವಣೆ

ಸಮೀರ್ ವಾಂಖೆಡೆ ತಾಯಿ ಮುಸ್ಲೀಂ

ಸಮೀರ್ ವಾಂಖೆಡೆ ತಾಯಿ ಮುಸ್ಲೀಂ

ಸಮೀರ್ ವಾಂಖೆಡೆ ತನ್ನ ತಂದೆ ಜ್ಞಾನದೇವ್ ಕಚ್ರೂಜಿ ವಾಂಖೆಡೆ ಹಿಂದೂ ಆಗಿದ್ದು ಅಬಕಾರಿ ಇಲಾಖೆಯಲ್ಲಿ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನಿವೃತ್ತರಾಗಿದ್ದಾರೆ ಎಂದು ಹೇಳಿದ್ದರು. ಸಮೀರ್ ತಾಯಿ ಮದುವೆಗೂ ಮುನ್ನ ಮುಸ್ಲಿಂ ಆಗಿದ್ದರು. 2006 ರಲ್ಲಿ ಸಮೀರ್ ಅವರು ಅವರು ಡಾ. ಶಬಾನಾ ಖುರೇಷಿ ಅವರನ್ನು ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ನಾಗರಿಕ ವಿವಾಹ ಸಮಾರಂಭದಲ್ಲಿ ವಿವಾಹವಾದರು. ಆದರೆ 2016 ರಲ್ಲಿ ಸಮೀರ್ ಅವರ ಪತ್ನಿ ಶಬಾನಾ ಖುರೇಷಿ ಅವರಿಂದ ಸಿವಿಲ್ ನ್ಯಾಯಾಲಯದಿಂದ ವಿಚ್ಛೇದನ ಪಡೆದರು. ನಂತರ ಅವರು 2017 ರಲ್ಲಿ ಶಿಯಾಮತಿ ಕ್ರಾಂತಿ ದೀನಾನಾಥ್ ರೆಡ್ಕರ್ ಅವರೊಂದಿಗೆ ಮದುವೆ ಮಾಡಿಕೊಂಡರು. ವಾಂಖೆಡೆಯ ಮಾಜಿ ಮಾವ ಡಾ.ಜಾಯೆದ್ ಖುರೇಷಿ ಆ ಸಮಯದಲ್ಲಿ ಸಮೀರ್ ಮುಸ್ಲಿಂ ಎಂದು ಹೇಳಿಕೊಂಡಿದ್ದರು. ಸಮೀರ್ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಾರೆ ಮತ್ತು ಅದರ ಎಲ್ಲಾ ಪದ್ಧತಿಗಳನ್ನು ಅನುಸರಿಸುತ್ತಾರೆ ಎಂದು ಅವರು ತಿಳಿದಿದ್ದರು.

'ವಾಂಖೆಡೆ ಹುಟ್ಟಿನಿಂದ ಮುಸಲ್ಮಾನರಲ್ಲ' ವರದಿ

'ವಾಂಖೆಡೆ ಹುಟ್ಟಿನಿಂದ ಮುಸಲ್ಮಾನರಲ್ಲ' ವರದಿ

ವಾಸ್ತವವಾಗಿ ಸಮೀರ್ ವಾಂಖೆಡೆ ಅವರ ತಾಯಿ ಜಾಹಿದಾ ಮುಸ್ಲಿಂ ಆಗಿದ್ದರೆ, ಅವರ ತಂದೆ ದಲಿತರಾಗಿದ್ದರು. ಆರ್ಯನ್ ಪ್ರಕರಣ ಬೆಳಕಿಗೆ ಬಂದಾಗ ಹಲವು ದಲಿತ ಸಂಘಟನೆಗಳು ವಾಂಖೆಡೆ ಜಾತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದವು. ಇದರೊಂದಿಗೆ ಜಾತಿ ವಿಚಾರಣಾ ಸಮಿತಿಗೂ ದೂರು ನೀಡಿದ್ದರು. ಇದಾದ ನಂತರ ವಾಂಖೆಡೆ ಅವರು ತಮ್ಮ ದಾಖಲೆಗಳನ್ನು ಸಮಿತಿಗೆ ತೋರಿಸಿದರು. ವಾಂಖೆಡೆ ಹುಟ್ಟಿನಿಂದ ಮುಸಲ್ಮಾನರಲ್ಲ ಎಂದು ಸಮಿತಿ ತನ್ನ ವಿಚಾರಣಾ ವರದಿಯಲ್ಲಿ ಬರೆದಿದೆ. ಆತ ತನ್ನ ತಂದೆಯೊಂದಿಗೆ ಇಸ್ಲಾಂಗೆ ಮತಾಂತರಗೊಂಡಿದ್ದೂ ಸಾಬೀತಾಗಿಲ್ಲ. ಸಮಿತಿಯ ಪ್ರಕಾರ ಅವರು ಮಹಾರ್-37 ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ಸಾಬೀತಾಗಿದೆ.

ತನಿಖೆಯಲ್ಲಿ ಸಮೀರ್‌ಗೆ ಕ್ಲೀನ್ ಚಿಟ್

ತನಿಖೆಯಲ್ಲಿ ಸಮೀರ್‌ಗೆ ಕ್ಲೀನ್ ಚಿಟ್

ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್‌ನನ್ನು ಎನ್‌ಸಿಬಿ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಬಂಧಿಸಿದಾಗ ಆತನ ಜಾತಿ ಪ್ರಮಾಣ ಪತ್ರದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದರ ತನಿಖೆಯನ್ನು 'ಜಾತಿ ವಿಚಾರಣಾ ಸಮಿತಿ' ಪೂರ್ಣಗೊಳಿಸಿದೆ. ಈ ತನಿಖೆಯಲ್ಲಿ ಸಮೀರ್‌ಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಆತ ಹುಟ್ಟು ಮುಸ್ಲಿಂ ಅಲ್ಲ ಎನ್ನಲಾಗಿದೆ.

English summary
Former NCB Zonal Director, Mumbai Sameer Wankhede has received death threats on social media. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X