ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ನೀರಿನಲ್ಲಿ ಸಿಲುಕಿದ ಪ್ಯಾಸೆಂಜರ್ ರೈಲು: 500 ಪ್ರಯಾಣಿಕರ ರಕ್ಷಣೆ

|
Google Oneindia Kannada News

ಮುಂಬೈ, ಜುಲೈ 27: ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲು ಅತಿಯಾದ ಮಳೆಗೆ ಸಿಲುಕಿ ಮಾರ್ಗಮಧ್ಯದಲ್ಲೇ ನಿಂತಿದೆ. 2 ಸಾವಿರ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ರೈಲು ರೈಲ್ವೆ ಹಳಿಯ ಮೇಲೆಲ್ಲಾ ನೀರು ತುಂಬಿರುವ ಕಾರಣ ಮುಂದೆ ಹೋಗಲಾಗದೆ ನಿಂತಿದೆ.

ಪ್ರಯಾಣಿಕರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್‌ ಮಾಡಲಾಗುತ್ತದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಮುಂಬೈನಿಂದ 100 ಕಿ,ಮೀ ದೂರದಲ್ಲಿರುವ ಬದ್ಲಾಪುರದಲ್ಲಿ ರೈಲು ಮಳೆಯಲ್ಲಿ ಸಿಲುಕಿಕೊಂಡಿದೆ.

ಮುಂಬೈನಲ್ಲಿ ಭರ್ಜರಿ ಮಳೆ:17 ವಿಮಾನಗಳ ದಿಕ್ಕು ಬದಲು ಮುಂಬೈನಲ್ಲಿ ಭರ್ಜರಿ ಮಳೆ:17 ವಿಮಾನಗಳ ದಿಕ್ಕು ಬದಲು

ಎನ್‌ಡಿಆರ್ ಎಫ್ ತಂಡವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಪ್ರಯಾಣಿಕರನ್ನು ಏರ್‌ಲಿಫ್ಟ್‌ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರು ರೈಲಿನಿಂದ ಕೆಳಗಿಳಿಯದಂತೆ ಸೂಚಿಸಲಾಗಿದೆ. ರೈಲು ಸುರಕ್ಷಿತ ಸ್ಥಳವಾಗಿದೆ. ಎನ್‌ಆರ್‌ಎಫ್ ತಂಡ ಏನು ಸೂಚನೆ ಕೊಡುತ್ತದೆ .

Mumbai-Kolhapur Express Train Struck in Heavy Rain

ಶುಕ್ರವಾರ ಮುಂಬೈನಲ್ಲಿ ಭರ್ಜರಿ ಮಳೆಯಾಗಿದ್ದು, ಮುಂಬೈಗೆ ಬರಬೇಕಿದ್ದ ವಿಮಾನವನ್ನು ಅಲ್ಲೇ ಆಸುಪಾಸಿನ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು.

2005ರ ಜುಲೈ 26ರಂದು ಕೂಡ ಇಂಥಹುದೇ ಮಳೆ ದಾಖಲಾಗಿತ್ತು. ಥಾನೆ, ರಾಯ್‌ಗಢ, ಮುಂಬೈ ನಗರದಲ್ಲಿ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬಿಹಾರದಲ್ಲಿ ಪ್ರವಾಹ ಮುಂದುವರೆದಿದೆ.ಇದುವರೆಗೆ 198 ಕ್ಕೂ ಹೆಚ್ಚು ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. 1.17 ಕೋಟಿಯಷ್ಟು ಮಂದಿ ಆಪತ್ತಿನಲ್ಲಿದ್ದಾರೆ.

ಅಸ್ಸಾಂನಲ್ಲಿ 75 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭೂತಾನ್, ಬರ್ಪೇಟಾ, ಬಕ್ಸಾ, ಚಿರಾಗ್, ಧುಬ್ರಿಯಲ್ಲಿ ಭಾರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ವರೆಗೆ ಮಳೆ ಧಾರಾಕಾರವಾಗಿ ಸುರಿದಿದೆ. ಕೇಂದ್ರ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳ ಸಂಪೂರ್ಣವಾಗಿ ಜಲಾವೃತವಾಗಿತ್ತು.

ಎನ್ನುವುದುರ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈಗಾಗಲೇ ಮುಂಬೈಗೆ ಬರುವ ವಿಮಾನಗಳು ಕೂಡ ಪಥ ಬದಲಿಸಿವೆ. ಪ್ರಯಾಣಿಕರಿಗೆ ಬಿಸ್ಕೇಟ್ ಹಾಗೂ ನೀರನ್ನು ಒದಗಿಸಲಾಗುತ್ತಿದೆ. ಎಲ್ಲಾ ಸಬರ್ಬನ್ ರೈಲುಗಳಿಗೂ ಕೂಡ ಅಡಚಣೆ ಉಂಟಾಗಿದೆ. ಬದ್ಲಾಪುರ, ಕಜ್ರತ್, ಕುರ್ಲಾದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಇದೇ ವಾತಾವರಣ ಮುಂದುವರೆಯುವುದಾಗಿ ತಿಳಿಸಿದ್ದಾರೆ. ರೈಲಿನಲ್ಲಿ ಸಿಲುಕಿದ್ದ 500 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Mumbai-Kolhapur Express Train Struck in Heavy Rain with 2000 passengers onboard on Saturday Morning near Badlapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X