ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ವರ್ಷಗಳ ನಂತರ ಪಾಕ್ ಜೈಲಿಂದ ಬಿಡುಗಡೆಯಾದ ಮುಂಬೈ ಎಂಜಿನಿಯರ್

|
Google Oneindia Kannada News

ಮುಂಬೈ, ಡಿಸೆಂಬರ್ 18: ಗೂಢಚಾರಿಕೆ ಆರೋಪದಲ್ಲಿ 6 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ ಮುಂಬೈನ ವ್ಯಕ್ತಿಯೊಬ್ಬರು ಬಿಡುಗಡೆಯಾಗಿದ್ದು, ಮಂಗಳವಾರ ಮನೆಗೆ ಮರಳಲಿದ್ದಾರೆ ಎಂದು ಮುಂಬೈನ ಹೋರಾಟಗಾರರೊಬ್ಬರು ತಿಳಿಸಿದ್ದಾರೆ.

"ಹೌದು, ಇದು ನಿಜವಾಗಲೂ ದೊಡ್ಡ ಸುದ್ದಿ. ಹಮೀದ್ ನೆಹಾಲ್ ಅನ್ಸಾರಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಮಂಗಳವಾರ ಮಧ್ಯಾಹ್ನ ವಾಘಾ ಗಡಿಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ" ಎಂದು ಪಾಕಿಸ್ತಾನ್-ಇಂಡಿಯಾ ಪೀಪಲ್ಸ್ ಫೋರಂ ಫಾರ್ ಪೀಸ್ ಅಂಡ್ ಡೆಮಾಕ್ರಸಿಯ ಪ್ರಧಾನ ಕಾರ್ಯದರ್ಶಿ ಜತಿನ್ ದೇಸಾಯಿ ಐಎಎನ್ ಎಸ್ ಗೆ ತಿಳಿಸಿದ್ದಾರೆ.

ಪಾಕ್ ಜೈಲಿನಲ್ಲಿ 36 ವರ್ಷ ಇದ್ದು ಬಂದು, ಮತ ಚಲಾಯಿಸಿದರುಪಾಕ್ ಜೈಲಿನಲ್ಲಿ 36 ವರ್ಷ ಇದ್ದು ಬಂದು, ಮತ ಚಲಾಯಿಸಿದರು

ಅನ್ಸಾರಿ ಕುಟುಂಬದ ಸದಸ್ಯರು, ತಂದೆ ನೆಹಾಲ್, ತಾಯಿ ಫೌಜಿಯಾ ವಾಘಾ ಗಡಿಯಲ್ಲಿ ಹಾಜರಿದ್ದು, ದೇಶಕ್ಕೆ ಬರಮಾಡಿಕೊಂಡಿದ್ದಾರೆ. ಮೂವತ್ಮೂರು ವರ್ಷದ ಎಂಜಿನಿಯರ್ ಅನ್ಸಾರಿ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪ ಹೊರಿಸಿತ್ತು ಪಾಕಿಸ್ತಾನ. ಕಾನೂನು ಬಾಹಿರವಾಗಿ ದೇಶ ಪ್ರವೇಶ, ದೇಶವಿರೋಧಿ ಕೃತ್ಯಗಳಲ್ಲಿ ಭಾಗಿ, ದಾಖಲೆ ತಿದ್ದಿರುವ ಆರೋಪದಲ್ಲಿ ಅನ್ಸಾರಿ ಅವರನ್ನು ಜೈಲಿಗೆ ಕಳುಹಿಸಿತ್ತು.

Mumbai engineer released from Pakistan jail after 6 years

ನವೆಂಬರ್ 2012ರಲ್ಲಿ ಮುಂಬೈ ಬಿಟ್ಟಿದ್ದ ಅನ್ಸಾರಿ ಕೆಲಸದ ಸಲುವಾಗಿ ಕಾಬೂಲ್ ಗೆ ತೆರಳಿದ್ದರು. ಆದರೆ ನಂತರ ಅವರು ನಾಪತ್ತೆಯಾದ ಬಗ್ಗೆ ವರದಿ ಆಗಿತ್ತು. ಪಾಕಿಸ್ತಾನಿ ಯುವತಿ ಜತೆಗೆ ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಬೆಳೆಸಿದ್ದ ಆತ, ಆಕೆಯನ್ನು ಬಲವಂತದ ಮದುವೆಯಿಂದ ತಪ್ಪಿಸುವ ಸಲುವಾಗಿ ಪಾಕಿಸ್ತಾನದ ಖೈಬರ್ ಪಂಖ್ತುವಾದ ಕೋಹತ್ ಗೆ ತೆರಳಿದ್ದ ಬಗ್ಗೆ ವರದಿಯಾಗಿದೆ.

English summary
Hamid Nehal Ansari, Mumbai man, who spent around six years in a Pakistani jail on espionage charges, has been released and will return home on Tuesday, an activist in Mumbai said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X