ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಮಾತುಂಗ ಕರ್ನಾಟಕ ಸಂಘದ ಕಲೋತ್ಸವ

By Srinath
|
Google Oneindia Kannada News

ಮುಂಬೈ,ಏ. 19: ಮಾತುಂಗ ಕರ್ನಾಟಕ ಸಂಘವು ಇತ್ತೀಚೆಗೆ ಮಹಾನಗರದಲ್ಲಿ ಸುಂದರ ಕಲೋತ್ಸವವನ್ನು ಆಯೋಜಿಸಿತ್ತು. ಪ್ರತಿಷ್ಠಿತ ಕಲಾಭಾರತಿ ವೇದಿಕೆಯಲ್ಲಿ ಭಕ್ತಿ ಪ್ರಾಧಾನ್ಯತೆಯ ಜತೆಗೆ ಹದವಾಗಿ ಬೆರೆತ ಸ್ವರತರಂಗಗಳು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ನೃತ್ಯಾಂಜಲಿ ಫೈನ್ ಆರ್ಟ್ಸ್ ಅಕಾಡೆಮಿ- ಕಂಡೀವಳಿ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು.

ಸುಮಾರು 2 ಗಂಟೆಗಳ ಈ ನೃತ್ಯ-ನಾದ ನಿನಾದವು ಭಕ್ತಿ ವೈಭವಂ ಮತ್ತು ರುದ್ರ ನಾಟ್ಯಂನೊಂದಿಗೆ ಅರ್ಥಗರ್ಭಿತ ಆರಂಭ ಪಡೆಯಿತು. ಸುಖ ಕರತ ಮರಾಠಿ ಆರತಿ ಮತ್ತು ಶ್ರೀ ವಿಘ್ನರಾಜಂ ಹಾಡಿನೊಂದಿಗೆ ಕಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಲಯಬದ್ಧವಾಗಿದ್ದ ಕೋಲಾಟ ಜಾನಪದ ನೃತ್ಯವು ಭರತನಾಟ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಿತು. ಆನಂತರ ತಾಂಡವ ಲಾಸ್ಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು. ಕೊನೆಗೆ, ಕಾರ್ಯಕ್ರಮ ಉತ್ತುಂಗಕ್ಕೇರುತ್ತಿದ್ದಂತೆ ಜುಗಲ್ ಬಂದಿಯೊಂದಿಗೆ ಮುಕ್ತಾಯ ಕಂಡಾಗ ಪ್ರೇಕ್ಷಕರು ಬೇರೆಯದೇ ಲೋಕದಲ್ಲಿದ್ದರು.

ಅಕಾಡೆಮಿಯ ನಿರ್ದೇಶಕರೂ ಮತ್ತು ಗುರುಗಳಾದ ರೇವತಿ ಶ್ರೀನಿವಾಸ ರಾಘವನ್ ಕೊರಿಯಾಗ್ರಫಿ ಮಾಡಿದ್ದರು. ಸತೀಶ್ ಕೃಷ್ಣಮೂರ್ತಿ ಇದಕ್ಕೆ ಸಾಥ್ ನೀಡಿದ್ದರು. ಕೇರಳದ ಶ್ರೇದೇವ ರಾಜಗೋಪಾಲ್ ಅವರ ಹಾಡುಗಾರಿಕೆ, ಸತೀಶ್ ಕೃಷ್ಣಮೂರ್ತಿ ಅವರ ಮೃದಂಗ, ವಯೊಲಿನ್ ಶಿವಕುಮಾರ್ ಅನಂತರಾಮನ್, ಕೊಳಲು ಅತುಲ್ ಶರ್ಮಾ ಮತ್ತು ಘಟಂ ಶಕ್ತಿಧರಂ ಅವರ ಕೈಚಳಕದಲ್ಲಿ ಮೇಳೈಸಿತು. ಒಟ್ಟಾರೆಯಾಗಿ ಜನ ಮಂತ್ರಮುಗ್ಧರಾಗಿ ಕಾರ್ಯಕ್ರಮವನ್ನು ಆಸ್ವಾದಿಸಿದರು.

Mumbai Karnataka Sangh Matunga
English summary
Mumbai Karnataka Sangh Matunga thematic dance enthralls audience. Nrityanjali Fine Arts Academy, Kandivali staged a thematic presentation portraying devotion intertwined with rhythmic technicalities at the prestigious Kala Bharathi platform organized by the Karnataka Sangh, Matunga in the city recently. It was an enthralling performance which held the audience spellbound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X