ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಲಾಕ್ ಡೌನ್: ಮನುಷ್ಯರಿಲ್ಲದ ಮುಂಬೈನಲ್ಲಿ ಪಕ್ಷಿಗಳ ಕಲರವ

|
Google Oneindia Kannada News

ಮುಂಬೈ, ಮೇ.02: ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೂರನೇ ಅವಧಿಯ ಭಾರತ ಲಾಕ್ ಡೌನ್ ಮುಂದುವರಿದಿದೆ. ಮಹಾಮಾರಿಗೆ ಬೆದರಿದ ಜನರು ಮನೆಗಳಲ್ಲಿ ಬಂಧಿಯಾಗಿದ್ದಾರೆ. ಮುಂಬೈನಲ್ಲಿ ಸಾವಿರ ಸಾವಿರ ರಾಜಹಂಸ ಪಕ್ಷಿಗಳು ಸ್ವಚ್ಛಂಧವಾಗಿ ಹಾರಾಡುತ್ತಿವೆ.
ಸದಾ ಜನಜಂಗುಳಿಯಿಂದಲೇ ತುಂಬಿ ತುಳುಕುತ್ತಿದ್ದ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಚಿತ್ರಣ ಬದಲಾಗಿದೆ. ಮುಂಬೈಗೆ ವಲಸೆ ಬಂದಿರುವ ಸಾವಿರಾರು ಸಂಖ್ಯೆಯ ರಾಜಹಂಸ(ಪ್ಲೊಮಿಂಗೋ) ಪಕ್ಷಿಗಳು ಎಲ್ಲರ ಲಕ್ಷ್ಯ ಸೆಳೆಯುತ್ತಿವೆ.

ನಿಟ್ಟುಸಿರುವ ಬಿಡುವ ಸುದ್ದಿ: ಭಾರತದಲ್ಲಿ 10,000 ಸೋಂಕಿತರು ಗುಣಮುಖ!ನಿಟ್ಟುಸಿರುವ ಬಿಡುವ ಸುದ್ದಿ: ಭಾರತದಲ್ಲಿ 10,000 ಸೋಂಕಿತರು ಗುಣಮುಖ!

ಸಾಮಾನ್ಯವಾಗಿ ಸೆಪ್ಟಂಬರ್ ನಿಂದ ಮೇ ಅಂತ್ಯದವರೆಗೂ ರಾಜಹಂಸ ಪಕ್ಷಿಗಳು ಆಹಾರವನ್ನು ಅರಸಿ ವಲಸೆ ಬರುತ್ತವೆ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಹಾಯಕ ನಿರ್ದೇಶಕ ರಾಹುಲ್ ಖೋಟ್ ಮಾಹಿತಿ ನೀಡಿದ್ದಾರೆ.

Mumbai: Flamingos Of Flamingo Birds In A Populated Environment

ಈ ವರ್ಷ ಹೊಸ ದಾಖಲೆ ನಿರ್ಮಾಣ:
ಕಳೆದ ವರ್ಷದಲ್ಲಿ ಸುಮಾರು 1,34,000 ರಾಜಹಂಸ ಪಕ್ಷಿಗಳು ವಲಸೆ ಬಂದಿದ್ದು ದಾಖಲೆಯಾಗಿತ್ತು. ಆದರೆ ಭಾರತ ಲಾಕ್ ಡೌನ್ ನಡುವೆ ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬರುವ ನಿರೀಕ್ಷೆಯಿದೆ ಎಂದು ರಾಹುಲ್ ಖೋಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಲಾಕ್ ಡೌನ್ ಗಿಂತಲೂ ಮೊದಲೇ 1,25,000 ರಾಜಹಂಸ ಪಕ್ಷಿಗಳು ವಲಸೆ ಬಂದಿರುವ ಬಗ್ಗೆ ಅಂಕಿ-ಅಂಶಗಳಿವೆ. ಕಳೆದ ಮಾರ್ಚ್.25ರ ಬಳಿಕ ಭಾರತ ಲಾಕ್ ಡೌನ್ ನಿಂದ ಜನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ಹೆಚ್ಚು ಹೆಚ್ಚು ಪಕ್ಷಿಗಳು ವಲಸೆ ಬಂದಿದ್ದು, ಮೇ ಅಂತ್ಯದ ವೇಳೆಗೆ ಕಳೆದ ವರ್ಷದ ದಾಖಲೆಯನ್ನು ಮೀರಿಸುವ ಮಟ್ಟಕ್ಕೆ ಪಕ್ಷಿಗಳು ವಲಸೆ ಬಂದಿರುತ್ತವೆ ಎಂದು ಅಂದಾಜಿಸಲಾಗಿದೆ.

Mumbai: Flamingos Of Flamingo Birds In A Populated Environment
ಮುಂಬೈನಲ್ಲಿ ವಾಯು ಗುಣಮಟ್ಟ ಈ ಹಿಂದಿಗಿಂತಲೂ ಬಲು ಉತ್ತಮವಾಗಿರುವುದು ವಾಯು ಗುಣಮಟ್ಟ ಪರೀಕ್ಷೆಯಲ್ಲಿ ದಾಖಲಾಗಿದೆ. ಮನುಷ್ಯ ಜಂಗುಳಿ ಇಲ್ಲದ ಪರಿಸರದಲ್ಲಿ ಪ್ರಾಣಿಗಳು ಸ್ವಚ್ಛಂಧವಾಗಿ ನಲಿಯುತ್ತಿವೆ. ವರ್ಷದಲ್ಲೇ ಮೊದಲ ಬಾರಿಗೆ ನವದೆಹಲಿಯ ಗಂಗಾ ನದಿಯಲ್ಲಿ ಡಾಲ್ಫಿನ್ ಗಳು ಕಾಣಿಸಿಕೊಂಡಿವೆ.
English summary
Mumbai: Flamingos Of Flamingo Birds In A Populated Environment. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X