ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಮನೆ ಮನೆಗೆ ಮದ್ಯ ಪೂರೈಕೆಗೆ ಅವಕಾಶ

|
Google Oneindia Kannada News

ಮುಂಬೈ, ಮೇ 22: ಮುಂಬೈಯಲ್ಲಿ ಕೊರೊನಾವೈರಸ್ ಹರಡದಂತೆ ಲಾಕ್ಡೌನ್ 4.0ರಲ್ಲೂ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆದರೆ, ಕೆಲವು ವಿನಾಯತಿಗಳನ್ನು ನೀಡಲಾಗಿದ್ದು, ಮುಖ್ಯವಾಗಿ ಆನ್ಲೈಮ್ ಮದ್ಯಪೂರೈಕೆಗೆ ಸರ್ಕಾರದ ಅನುಮತಿ ಸಿಕ್ಕಿದೆ.

ಮದ್ಯವನ್ನು ಹೋಂ ಡೆಲಿವರಿ ಮೂಲಕ ಪೂರೈಕೆ ಮಾಡಲು ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ (ಬಿಎಂಸಿ) ಅನುಮತಿ ನೀಡಿದೆ. ಆದರೆ, ಕಂಟೈನ್ಮೆಂಟ್ ಜೋನ್ ಗಳಲ್ಲಿ ಮದ್ಯ ಪೂರೈಕೆ, ಮದ್ಯ ಸೇವನೆ ಮಾಡುವುದು ನಿಷಿದ್ಧವಾಗಿದೆ. ಕಾನೂನು ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಬಿಎಂಸಿ ಎಚ್ಚರಿಸಿದೆ.

ಸ್ವಿಗ್ಗಿಯಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ ಸ್ವಿಗ್ಗಿಯಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ

ಇದಲ್ಲದೆ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಜಾರಿಗೊಂಡಂತೆ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಯಲ್ಲಿ ಆಲ್ಕೋಹಾಲ್ ಮಾರಾಟಕ್ಕೆ ಅನುವು ನೀಡುವಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಆದರೆ, ಸಿಎಂ ಉದ್ಧವ್ ಠಾಕ್ರೆ ಅವರು ಈ ಮನವಿಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ, ಇಡೀ ರಾಜ್ಯದಲ್ಲಿ ಎಲ್ಲೂ ಕೂಡಾ ಕೌಂಟರ್ ಮೂಲಕ ಮದ್ಯ ಮಾರಾಟ ಮಾಡುವಂತಿಲ್ಲ.

Mumbai: Liquor home delivery allowed in non-containment zones

ಇ- ಕಾಮರ್ಸ್ ವೆಬ್ ತಾಣಗಳನ್ನು ಬಳಸಿ ಆನ್ ಲೈನ್ ಮೂಲಕ ಮದ್ಯವನ್ನು ಮನೆಗೆ ತರಿಸಿಕೊಳ್ಳಬಹುದಾಗಿದೆ. ಮದ್ಯವನ್ನು ಹೋಂ ಡೆಲಿವರಿ ಮಾಡಲು ಜೋಮ್ಯಾಟೋ, ಸ್ವಿಗ್ಗಿ ಈಗಾಗಲೇ ಸಿದ್ಧವಾಗಿವೆ. ಮಹಾರಾಷ್ಟ್ರದಲ್ಲಿ41,642 ಕೊರೊನಾವೈರಸ್ ಸೋಂಕಿತರಿದ್ದು, 1454 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 25,000 ಪ್ರಕರಣಗಳು ದಾಖಲಾಗಿವೆ.

English summary
The Brihanmumbai Municipal Corporation (BMC) on Friday allowed home delivery of liquor in Mumbai, except in containment zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X